ಬೆಂಗಳೂರು: ನಗರದ ಜಾಲಹಳ್ಳಿ ಕ್ರಾಸ್ ನಲ್ಲಿರುವಂತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಲಗ್ಗೆರೆಯ ಲವ -ಕುಶ ನಗರದಲ್ಲಿರುವಂತ ಕಲಾ ಮಂಟಪ ಡ್ಯಾನ್ಸ್ ಸ್ಕೂಲ್ ನಿಂದ ರಂಗಪ್ರವೇಶ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಮಾರಿ ಕೌಸ್ತುಭ ಪಿ.ಸಿ ಅವರ ನೃತ್ಯ ವೈಭವ ನೆರೆದಿದ್ದಂತ ಕಲಾ ಪ್ರೇಮಿಗಳ ಗಮನ ಸೆಳೆಯಿತು.
ಕಲಾ ಮಂಟಪ ಡ್ಯಾನ್ಸ್ ಸ್ಕೂಲ್ ನಿಂದ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ನಲ್ಲಿರುವಂತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹೊಸಬರಿಗೆ ರಂಗಪ್ರವೇಶ, ಹಳೆಯ ವಿದ್ಯಾರ್ಥಿಗಳಿಗೆ ಕ್ಲಾಸಿಕಲ್ ನೃತ್ಯ ಕಾರ್ಯಕ್ರಮವನ್ನು ಕೋರಿಯೋಗ್ರಾಫರ್ ಬಿನು ತಾಗಿನ್ ಅವರು ಆಯೋಜಿಸಿದ್ದರು. ಈ ರಂಗಪ್ರವೇಶ ಕಾರ್ಯಕ್ರಮದಲ್ಲಿ ಕು.ಕೌಸ್ತುಭ ಪಿ.ಸಿ ಅವರು ನಮಾಮಿ ನಮಾಮಿ, ಐಗಿರಿ ನಂದಿನಿ, ಶಿವತಾಂಡವ ಸೇರಿದಂತೆ ವಿವಿಧ ಹಾಡುಗಳಿಗೆ ನೃತ್ಯ ಮಾಡಿ ನೆರೆದಿದ್ದವರನ್ನು ರಂಜಿಸಿದರು.
ಕು.ಕೌಸ್ತುಭ ಪಿ.ಸಿ ಬಗ್ಗೆ
ಬೆಂಗಳೂರಿನ ಲಗ್ಗೆರೆಯ ಲವ-ಕುಶ ನಗರದಲ್ಲಿರುವಂತ ಅಶ್ವಿನಿ ಪಬ್ಲಿಕ್ ಶಾಲೆಯಲ್ಲಿ ಕು.ಕೌಸ್ತುಭ ಪಿ.ಸಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ನೃತ್ಯವನ್ನು ಕಲಾ ಮಂಟಪ ಡ್ಯಾನ್ಸ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾರೆ. ಅಲ್ಲದೇ ಇಂಟರ್ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಕಾಂಫ್ಯೂಟೇಷನ್ ಗೆ ಆಯ್ಕೆಯಾಗಿದ್ದಾರೆ.
ಇದಲ್ಲದೇ ಸಂಗೀತವನ್ನು ಪ್ರಸಿದ್ಧ ಕನ್ನಡದ ಗೀತರಚನಾಕಾರ, ನಾದಬ್ರಹ್ಮ ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ ಅವರ ಸಂಗೀತ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಈಗಾಗಲೇ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲೂ 15ಕ್ಕೂ ಹೆಚ್ಚು ಹಾಡಿಗೆ ಸೋಲೋ ನೃತ್ಯದ ಪ್ರದರ್ಶನ ನೀಡಿರೋ ಕುಮಾರಿ ಕೌಸ್ತುಭ, 10 ಗ್ರೂಪ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಕಾರಣದಿಂದ ಹಲವು ಪ್ರಶಸ್ತಿ, ಸನ್ಮಾನಕ್ಕೆ ಈ ಕಿರಿಯ ವಯಸ್ಸಿನಲ್ಲಿಯೇ ಭಾಜನರಾಗಿದ್ದಾರೆ.
ಬಿನು ತಾಗಿನ್ ಅವರ ಕಲಾ ಮಂಟಪ ಡ್ಯಾನ್ಸ್ ಸ್ಕೂಲ್ ಬಗ್ಗೆ ಮಾಹಿತಿ
ಬೆಂಗಳೂರಿನ ಲಗ್ಗೆರೆಯಲ್ಲಿರುವಂತ ಲವ-ಕುಶ ನಗರದಲ್ಲಿ ಕಲಾ ಮಂಟಪ ಡ್ಯಾನ್ಸ್ ಸ್ಕೂಲ್ ಇದೆ. ರಾಘವೇಂದ್ರ ಸ್ವಾಮಿ ದೇವಸ್ಥಾನದ ಎದುರಿಗೆ ಇರುವಂತ ಈ ನೃತ್ಯ ಶಾಲೆಯಲ್ಲಿ ವಿವಿಧ ವಯೋಮಾನದ ಮಕ್ಕಳಿಗೆ ಕ್ಲಾಸಿಕಲ್ ಡ್ಯಾನ್ಸ್ ಕಲಿಸಿಕೊಡಲಾಗುತ್ತದೆ.
