ಬೆಂಗಳೂರು: ನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕನ್ನಡ ಕ್ರಿಯಾ ಸಮಿತಿಯಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಕನ್ನಡ ಕ್ರಿಯಾ ಸಮಿತಿಯಿಂದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಬೆಂಗಳೂರಿನ ಶಾಂತಿನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕನ್ನಡ ಕ್ರಿಯಾ ಸಮಿತಿ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭರಂಭ ನಡೆಯಿತು.
ಕನ್ನಡ ಚಳುವಳಿಗಾರರು, ನಿರ್ಮಾಪಕ ಸಾ.ರಾ.ಗೋವಿಂದುರವರು, ಮುಖ್ಯ ಸಂಚಾರ ವ್ಯವಸ್ಥಾಪಕರಾದ ಜೆ.ಅಂತೋನಿ ಜಾರ್ಜ್, ವಿಭಾಗೀಯ ನಿಯಂತ್ರಾಧಿಕಾರಿಗಳಾದ ಬಿ.ಎಸ್.ನಾಗರಾಜ್ ಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ ಲತಾರವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕನ್ನಡ ಕ್ರಿಯಾ ಸಮಿತಿ ಗೌರವ ಅಧ್ಯಕ್ಷರಾದ ವ.ಚ.ಚನ್ನೇಗೌಡರು, ರಾಜ್ಯಾಧ್ಯಕ್ಷರಾದ ಕೆ.ಎಸ್.ಪ್ರಭುಸ್ವಾಮಿ, ವಲಯ ಅಧ್ಯಕ್ಷರಾದ ಕೆ.ಎಸ್.ಎಂ.ಹುಸೇನ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಖ್ಯಾತ ಸಾಹಿತಿ, ನಿವೃತ್ತ ಐಪಿಎಸ್ ಅಧಿಕಾರಿ ಡಾ||ಡಿ.ವಿ.ಗುರುಪ್ರಸಾದ್, ಕನ್ನಡ ಪರಿಚಾರಕರಾದ ಹೆಚ್.ಎನ್.ರಮೇಶ್ ಬಾಬು, ಸಂಗೀತ ಗಮಕ ವಿದ್ವಾನ್ ಡಾ.ಎಂ.ಖಾಸೀಮ್ ಮಲ್ಲಿಗೆಮಡುವು ರವರಿಗೆ ಸನ್ಮಾನಿಸಲಾಯಿತು.
ಹಿರಿಯ ಕನ್ನಡ ಚಳುವಳಿ ನಾಯಕ ಸಾ.ರಾ.ಗೋವಿಂದು ಮಾತನಾಡಿ ಕನ್ನಡಿಗರು ಉತ್ತಮ ಸಂಸ್ಕೃತಿವುಳ್ಳವರು. 70ವರ್ಷದ ಸಂಭ್ರಮಾಚರಣೆ ಅಚರಣೆ ಮಾಡುತ್ತಿದ್ದೇವೆ.ಹಲವು ನೋವುಗಳು ಇನ್ನು ಉಳಿದಿದೆ. ಕನ್ನಡ ವಿಚಾರ, ಬೆಳವಣಿಗೆ, ಕನ್ನಡ ನೆಲ, ಜಲ ರಕ್ಷಣೆಯಲ್ಲಿ ಹಿಂದುಳಿದಿದ್ದೇವೆ ಇದೆಕ್ಕಲ್ಲ ಕಾರಣ ರಾಜಕಾರಣಿಗಳು ಎಂದರು.
ಕನ್ನಡಿಗರಿಗೆ ಉದ್ಯೋಗದಲ್ಲಿ ನೊದಲ ಆದ್ಯತೆ ಎಂಬ ಅದೇಶ ಬಂತು ಸಂಜೆ ವಾಪಸ್ಸು ಪಡೆದರು ಪರಬಾಷಿಗರ ಎಷ್ಟು ಬಲಿಷ್ಠರಾಗಿದ್ದಾರೆ ಎಂಬುದು ತಿಳಿಯುತ್ತದೆ. ಕೆ.ಜಿ.ಎಫ್ ನಲ್ಲಿ ಅನ್ಯಭಾಷಿಗರಿಂದ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕೆಜಿಎಫ್ ನಲ್ಲಿ ಉಗ್ರ ಹೋರಾಟ ಮಾಡಲಾಯಿತು. ಸಾರಿಗೆ ಸಂಸ್ಥೆ ಸಾಬೂನು ಕಾರ್ಖಾನೆಯಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ಇದ್ದಾರೆ ಅದೇ ರೀತಿಯಲ್ಲಿ ಎಲ್ಲ ಸಂಸ್ಥೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಬೆಂಗಳೂರುನಗರವನ್ನು ಕೇಂದ್ರಡಾಳಿತ ಪ್ರದೇಶ ಮಾಡಲು ಹೋರಾಟಗ ಅದರ ವಿರುದ್ದ ಡೊಡ್ಡ ಹೋರಾಟ ಕನ್ನಡಿಗರು ಮಾಡಿದರು ಎಂದರು.
ಕಾವೇರಿ ನದಿ ನೀರು ಬಿಡುಗಡೆಯಾದಗ ತಮಿಳಿಗರು ಸಂಭ್ರಮ ಅಚರಿಸಿದರು, ಕನ್ನಡಿಗರು ಎಚ್ಚತ್ತ ಹೋರಾಟಕ್ಕೆ ಮುಂದಾದಗ 26ಕನ್ನಡಿಗರು ಸಾವನ್ನಪ್ಪಿದ್ದರು. ಅನ್ಯಭಾಷಿಗರ ದಬ್ಬಾಳಿಕೆ ನಿಲ್ಲಬೇಕು. ನನ್ನ ವಿರುದ್ದ ನೂರಾರು ಕೇಸ್ ದಾಖಲಿಸಿದರು ಎಂದು ತಿಳಿಸಿದರು.
