ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆ ಎಸ್ ಆರ್ ಟಿಸಿಗೆ ಮತ್ತಷ್ಟು ಪ್ರಶಸ್ತಿಗಳ ಸರಮಾಲೆಯೇ ಬಂದಿದೆ. 7 ರಾಷ್ಟ್ರೀಯ, ವಿಶ್ವ ನಾವೀನ್ಯತೆಯ ಪ್ರಶಸ್ತಿಗಳು ಕೆ ಎಸ್ ಆರ್ ಟಿಸಿಗೆ ಬಂದಿವೆ.
ಈ ಬಗ್ಗೆ ನಿಗಮದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೆಎಸ್‌ಆರ್‌ಟಿಸಿ ಅನುಷ್ಠಾನಗೊಳಿಸಿರುವ ಉಪಕ್ರಮಗಳಿಗೆ ರಾಷ್ಟ್ರೀಯ ಹಾಗೂ ವಿಶ್ವ ನಾವೀನ್ಯತೆ ಪ್ರಶಸ್ತಿಗಳು ಈ ಕೆಳಕಂಡ ವರ್ಗಗಳಲ್ಲಿ ಲಭಿಸಿರುತ್ತದೆ ಎಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ.17, 18 ಮತ್ತು 21, 2025ರಂದು ಮುಂಬೈನಲ್ಲಿ ನಡೆಯಲಿದೆ ಎಂದು ತಿಳಿಸಿದೆ.
ಹೀಗಿದೆ ಕೆ ಎಸ್ ಆರ್ ಟಿಸಿಗೆ ಬಂದಿರುವಂತ ಪ್ರಶಸ್ತಿಗಳ ಪಟ್ಟಿ
1. ಉತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ
2. ಕನಸುಗಳ ಕಂಪನಿಗಳು – ಉದ್ಯೋಗದಲ್ಲಿ ಆರೋಗ್ಯ ನಿರ್ವಹಣೆಗೆ ಗೌರವ
3. ವರ್ಷದ ವ್ಯವಹಾರ ನಾಯಕ ಪ್ರಶಸ್ತಿ – ಕಾರ್ಯಸ್ಥಳ ಮತ್ತು ಜನಸಂಪತ್ತು ಅಭಿವೃದ್ಧಿ
4. ವಿಶ್ವ ಆರೈಕೆ ಪ್ರಶಸ್ತಿ – ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮ
5. ವಿಶ್ವ ನಾವಿನ್ಯತೆ ಪ್ರಶಸ್ತಿ – ಆರೋಗ್ಯ ತಂತ್ರಜ್ಞಾನದಲ್ಲಿ ಉತ್ತಮ ನಾವೀನ್ಯತೆ
6. ಜಾಗತಿಕ ತಯಾರಿಕಾ ನಾಯಕರ ಪ್ರಶಸ್ತಿ – ಸುಸ್ಥಿರತೆಯ ಗೌರವ
7. ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿ
ಅನ್ನ-ಅಕ್ಷರ ದಾಸೋಹದಲ್ಲಿ ಸಂಸ್ಥೆಯ ಕೊಡುಗೆ ಅಪಾರ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್