ತುಮಕೂರು: ಕುಮಾರಸ್ವಾಮಿ ಮಗಳ ವಯಸ್ಸಿನವಳನ್ನು ಮದುವೆಯಾಗಿದ್ದಾರೆ, ಅವರ ದಾರಿಯಲ್ಲೇ ಮಕ್ಕಳು ನಡೆಯುತ್ತಿದ್ದಾರೆ ಅಂತ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ವ್ಯಂಗ್ಯವಾಡಿದ್ದಾರೆ.
ಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪಾತ್ರ ಇದೆ ಎಂಬ ವಿಚಾರಕ್ಕೆ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ಎಚ್ಡಿ ಕುಮಾರಸ್ವಾಮಿ ಯಾವ ಒಳ್ಳೆಯ ವ್ಯಕ್ತಿ, ತನ್ನ ಮಗಳ ವಯಸ್ಸಿನವಳನ್ನು ಮದುವೆಯಾಗಿದ್ದಾರೆ. ಮದುವೆಯಾಗಿ ಮಗು ಆದ ಮೇಲೆ ಅವರನ್ನು ಕೈ ಬಿಟ್ಟರು. ಇವರು ನಡೆದ ದಾರಿಯಲ್ಲೇ ಅವರ ಮಕ್ಕಳು ನಡೆಯೋದು ಅಂತ ಅವರು ಹೇಳಿದರು. ಇನ್ನೂ ಇದೇ ವೇಳೇ ಅವರು ಮಾತನಾಡುತ್ತ, ಡಿಕೆ ಶಿವಕುಮಾರ್ ಯಾವ ಆ್ಯಂಗಲ್ನಲ್ಲಿ ಪೆನ್ಡ್ರೈವ್ ಹಂಚಿಕೆ ಮಾಡಿದ್ದಾರೆ ಅಂತಾ ಹೇಳ್ತಾರೆ. ದೇವರಾಜೇಗೌಡರು ಆರು ತಿಂಗಳ ಹಿಂದೆಯೇ ಕುಮಾರಸ್ವಾಮಿಯವರಿಗೆ, ಎಚ್ಡಿ ದೇವೇಗೌಡರಿಗೆ ಅಮಿತ್ ಶಾಗೆ ಎಲ್ಲರಿಗೂ ಕಳಿಸಿರುವುದಾಗಿ ಹೇಳಿದ್ದು, ಕುಮಾರಸ್ವಾಮಿ ಸೃಷ್ಟಿ ಮಾಡಿರುವ ಬಯಲು ನಾಟಕ ಎಂದು ಹೇಳಿದರು.