ಉತ್ತರ ಕರ್ನಾಟಕ ನೀರಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಪರಿಸ್ಥಿತಿ ಬಂದಿದೆ. ಗೋಕಾಕ್ ಚಳುವಳಿ ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ಮಾಡದೇ ಹೋಗಿದ್ದಾರೆ ಕನ್ನಡಿಗರ ಪರಿಸ್ಥಿತಿ ಇನ್ನು ಹೀನಾಯಾಗುತ್ತಿತ್ತು.ಭಾರತ ದೇಶದಲ್ಲಿ ಹುಟ್ಟಬೇಕಾದರೆ ಪುಣ್ಯ ಮಾಡಿರಬೇಕು, ಕರ್ನಾಟಕದಲ್ಲಿ ಹುಟ್ಟಬೇಕಾದರೆ ತಪಸ್ಸು ಮಾಡಿರಬೇಕು ಎಂದು ಹೇಳಿದರು.
ಡಾ||ಡಿ.ವಿ.ಗುರುಪ್ರಸಾದ್ ಮಾತನಾಡಿ ಸಾರಿಗೆ ಸಂಸ್ಥೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಮಾಡಿದ್ದೇನೆ. ಸಾರಿಗೆ ಸಂಸ್ಥೆ ಲಾಭದತ್ತ ಸಾಗುತ್ತಿರುವುದು ಸಂತೋಷಕರ ವಿಷಯವಾಗಿದೆ. ಆಸ್ಟೇಲಿಯದಲ್ಲಿರುವ ಬಸ್ ನಿಲ್ದಾಣ ಮಾದರಿಯಲ್ಲಿ ಶಿವಾಜಿನಗರ ಬಸ್ ನಿಲ್ದಾಣ ನಿರ್ಮಿಸಲಾಯಿತು. ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಕನ್ನಡ ಪರ ಹೋರಾಟದಲ್ಲಿ ಮಂಚೂಣಿಯಾಗಿ ನಿಂತಿದೆ ಎಂದರು.
ಸಾರಿಗೆ ಸಂಸ್ಥೆ ಖಾಸಗೀಕರಣ ಮಾಡಲು ಪ್ರಯತ್ನ ಮಾಡಿದರು, ಹಲವು ಮಹನೀಯರುಗಳ ಸಹಕಾರ ಖಾಸಗೀಕರಣ ಮಾಡಲು ಬಿಡಲ್ಲಿಲ. ಉತ್ತಮ ಸಾರಿಗೆ ವ್ಯವಸ್ಥೆಯಾಗಿದೆ. ಖ್ಯಾತ ನಟ ರಜನಿಕಾಂತ್ ರವರು ಪ್ರತಿ ನಿಲ್ದಾಣದ ಹೆಸರನ್ನ ಕನ್ನಡದಲ್ಲಿ ಹೇಳಿ ಕನ್ನಡ ಕಂಪನ್ನು ಉಳಿಸಲು ಕೊಡುಗೆ ನೀಡಿದರು ಎಂದರು.
ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಗೌರವಾಧ್ಯಕ್ಷ ವ.ಚ.ಚನ್ನೇಗೌಡ ಮಾತನಾಡಿ 1963ರಲ್ಲಿ ಪ್ರಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವವನ್ನು ಸುಭಾಶ್ ನಗರ ಬಸ್ ನಿಲ್ದಾಣದಲ್ಲಿ ಆಚರಿಸಲಾಯಿತು. ಕನ್ನಡಿಗರಿಗೆ ಉದ್ಯೋಗ, ನಾಡು, ನುಡಿ ಹೋರಾಟ ಮಾಡಲು ನಮ್ಮ ಕ್ರಿಯಾ ಸಮಿತಿ ಸ್ಥಾಪನೆಯಾಯಿತು. ಕನ್ನಡ ಬಲ್ಲವರಿಗೆ ಉದ್ಯೋಗ ಕೊಡಬೇಕು ಎಂದು 33ವರ್ಷಗಳ ಹಿಂದೆ 12 ದಿನಗಳ ಕಾಲ ಹಗಲು-ರಾತ್ರಿ ನಿರಂತರ ಹೋರಾಟ ಫಲದಿಂದ ಇಂದು ನಮ್ಮ ಸಂಸ್ಥೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಲಭಿಸುವಂತಾಯಿತು ಎಂದರು.
ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಸ್.ಪ್ರಭುಸ್ವಾಮಿ ಮಾತನಾಡಿ ಕಳೆದ 37ವರ್ಷಗಳಿಂದ ಕನ್ನಡ ಕ್ರಿಯಾ ಸಮಿತಿ ಹೋರಾಟ ಮಾಡುತ್ತಾ ಬಂದಿದೆ. ಕನ್ನಡದ ವಾತಾವರಣ ನಿರ್ಮಿಸಬೇಕು ಎಂಬ ಉದ್ದೇಶ ನಮ್ಮದು.ಬಸ್ ಡೈವರ್, ನಿರ್ವಾಹಕರು ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಕಾರ್ಯಧ್ಯಕ್ಷ ಕೆ ಎಸ್. ಎಮ್ ಹುಸೇನ್, ಕೇಂದ್ರೀಯ ವಿಭಾಗ ಸಮಿತಿಯ ಅಧ್ಯಕ್ಷರಾದ ಆರ್.ಟಿ.ಶಾಂತರಾಜು, ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಖಜಾಂಚಿ ರಮೇಶ್ ಡಿ.ಎಲ್.ರವರು ಅಧಿಕಾರಿ, ನೌಕರರು ಭಾಗವಹಿಸಿದ್ದರು.








