Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆಯ ಬಿಸಿಲಿಗೆ ತತ್ತರಿಸುವ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿ: ಸಚಿವ ಕೆ.ಜೆ. ಜಾರ್ಜ್ ಕರೆ

10/04/2026 10:34 PM

ಸಾಗರ ತಾಲ್ಲೂಕು ಪಿಯುಸಿ ಫಲಿತಾಂಶ: ಸರ್ಕಾರಿ ಕಾಲೇಜು ಸೇರಿ ವಿವಿಧ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಭರ್ಜರಿ ಸಾಧನೆ!

10/04/2026 10:22 PM

ಸಾಗರ ವಿಜ್ಞಾನ ವೇದಿಕೆಯಿಂದ ರಾಜ್ಯ ಮಟ್ಟದ ವಸತಿಸಹಿತ ವಿಜ್ಞಾನ ಬೇಸಿಗೆ ಶಿಬಿರ: ಏಪ್ರಿಲ್ 13ರಿಂದ ಚಾಲನೆ

10/04/2026 10:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಗಳೂರಲ್ಲಿ ‘KSRTC ಬಸ್’ ಭೀಕರ ಅಪಘಾತ: ಈ ಮಾಹಿತಿ ಹಂಚಿಕೊಂಡ ‘MD ಅಕ್ರಂ ಪಾಷ’
KARNATAKA

ಮಂಗಳೂರಲ್ಲಿ ‘KSRTC ಬಸ್’ ಭೀಕರ ಅಪಘಾತ: ಈ ಮಾಹಿತಿ ಹಂಚಿಕೊಂಡ ‘MD ಅಕ್ರಂ ಪಾಷ’

By kannadanewsnow0928/08/2025 6:34 PM

ಬೆಂಗಳೂರು: ಮಂಗಳೂರಿನ ಉಳ್ಳಾಲದ ತಲಕವಾಡಿಯ ಟೋಲ್ ಗೇಟ್ ಬಳಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿ ಆರು ಮಂದಿ ದುರ್ಮರಣ ಹೊಂದಿದ್ದಾರೆ. ಈ ಘಟನೆಯ ಕುರಿತಂತೆ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದಂತ ಅಕ್ರಂ ಪಾಷ ಅವರು ಈ ಕೆಳಕಂಡ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ : 28.08.2025 ರಂದು ವಿಭಾಗದ ಮಂಗಳೂರು-1ನೇ ಘಟಕದ ವಾಹನಸಂಖ್ಯೆ : KA19F3407 ಮಾರ್ಗಸಂಖ್ಯೆ : 129/130 ಕಾಸರಗೋಡು – ಮಂಗಳೂರು ಮಾರ್ಗದಲ್ಲಿ ಚಾಲಕರಾಗಿ ಶ್ರೀ ನಿಜಲಿಂಗಪ್ಪ ಚಲವಾದಿ ಬಿ.ಸಂ: 309 ರವರು ಕರ್ತವ್ಯ ನಿರ್ವಹಿಸುವಾಗ ಸಮಯ ಸುಮಾರು 1230 – 1235 ರ ಸಮಯದಲ್ಲಿ ಕಾಸರಗೋಡು ನಿಂದ ನಿರ್ಗಮಿಸಿ ಸಮಯ 13:45 ಕ್ಕೆ ತಲಪಾಡಿ ಟೋಲ್ ಗಿಂತ 150 ಮೀಟರ್ ಹಿಂದಕ್ಕೆ ನಿಗಮದ ಚಾಲಕರು ತಮ್ಮ ವಾಹನವನ್ನು ಅತೀವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾಏಕಿ ರಸ್ತೆಗೆ ಅಡ್ಡ ಬಂದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಬ್ರೇಕ್ ಹಾಕಿದ್ದು, ಅಷ್ಟರಲ್ಲಿ ನಿಗಮದ ವಾಹನ ಆಟೋಗೆ ಮಾರಣಾಂತಿಕ ಡಿಕ್ಕಿಯಾಗಿದ್ದು, ಆ ಸಂದರ್ಭದಲ್ಲಿ ನಿಗಮದ ವಾಹನವು ಡಿಕ್ಕಿಯಾಗಿ ಹಠಾತ್ತನೆ ಸ್ಪೀಡ್ ಆಗಿ ತಿರುಗಿ ನಿಂತಿದ್ದು, ಚಾಲಕರು ಚಾಲನಾ ಸೀಟಿನಿಂದ ಓಡಿ ಹೋಗಿದ್ದು, ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿಯಾಗಿ ನಿಂತಿರುತ್ತದೆ ಎಂದಿದ್ದಾರೆ.