ಬಿನು ತಾಗಿನ್ ಅವರು 2013ರಲ್ಲಿ ಈ ನೃತ್ಯ ಶಾಲೆಯನ್ನು ಆರಂಭಿಸಿದ್ರು. ಈವರೆಗೆ 14ಕ್ಕೂ ಹೆಚ್ಚು ಶಾಲೆಗಳಲ್ಲಿ ಕೋರಿಯೋಗ್ರಫಿ ಮಾಡಿದ್ದಾರೆ. 2,500ಕ್ಕೂ ಹೆಚ್ಚು ಮಕ್ಕಳಿಗೆ ನೃತ್ಯ ತರಬೇತಿಯನ್ನ ಈ ಕಲಾ ಮಂಟಪ ಡ್ಯಾನ್ಸ್ ಸ್ಕೂಲ್ ಮೂಲಕ ನೀಡಲಾಗಿದೆ. ಈ ನೃತ್ಯ ಶಾಲೆಯಲ್ಲೇ ಯುಕೆಜಿಯಿಂದಲೇ ಕೌಸ್ತುಭ ಕ್ಲಾಸಿಕಲ್ ನೃತ್ಯವನ್ನು ಕಲೆಯುತ್ತಿದ್ದಾರೆ.
ಅತಿ ಕಡಿಮೆ ಗೌರವಧನದೊಂದಿಗೆ ವಿದ್ಯಾರ್ಥಿಗಳಿಗೆ ಕ್ಲಾಸಿಕಲ್ ನೃತ್ಯ ತರಬೇತಿಯನ್ನು ಬಿನು ತಾಗಿನ್ ನೀಡುತ್ತಿದ್ದಾರೆ. ಅದೆಷ್ಟೋ ಬಡ ಮಕ್ಕಳಿಗೆ ಉಚಿತವಾಗಿಯೂ ನೃತ್ಯವನ್ನು ತಮ್ಮ ನೃತ್ಯ ಶಾಲೆಯಲ್ಲಿ ಕಲಿಸಿಕೊಟ್ಟಿದ್ದಾರೆ. ಸರಳ ರೀತಿಯಲ್ಲಿ ಕ್ಲಾಸಿಕಲ್ ಡ್ಯಾನ್ಸ್ ತರಬೇತಿಯನ್ನು ಹೇಳಿಕೊಡೋ ಇವರ ಬಳಿಯಲ್ಲಿ ಈವರೆಗೆ ಸಾವಿರಾರು ಮಕ್ಕಳು ನೃತ್ಯವನ್ನು ಕಲಿತಿದ್ದಾರೆ.
ನೃತ್ಯ ಕಲಿತ ಎಷ್ಟೋ ವಿದ್ಯಾರ್ಥಿಗಳಿಗೆ ವಿವಿಧ ನೃತ್ಯ ಕಾಂಪ್ಯೂಟೇಷನ್ ನಲ್ಲಿ ಅವಕಾಶ ದೊರಕಿಸಿಕೊಟ್ಟು, ಪ್ರತಿಭೆಗಳನ್ನು ಓರೆ ಹಚ್ಚೋ ಕೆಲಸವನ್ನು ಮಾಡುತ್ತಿದ್ದಾರೆ. ಬಿನು ತಾಗಿನ್ ಅವರ ನೃತ್ಯ ಪ್ರಾವಿಣ್ಯತೆಗೆ ಕರ್ನಾಟಕ ಕ್ಲಾಸಿಕಲ್ ಡ್ಯಾನ್ಸ್ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಹರಿಸಿಕೊಂಡು ಬಂದಿವೆ.
BIG NEWS: ‘ಜೆಡಿಎಸ್ ಶಾಸಕ’ರಿಗೆ ಸಿಎಂ, ಡಿಸಿಎಂ ಆಮಿಷ: ಮಾಜಿ ಸಿಎಂ ‘HDK’ ಗಂಭೀರ ಆರೋಪ
ನಾನು ‘ಕೇಂದ್ರ ಮಂತ್ರಿ’ ಆಗುವ ಬಗ್ಗೆ ಚಿಂತೆ ಮಾಡಿಲ್ಲ – ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