ನವದೆಹಲಿ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ನಡೆದಂತ ಹನುಮಧ್ವಜ ವಿವಾದದ ಸಂದರ್ಭದಲ್ಲಿನ ಪ್ರತಿಭಟನೆಯಲ್ಲಿ ಕೇಸರಿ ಶಾಲು ಹಾಕಬಾರದಿತ್ತು ಎಂಬುದಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹೆಚ್.ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದಿತ್ತು. ಅದರ ಬದಲಾಗಿ ನಮ್ಮ ಪಕ್ಷದ ಶಾಲು ಹಾಕಬಹುದಾಗಿತ್ತು ಎಂಬುದಾಗಿ ತಿಳಿಸಿದ್ದಾರೆ.
ಮೈತ್ರಿ ಬಳಿಕ ಒಂದುಗೂಡಿ ಕೆಲಸ ಮಾಡ್ತಿದ್ದೇವೆ. ಇಬ್ಬರು ಸೇರಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮಂಡ್ಯದಲ್ಲಿನ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಂತ ಕುಮಾರಸ್ವಾಮಿಗೆ ಯಾರೋ ಬಂದು ಕೇಸರಿ ಶಾಲು ಹಾಕಿರ್ತಾರೆ. ಅವರೇ ಏನು ಹಾಕಿರೋದಿಲ್ಲ ಎಂದರು.
ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದರ ಬಗ್ಗೆ ದೊಡ್ಡ ವ್ಯಾಖ್ಯಾನ ಮಾಡೋ ಅಗತ್ಯವಿಲ್ಲ. ಕೇಸರಿ ಶಾಲು ಬದಲು ನಮ್ಮ ಪಕ್ಷದ ಶಾಲು ಹಾಕಬಹುದಿತ್ತು ಎಂದರು.
ನಾನು ಯಾವತ್ತೂ ಕೇಸರಿ ಶಾಲು ಹಾಕೋದಿಲ್ಲ. ನಾನು ಖಂಡಿತವಾಗಿ ಕೇಸರಿ ಶಾಲು ಹಾಕಲ್ಲ ಎಂಬುದಾಗಿ ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸ್ಪಷ್ಟ ಪಡಿಸಿದರು.
‘ಕಾಂಗ್ರೆಸ್ ಶಾಸಕ ಬಾಲಕೃಷ್ಣ’ ವಿರುದ್ಧ ‘ರಾಜ್ಯ ಚುನಾವಣಾ ಆಯೋಗ’ಕ್ಕೆ ‘ನಿಖಿಲ್ ಕುಮಾರಸ್ವಾಮಿ’ ದೂರು
BREAKING : ಜಾರ್ಖಂಡ್ ಮಾಜಿ ಸಿಎಂ ‘ಹೇಮಂತ್ ಸೊರೆನ್’ 5 ದಿನ ‘ED ಕಸ್ಟಡಿ’ಗೆ ನೀಡಿದ ಕೋರ್ಟ್