ಸದರಿ ಅಪಘಾತದಲ್ಲಿ ಮುಂದಿನಿಂದ ಡಿಕ್ಕಿಹೊಡೆದ ಅಟೋದಲ್ಲಿ 2 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದ ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.‌ ಹಿಂಬದಿಯಿಂದ ಡಿಕ್ಕಿಯಾಗಿದ್ದ 2 ಜನ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಸದರಿ ವಾಹನವನ್ನು ದಿನಾಂಕ : 27.08.2025 ರಂದು ಮಾರ್ಗಸಂಖ್ಯೆಗೆ ನಿಯೋಜಿಸಿದ್ದು ಅಪಘಾತ ಸಮಯದವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540ಕಿಮೀ ಕ್ರಮಿಸಿರುತ್ತದೆ. ಅಲ್ಲದೇ ಈ ವಾಹನವು ದಿನಾಂಕ: 26.08.2025 ರಂದು FC ನವೀಕರಣ ಆಗಿ ಬಂದಿದ್ದು, ಯಾವುದೇ ತಾಂತ್ರಿಕ ದೋಷದಿಂದ ಸಂಭವಿಸಲು ಸಾಧ್ಯವಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಅಲ್ಲದೇ ಸದರಿ ಚಾಲಕರು ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಮಾರ್ಗದಲ್ಲಿಯೇ ಸುಮಾರು 03 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಚಾಲಕರ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ. ಗಾಯಗೊಂಡ ಇತರೆ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ. ನಿಗಮವು ಈ ಅಪಘಾತಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಅಪಘಾತ ತಪ್ಪಿಸಲು‌ ನಿರಂತರ ತರಬೇತಿ, ತಿಳುವಳಿಕೆ ಮತ್ತು ಜಾಗೃತ‌ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ್ಯೂ ಸಹ, ಈ‌ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ‌ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು‌ ಕಲ್ಪಿಸಲಿ‌ ಎಂದು ಕೋರುತ್ತಾ, ತಪ್ಪಿತಸ್ಥ ಚಾಲಕನ ಮೇಲೆ ವಿಚಾರಣೆ ನಡೆಸಿ ಕಠಿಣ ಕ್ರಮ‌‌ ಜರುಗಿಸಲಾಗುವುದು ಎಂಬುದನ್ನು ತಿಳಿಸಿದ್ದಾರೆ.

ರಾಜ್ಯದಲ್ಲೊಂದು ಶಾಕಿಂಗ್ ಘಟನೆ: ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಮಾಸ್ಕ್ ಮ್ಯಾನ್ `ಚಿನ್ನಯ್ಯ’ ವಿರುದ್ಧ ಸೌಜನ್ಯಾ ತಾಯಿ `SIT’ಗೆ ದೂರು.!

Share. Facebook Twitter LinkedIn WhatsApp Email

Related Posts

ಬೇಸಿಗೆಯ ಬಿಸಿಲಿಗೆ ತತ್ತರಿಸುವ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿ: ಸಚಿವ ಕೆ.ಜೆ. ಜಾರ್ಜ್ ಕರೆ

10/04/2026 10:34 PM1 Min Read

ಸಾಗರ ತಾಲ್ಲೂಕು ಪಿಯುಸಿ ಫಲಿತಾಂಶ: ಸರ್ಕಾರಿ ಕಾಲೇಜು ಸೇರಿ ವಿವಿಧ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಭರ್ಜರಿ ಸಾಧನೆ!

