ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಕೆ ಎಸ್ ಆರ್ ಟಿಸಿಯಿಂದ ಸಾರಿಗೆ ಬಸ್ಸುಗಳನ್ನು ಆಯುಧ ಪೂಜೆಯಂದು ಪೂಜಿಸಲು ರೂ.100 ನೀಡಲಾಗುತ್ತಿತ್ತು. ಈ ದುಬಾರಿ ದುನಿಯಾದಲ್ಲಿ ಇಷ್ಟು ಹಣ ಸಾಕಾಗುವುದೇ ಎಂಬುದಾಗಿ ಅನೇಕರು ಪ್ರಶ್ನಿಸಿದ್ದರು. ಅಲ್ಲದೇ ಹೆಚ್ಚಳಕ್ಕೂ ಒತ್ತಾಯಿಸಿದ್ದರು. ಈಗ ಕೆ ಎಸ್ ಆರ್ ಟಿ ಸಿ ಸಂಸ್ಥೆಯಲ್ಲಿ ಆಯುಧ ಪೂಜೆಗೆ ರೂ.100 ನೀಡುತ್ತಿರುವುದನ್ನು ರೂ.250 ಕ್ಕೆ ಹೆಚ್ಚಿಸಿ ಆದೇಶಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಯಾಂತ್ರಿಕ ಅಭಿಯಂತರರು ಆದೇಶವನ್ನು ಹೊರಡಿಸಿದ್ದು, ಪ್ರತಿ ವರ್ಷವು ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಆಚರಣೆಯಲ್ಲಿರುವ ಆಯುಧ ಪೂಜೆಯ ದಿನದಂದು ನಿಗಮದ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟು ಪೂಜೆ ಮಾಡುವುದು ಸಂಪುದಾಯವಿದ್ದು ಉಲ್ಲೇಖಿತ ಪತ್ರ 2 ರಲ್ಲಿ ವಿಭಾಗಗಳಲ್ಲಿ ಕಾರ್ಯಾಚರಣೆಯಲ್ಲಿರುವ ಪ್ರತಿ ಪ್ರಯಾಣಿಕ ಹಾಗೂ ಇಲಾಖಾ ವಾಹನದ ಪೂಜಾ ಕಾರ್ಯಕ್ಕೆ ರೂ. 100/- (ನೂರು ರೂಪಾಯಿಗಳು ಮಾತ್ರ) ರಂತೆ ಮುಂಗಡ ಹಣ ಪಡೆದು ಸ್ವಚ್ಛತೆಯೊಂದಿಗೆ ವಾಹನಗಳ ಮತ್ತು ಯಂತ್ರೋಪಕರಣಗಳ ಪೂಜೆ ಮಾಡುವಂತೆ ಸೂಚಿಸಲಾಗಿತ್ತು ಎಂದಿದ್ದಾರೆ.
ಮುಂದುವರೆದಂತೆ, ಮಾನ್ಯ ವ್ಯವಸ್ಥಾಪಕ ನಿರ್ದೇಶಕರ ಆದೇಶದಂತೆ ವಿಭಾಗಗಳಲ್ಲಿ ಕಾರ್ಯಾಚರಣೆಯಲ್ಲಿರುವ ಪ್ರತಿ ಪುಯಾಣಿಕ ಹಾಗೂ ಇಲಾಖಾ ವಾಹನದ ಪೂಜಾ ಕಾರ್ಯಕ್ಕೆ ದರವನ್ನು ಪರಿಷ್ಕರಿಸಿ ರೂ. 250/- (ಎರಡು ನೂರ ಐವತ್ತು ರೂಪಾಯಿಗಳು ಮಾತ್ರ) ಅನ್ನು ನಿಗದಿಪಡಿಸಿರುವುದರಿಂದ, ಅದರಂತೆ ಮುಂಗಡ ಹಣ ಪಡೆದು ಸ್ವಚ್ಛತೆಯೊಂದಿಗೆ ವಾಹನಗಳ/ಯಂತ್ರೋಪಕರಣಗಳ ಪೂಜಾ ಕಾರ್ಯಾಗಳನ್ನು ನೆರವೇರಿಸುವಂತೆ ಸೂಚಿಸಿದ್ದಾರೆ.
ಅಂದಹಾಗೆ ಒಂದು ಘಟಕದಲ್ಲಿ ಸರಿ ಸುಮಾರು 100 ರಿಂದ 500 ಬಸ್ಸುಗಳಿರುತ್ತವೆ. ಒಂದು ಬಸ್ಸಿಗೆ ರೂ. 100 ಎಂದು ಒಂದು ಘಟಕಕ್ಕೆ / ಕಾರ್ಯಾಗಾರಕ್ಕೆ ನೀಡಲಾಗುತ್ತದೆ. 2008 ರವರೆಗೂ ರೂ.10 ಪ್ರತಿ ಬಸ್ಸಿಗೆ , 2009 ರಲ್ಲಿ ಪ್ರತಿ ಬಸ್ಸಿಗೆ ರೂ 30 ಕ್ಕೆ ಏರಿಕೆ ಮಾಡಲಾಯಿತು. 2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ , 2017 ರಲ್ಲಿ ಪ್ರತಿ ಬಸ್ಸಿಗೆ ರೂ.100 ಕ್ಕೆ ಏರಿಕೆ ಮಾಡಲಾಗಿತ್ತು. ರೂ.100 ಪ್ರತಿ ಬಸ್ಸಿಗೆ ನೀಡುವ ಮೊತ್ತವು 2023 ರವರೆಗೂ ರೂ.100 ಆಗಿತ್ತು. 2024 ಅಂದರೆ ಪ್ರಸಕ್ತ ವರ್ಷದಲ್ಲಿ ಆಯುಧಪೂಜೆಗೆ ಪ್ರತಿ ಬಸ್ಸಿಗೆ ಈಗ ನೀಡಲಾಗುತ್ತಿರುವ ರೂ.100 ಅನ್ನು ರೂ.250 ಕ್ಕೆ ಹೆಚ್ಚಿಸಲು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶಿಸಿದ್ದಾರೆ. ಅದರಂತೆ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ರಾಜ್ಯದಲ್ಲಿ ಮತ್ತೊಂದು ‘ಹಗರಣ’ ಬೆಳಕಿಗೆ: ‘ಜಿ.ಎ ಬಾವ’ ಸೇರಿ ಇತರರ ವಿರುದ್ಧ ‘FIR’ ದಾಖಲು
Good News: ದಸರಾ ಹಬ್ಬದ ಪ್ರಯುಕ್ತ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸಂಚಾರ
ಬೆಂಗಳೂರಿನ ಆಸ್ತಿ ಮಾಲೀಕರಿಗೆ ಮಹತ್ವದ ಮಾಹಿತಿ: ಈ ಹಂತ ಅನುಸರಿಸಿ, ‘ಆನ್ ಲೈನ್’ನಲ್ಲೇ ‘ಇ-ಖಾತಾ’ ವೀಕ್ಷಿಸಿ