ವಿಜಯನಗರ: ಜಿಲ್ಲೆಯ ಕೂಡ್ಲಿಗೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಮಂಜುನಾಥ್ ಎಂಬುವರು ಕೆ ಎಸ್ ಆರ್ ಟಿ ಸಿ ಚಾಲಕನ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಅವರ ವಿರುದ್ಧ ಅವರೇ ಕಾರ್ಯನಿರ್ವಹಿಸುತ್ತಿದ್ದಂತ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಅಮಾನತುಗೊಳಿಸಿ ವಿಜಯನಗರ ಎಸ್ಪಿ ಆದೇಶಿಸಿದ್ದಾರೆ.
ಇಂದು ಆದೇಶ ಹೊರಡಿಸಿರುವಂತ ವಿಜಯನಗರ ಪೊಲೀಸ್ ಅಧೀಕ್ಷಕರು, ಕೂಡ್ಲಿಗಿ ಪೊಲೀಸ್ ಠಾಣೆ, ವಿಜಯನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ .ಮಂಜುನಾಥ, ಸಿಹೆಚ್‌ಸಿ-136 ಆದ ನೀವು ಶಿಸ್ತು ಇಲಾಖೆಯ ನಿಯಮಗಳನುಸಾರವಾಗಿ ಹಾಗೂ ಪ್ರಾಮಾಣಿಕವಾಗಿ ಶಿಸ್ತು ಬದ್ಧತೆಯಿಂದ ಕೆಲಸ ನಿರ್ವಹಿಸುವುದು ನಿಮ್ಮ ಆಧ್ಯ ಕರ್ತವ್ಯವಾಗಿರುತ್ತದೆ ಎಂದಿದ್ದಾರೆ.
ದಿನಾಂಕ:07-08-2025 ರಂದು ಹರಿಹರದಿಂದ ಬಳ್ಳಾರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ನಂ. ಕೆಎ 17 ಎಫ್ 1483 ನೇದ್ದರ ಚಾಲಕರಾದ ರಾಮಲಿಂಗಪ್ಪ ಅವರು ಚಲಾಯಿಸುತ್ತಿದ್ದ ಬಸ್‌ನ್ನು ತಡೆದು, ಕಂಡಕ್ಟರ್ ಅವರನ್ನು ಅವಾಚ್ಯವಾಗಿ ಬೈಯುತ್ತಾ, ವಾದ ವಿವಾದವನ್ನು ಮಾಡಿ, ಕರ್ತವ್ಯನಿರತ ಬಸ್ ಚಾಲಕನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿರುತ್ತೀರಿ, ಹಲ್ಲೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕು ಹರಿದಾಡಿರುವುದು ಅಲ್ಲದೇ ದಿನಪತ್ರಿಕೆಯಲ್ಲಿಯೂ ಸಹಾ ವರದಿಯಾಗಿರುತ್ತದೆ. ಈ ಕುರಿತು ನಿಮ್ಮ ವಿರುದ್ಧ ಕೂಡ್ಲಿಗಿ ಠಾಣೆಯಲ್ಲಿ ಗುನ್ನೆ ನಂ.135/2025 ಕಲಏ.126(2), 352, 132, 118(1), 133 ಬಿಎನ್‌ಎಸ್-23 ರಡಿಯಲ್ಲಿ ದಿನಾಂಕ:07-08-2025 ಪ್ರಕರಣ ದಾಖಲಾಗಿರುತ್ತದೆ. ನೀವು ಶಿಸ್ತಿನ ಇಲಾಖೆಯಲ್ಲಿ ಇದ್ದು, ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳದೇ, ಬಸ್ ಚಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿ, ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ಆರವ, ತಾತ್ಸಾರ ಮತ್ತು ಕೀಳು ಮನೋಭಾವ ಮೂಡುವಂತೆ ಮಾಡಿ, ನಿಮ್ಮ ಕರ್ತವ್ಯದಲ್ಲಿ ಆಶಿಸ್ತಿ ಮತ್ತು ದುರ್ನಡತೆಯನ್ನು ಪ್ರದರ್ಶಿಸಿರುವುದು ಉಲ್ಲೇಖಿತ ವರದಿಯಲ್ಲಿ ಕಂಡುಬಂದಿರುತ್ತದೆ.
ಆದ್ದರಿಂದ, ಸದರಿ ಆರೋಪದ ಮೇರೆಗೆ ಇಲಾಖಾ ಶಿಸ್ತುಕ್ರಮ ಜರುಗಿಸಲು ನಿರ್ಧರಿಸಿ, ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳು-1965 (ತಿದ್ದುಪಡಿ 1989), ನಿಯಮ 5 ರ ಮೇರೆಗೆ ಇರುವ ಅಧಿಕಾರವನ್ನು ಚಲಾಯಿಸಿ, ಮಂಜುನಾಥ, ಸಿಹೆಚ್-136, ಕೂಡ್ಲಿಗಿ ಪೊಲೀಸ್ ರಾಣೆ ರವರನ್ನು ತಕ್ಷಣದಿಂದ ಜಾರಿಗೆ ಬರುವಯ ಸೇವೆಯಿಂದ ಆಮಾನತ್ತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
1].ಆಮಾನತ್ತಿನ ಮೊದಲನೆಯ 6 ತಿಂಗಳ ಅವಧಿಯಲ್ಲಿ ನೀವು ಕೆಸಿಎಸ್‌ಆರ್ 1958 ರ ನಿಯಮ 98 ರ ಅನ್ವಯ ಲಭ್ಯವಿರುವ ಜೀವನಾಧಾರ ಭತ್ಯೆ ಮತ್ತು ಇತರ ಭತ್ಯೆಗಳನ್ನು ಪಡೆಯಲು ಆರ್ಹರಿರುತ್ತೀರಿ.
2].ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ 1963 ರ ಕಲಂ 14 ಹಾಗೂ ಕೆಸಿಎಸ್‌ಆರ್ 1958 ರ ನಿಯಮ 104 ರ ಆನ್ವಯ ನೀವು ಅಮಾನತ್ತಿನ ಪೂರ್ವದಲ್ಲಿ ಪೂರ್ವದಲ್ಲಿ ಯಾರ ಆಧೀನದಲ್ಲಿದ್ದಿರೋ ಅಮಾನತ್ತಿನ ಅವಧಿಯಲ್ಲಿಯೂ ಸಹ ಅವರ ಆಧೀನದಲ್ಲಿರುತ್ತೀರಿ.
3].ಅಮಾನತ್ತಿನ ಅವಧಿಯಲ್ಲಿ ಸ್ವಂತವಾಗಿ ಬೇರೆ ಯಾವ ಉದ್ಯೋಗ ಅಥವಾ ವ್ಯಾಪಾರ ಮಾಡಬಾರದು. ಹಾಗೇನಾದರೂ ಮಾಡಿದ್ದಲ್ಲಿ ದುರ್ನಡತೆಯ ಆರೋಪಕ್ಕೆ ಗುರಿ ಮಾಡಿ, ಉಗ್ರ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು, ಆದ್ದರಿಂದ, ಜೀವನಾಧಾರ ಭತ್ಯೆ ಪಡೆಯುವ ಮುನ್ನ, ಹಿಂದಿನ ತಿಂಗಳಲ್ಲಿ ಬೇರೆ ಯಾವುದೇ ಉದ್ಯೋಗ ಅಥವಾ ವ್ಯಾಪಾರ ಮಾಡಿರುವುದಿಲ್ಲ ಎಂಬುದಾಗಿ ಪ್ರಮಾಣ ಪತ್ರವನ್ನು ಜಿಲ್ಲಾ ಪೊಲೀಸ್ ಕಛೇರಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
4].ಅಮಾನತ್ತಿನ ಅವಧಿಯಲ್ಲಿ ಕೇಂದ್ರಸ್ಥಾನ ಬಿಟ್ಟು ಹೋಗಬಾರದು. ಹೋಗುವುದಾದರೆ, ನೀವು ಾರ ಆಧೀನದಲ್ಲಿರುವಿರೋ ಅವರಿಗೆ ವಿಳಾಸ ಕೊಟ್ಟು ಕೇಂದ್ರಸ್ಥಾನ ಬಿಡತಕ್ಕದ್ದು ಎಂದು ತಿಳಿಸಿದ್ದಾರೆ.
ದೇಶದಲ್ಲಿ 334 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದಲೇ ತೆಗೆದ ಚುನಾವಣಾ ಆಯೋಗ
ಬೆಂಗಳೂರಲ್ಲಿ ಮರದ ಕೊಂಬೆ ಮುರಿದು ವೃದ್ಧನ ಸೊಂಟದ ಮೂಳೆ ಮುರಿತ : ‘BBMP’ ಸಿಬ್ಬಂದಿ ವಿರುದ್ಧ ‘FIR’ ದಾಖಲು