10/04/2026 10:22 PM2 Mins Read

ಸಾಗರ ವಿಜ್ಞಾನ ವೇದಿಕೆಯಿಂದ ರಾಜ್ಯ ಮಟ್ಟದ ವಸತಿಸಹಿತ ವಿಜ್ಞಾನ ಬೇಸಿಗೆ ಶಿಬಿರ: ಏಪ್ರಿಲ್ 13ರಿಂದ ಚಾಲನೆ

10/04/2026 10:03 PM2 Mins Read
Recent News

ಬೇಸಿಗೆಯ ಬಿಸಿಲಿಗೆ ತತ್ತರಿಸುವ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿ: ಸಚಿವ ಕೆ.ಜೆ. ಜಾರ್ಜ್ ಕರೆ

10/04/2026 10:34 PM

ಸಾಗರ ತಾಲ್ಲೂಕು ಪಿಯುಸಿ ಫಲಿತಾಂಶ: ಸರ್ಕಾರಿ ಕಾಲೇಜು ಸೇರಿ ವಿವಿಧ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಭರ್ಜರಿ ಸಾಧನೆ!

10/04/2026 10:22 PM

ಸಾಗರ ವಿಜ್ಞಾನ ವೇದಿಕೆಯಿಂದ ರಾಜ್ಯ ಮಟ್ಟದ ವಸತಿಸಹಿತ ವಿಜ್ಞಾನ ಬೇಸಿಗೆ ಶಿಬಿರ: ಏಪ್ರಿಲ್ 13ರಿಂದ ಚಾಲನೆ

10/04/2026 10:03 PM

ಖರ್ಗೆ ಪ್ರಚೋದನಾಕಾರಿ ಭಾಷಣ: ಸಾಗರದಲ್ಲಿ ಬಿಜೆಪಿ ವತಿಯಿಂದ ಡಿವೈಎಸ್‌ಪಿಗೆ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಕೆ

10/04/2026 9:55 PM
State News
KARNATAKA

ಬೇಸಿಗೆಯ ಬಿಸಿಲಿಗೆ ತತ್ತರಿಸುವ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿ: ಸಚಿವ ಕೆ.ಜೆ. ಜಾರ್ಜ್ ಕರೆ

By kannadanewsnow0910/04/2026 10:34 PM KARNATAKA 1 Min Read

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದ್ದು, ಬಿಸಿಲಿನ ಬೇಗೆಯಿಂದ ಕೇವಲ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳು ಕೂಡ…

ಸಾಗರ ತಾಲ್ಲೂಕು ಪಿಯುಸಿ ಫಲಿತಾಂಶ: ಸರ್ಕಾರಿ ಕಾಲೇಜು ಸೇರಿ ವಿವಿಧ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಭರ್ಜರಿ ಸಾಧನೆ!

10/04/2026 10:22 PM

ಸಾಗರ ವಿಜ್ಞಾನ ವೇದಿಕೆಯಿಂದ ರಾಜ್ಯ ಮಟ್ಟದ ವಸತಿಸಹಿತ ವಿಜ್ಞಾನ ಬೇಸಿಗೆ ಶಿಬಿರ: ಏಪ್ರಿಲ್ 13ರಿಂದ ಚಾಲನೆ

10/04/2026 10:03 PM

ಖರ್ಗೆ ಪ್ರಚೋದನಾಕಾರಿ ಭಾಷಣ: ಸಾಗರದಲ್ಲಿ ಬಿಜೆಪಿ ವತಿಯಿಂದ ಡಿವೈಎಸ್‌ಪಿಗೆ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಕೆ

10/04/2026 9:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.