ಪ್ರಯಾಗ್ರಾಜ್ : ಮಹಾಕುಂಭಮೇಳದ ಸಮಯದಲ್ಲಿ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಮಧ್ಯಪ್ರದೇಶದ ಯುವತಿ ಮೊನಾಲಿಸಾ ಭೋಸ್ಲೆ, ಈ ಬಾರಿ ಗಂಭೀರ ವಿವಾದದ ನಡುವೆ ಮತ್ತೆ ಸುದ್ದಿಯಲ್ಲಿದ್ದಾರೆ.
ಮೊನಾಲಿಸಾ ಇತ್ತೀಚೆಗೆ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರವಾದ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತು ಅವರು ಹಂಚಿಕೊಂಡಿರುವ ವಿಷಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
ಸನೋಜ್ ಮಿಶ್ರಾ ಅವರು ತಮಗೆ ವೃತ್ತಿಜೀವನದ ಆಮಿಷವೊಡ್ಡಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಮೊನಾಲಿಸಾ ದೂರಿದ್ದಾರೆ. ಕೇವಲ ನಿರ್ದೇಶಕರು ಮಾತ್ರವಲ್ಲದೆ, ಈ ವಿಚಾರದಲ್ಲಿ ತಮ್ಮ ಸ್ವಂತ ಕುಟುಂಬದವರೂ ತಮಗೆ ಬೆಂಬಲ ನೀಡಲಿಲ್ಲ ಮತ್ತು ಅವರ ವಿರುದ್ಧವೂ ಕೆಲವು ಆಘಾತಕಾರಿ ವಿಷಯಗಳನ್ನು ಮೊನಾಲಿಸಾ ಬಹಿರಂಗಪಡಿಸಿದ್ದಾರೆ. ಈ ಘಟನೆಗಳಿಂದ ತಾವು ತೀವ್ರ ಮಾನಸಿಕ ವೇದನೆ ಅನುಭವಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.








