ನವದೆಹಲಿ : ಕೆಎಸ್‌ಆರ್‌ಟಿಸಿಯ ಮೈಸೂರು ನಗರ ಸಾರಿಗೆಯಲ್ಲಿ ಧ್ವನಿ ಸ್ಪಂದನ’ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಎಂಬ ದೇಶದ ಮೊದಲ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ಉಪಕ್ರಮವು “ಸ್ವಯಂ ಆಕ್ಸೆಸಿಬಿಲಿಟಿ ಪ್ರಶಸ್ತಿ2025 ಅನ್ನು ಪಡೆದುಕೊಂಡಿದೆ.
ಈ ಪ್ರಶಸ್ತಿಯನ್ನು ಪ್ರಶಾಂತ್ ಕುಮಾರ್ ಮಿತ್ತಲ್ , ಡೆಪ್ಯುಟಿ ಡೈರೆಕ್ಟರ್ ಜನರಲ್ , NIC National Informatics Center, ಮತ್ತು ಸೈಮು ಜಿಂದಾಲ್ , ಸಂಸ್ಥಾಪಕತು, ಸ್ವಯಂ ಸಂಸ್ಥೆ ಅವರು ಶರಣ್ ಬಸವರಾಜ ಕೆ.ಎಂ., ವಿಭಾಗಿಯ ನಿಯಂತ್ರಣಧಿಕಾರಿ, ಮಂಡ್ಯ ವಿಭಾಗ ಹಾಗೂ ಸುಧಾರಾಣಿ ಆರ್., ಉಪ ಮುಖ್ಯ ಗಣಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಸ್ವಯಂ ಸಂಸ್ಥೆಯು ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಅಂತರರಹಿತ ವಿನ್ಯಾಸ ಮತ್ತು ಒಳಗೊಳ್ಳುವಿಕೆಯ ಕ್ಷೇತ್ರದಲ್ಲಿ ಮಾದರಿಗಳನ್ನು ನಿರ್ಮಿಸಿರುವ ಸಂಸ್ಥೆಗಳನ್ನು ಗೌರವಿಸುವ ಉದ್ದೇಶ ಹೊಂದಿದೆ. 2025ನೇ ಆವೃತ್ತಿ ಸ್ವಯಂ ಸಂಸ್ಥೆಯ 25ನೇ ವಾರ್ಷಿಕೋತ್ಸವವಾಗಿದ್ದು, ಜಾಗತಿಕ ಮಟ್ಟದಲ್ಲಿ ಕ್ಷೇತ್ರದಲ್ಲಿ 25 ವರ್ಷಗಳ ಸೇವೆಯನ್ನು ಆಚರಿಸುತ್ತಿದೆ.

ಧ್ವನಿ ಸ್ಪಂದನ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿಯ ರೈಸ್ಡ್ ಲೈನ್ಸ್ ಫೌಂಡೇಶನ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನವಾಗಿದ್ದು, ಮೈಸೂರು ನಗರ ಬಸ್ಸುಗಳಲ್ಲಿ ದೃಷ್ಟಿ ಸಮಸ್ಯೆಯುಳ್ಳ ಪ್ರಯಾಣಿಕರ ಸ್ವತಂತ್ರ ಚಲನವಲನವನ್ನು ಸುಗಮಗೊಳಿಸಲು ಜಾರಿಗೆ ತರಲಾಗಿದೆ.
ಈ ವ್ಯವಸ್ಥೆಯು ಬಳಕೆದಾರರಿಗೆ ಬರುತ್ತಿರುವ ಬಸ್‌ಗಳನ್ನು ಗುರುತಿಸಲು ಹಾಗೂ ಧ್ವನಿ ಆಧಾರಿತ ಸೂಚನೆಗಳ ಮೂಲಕ ಬಸ್ ಪ್ರವೇಶದ ಸ್ಥಳವನ್ನು ಸುರಕ್ಷಿತವಾಗಿ ಕಂಡುಹಿಡಿಯಲು ಸಹಾಯ ಮಾಡುತ್ತದೆ. ಈಗಾಗಲೇ 200 ಕ್ಕೂ ಹೆಚ್ಚು ನಗರ ಬಸ್ಸುಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದ್ದು, 400 ಕ್ಕೂ ಹೆಚ್ಚು ದೃಷ್ಟಿ ವಿಕಲ ಬಳಕೆದಾರರಿಗೆ ಇದರ ಬಳಕೆಯ ಕುರಿತು ತರಬೇತಿ ನೀಡಲಾಗಿದೆ. ಈ ಯೋಜನೆಯಿಂದ ದೃಷ್ಟಿ ವಿಕಲ ಪ್ರಯಾಣಿಕರ ಪ್ರಯಾಣ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದ್ದು, ಅವರ ಆತ್ಮವಿಶ್ವಾಸ, ಭದ್ರತೆ ಮತ್ತು ಸ್ವಾತಂತ್ರ್ಯದಲ್ಲಿ ದೊಡ್ಡ ಮಟ್ಟದ ಪ್ರಗತಿ ಕಂಡುಬಂದಿದೆ.
ಈ ಯೋಜನೆಯ ಯಶಸ್ಸಿಗೆ ಜರ್ಮನಿಯ ಡಾಯಿಚೆ ಗೆಸೆಲ್‌ಶಾಫ್ಟ್ ಫ್ಯೂರ್ ಇಂಟರ್ನ್ಯಾಷನಾಲೆ ಜುಸಮ್ಮೆನಾರ್ಬೈಟ್ (GIZ) GmbH ಸಂಸ್ಥೆಯು ತಾಂತ್ರಿಕ ಸಹಯೋಗ ನೀಡಿದೆ. ಈ ಸಹಯೋಗವು SUM-ACA ಯೋಜನೆಯ ಅಡಿಯಲ್ಲಿ, ಎಲ್ಲರಿಗೂ ಸಮಾನ ಅವಕಾಶದ ನಗರ ಸಾರಿಗೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಚಿತ್ರದುರ್ಗ: ಅಬ್ಬಿನಹೊಳೆ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ, 24 ಗಂಟೆಯಲ್ಲೇ 120 ಕುರಿ ಕದ್ದ ಕಳ್ಳ ಅರೆಸ್ಟ್
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ








