ಬೆಂಗಳೂರು: ಪ್ರಯಾಣಿಕರಿಂದಲೇ ಪ್ರಯಾಣಿಕರಿಗೆ ಟಿಕೆಟ್ ಕೊಡಿಸಿದಂತ ಕೆ ಎಸ್ ಆರ್ ಟಿಸಿ ಕಂಡಕ್ಟರ್ ಒಬ್ಬರನ್ನು ಇಲಾಖೆ ಅಮಾನತುಗೊಳಿಸಿ ಆದೇಶಿಸಿದೆ.
ಕೆ ಎಸ್ ಆರ್ ಟಿ ಸಿ ರಾಮನಗರ ವಿಭಾಗಕ್ಕೆ ಸಂಬಂಧಿಸಿದಂತ ಬಸ್ಸಿನಲ್ಲಿ ನಿರ್ವಾಹಕ ಬೇರೊಬ್ಬರಿಂದ ಟಿಕೇಟ್ ವಿತರಣೆ ಮಾಡಿಸುತ್ತಿರುವ ವಿಡಿಯೋ ಹಾಗೂ ಸುದ್ದಿಗೆ ಸಂಬಂಧಪಟ್ಟಂತೆ ಸದರಿ ನಿರ್ವಾಹಕರನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ಮುಂದುವರೆದಿದೆ.
ರಾಮನಗರ ಡಿಪೋಗೆ ಸಂಬಂಧಿಸಿದಂತ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಚಾಲಕ ಕಂ ನಿರ್ವಾಹಕ ನವೀನ್.ಟಿಎನ್ ಎಂಬುವರು ಪ್ರಯಾಣಿಕರಿಂದಲೇ ಪ್ರಯಾಣಿಕರಿಗೆ ಟಿಕೆಟ್ ಕೊಡಿಸಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ, ನವೀನ್ ಟಿ ಎಸ್, ಚಾಲಕ ಕಂ ನಿರ್ವಾಹಕ, ರಾಮನಗರ ವಿಭಾಗ ಅವರು ಮೇಲ್ನೋಟಕ್ಕೆ ಸಾಭೀತಾಗುವಂತಹ ಮತ್ತು ಕೆ ಎಸ್ ಆರ್ ಟಿಸಿ ನಡತೆ ಹಾಗೂ ಶಿಸ್ತು ನಿಯಮಾವಳಿಗಳು 1971ರ ಪ್ರಕಾರ ದಂಡನಾರ್ಹವಾದ ಅಪರಾಧಗಳನ್ನು ಎಸಗಿದ್ದಾರೆಂದು ವರದಿಯಿಂದ ತಿಳಿದಿರುತ್ತದೆ. ಈ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಣೆಯ ಮೇಲೆ ಮುಂದುರೆಸುವುದರಿಂದ ಈ ಪ್ರಕರಣದ ತನಿಖೆಗೆ ಭಾಕವಾಗಬಹುದಾದುದರಿಂದ ಇವರನ್ನು ಅಮಾನತ್ತುಗೊಳಿಸಲಾಗಿದೆ ಎಂದಿದ್ದಾರೆ.
ಇನ್ನೂ ವಿಚಾರಣಾ ಪೂರ್ವ ಅಮಾನತ್ತಿನಲ್ಲಿ ಶಿಸ್ತು ಮತ್ತು ನಡವಾಳಿ ನಿಯಮಾವಳಿ 1971ರ ನಿಯಮ 21(1) ಇಡಲಾಗಿದೆ. ಸದರಿಯವರಿಗೆ ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆಯನ್ನು ಕೇಂದ್ರ ಕಚೇರಿ, ಬೆಂಗಳೂರಿನಿಂದ ದಿನಾಂಕ 29-10-91ರ ಅಡಿಯಲ್ಲಿ ನೀಡಲಾದ ಸುತ್ತೋಲೆ ಸಂಖ್ಯೆ 843ರ ಪ್ರಕಾರ ನೀಡಲಾಗುವುದು ಎಂದಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಯಾವುದೇ ತರಹದ ನೌಕರಿ, ವ್ಯಾಪಾರ, ಉದ್ಯೋಗ ಹಾಗೂ ವಿರಾಮಕಾಲದ ಚಟುವಟಿಕೆಗಳಲ್ಲಿ ತೊಡಗಿಲ್ಲವೆಂದು ಘೋಷಣೆ ಪತ್ರ ಸಹಿ ಮಾಡಿಕೊಟ್ಟಾಗ ಮಾತ್ರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತದೆ. ವಿಚಾರಣಾಧಿಕಾರಿಯಿಂದ ಲಿಖಿತ ಅನುಮತಿ ಪಡೆಯದೇ ಕಾರ್ಯ ಕೇಂದ್ರವನ್ನು ಬಿಟ್ಟು ಹೋರಗೆ ಹೋಗಬಾರದು ಎಂಬುದಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