ಬೆಂಗಳೂರು: ರಾಜ್ಯದ ಜನರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುತ್ತಿರುವಂತ ಕೆ ಎಸ್ ಆರ್ ಟಿ ಸಿಗೆ, ಸಾಲು ಸಾಲು ಪ್ರಶಸ್ತಿಗಳೇ ಹರಿಸಿಕೊಂಡು ಬರುತ್ತಿವೆ. ಇದೀಗ ಉತ್ತಮ ಸೇವೆಗಾಗಿ ಕೆ ಎಸ್ ಆರ್ ಟಿ ಸಿ ಗೆ 6 ಪ್ರಶಸ್ತಿಗಳ ಗರಿಮೆ ಸಂದಿದೆ. ಇದರೊಂದಿಗೆ ನಿಗಮವು ಕಳೆದ 8 ತಿಂಗಳುಗಳಲ್ಲಿ 51 ಪ್ರಶಸ್ತಿ ಸಂದಂತೆ ಆಗಿದೆ.
ಈ ಕುರಿತಂತೆ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ, World Manufacturing Congress ಹಾಗೂ World Marketing Congressನ 5 ಪ್ರಶಸ್ತಿಗಳು ಹಾಗೂ ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರಿಗೆ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿರುತ್ತದೆ ಎಂದು ತಿಳಿಸಿದೆ.
ಈ ಕೆಳಕಂಡ ವರ್ಗಗಳಲ್ಲಿ ನಿಗಮಕ್ಕೆ ಪ್ರಶಸ್ತಿಯು ಲಭಿಸಿರುತ್ತದೆ.
• ವಿದ್ಯುತ್ ವಾಹನಗಳ ಕೈಗಾರಿಕಾ ನಾಯಕತ್ವ ಪ್ರಶಸ್ತಿ. ಇ.ವಿ.ಪವರ್ ಪ್ಲಸ್
• ಜಾಗತಿಕ ಬ್ರಾಂಡ್ ಉತ್ಕೃಷ್ಟತೆ ಪ್ರಶಸ್ತಿ- ಅತ್ಯುತ್ತಮ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಉಪಕ್ರಮ
• ವರ್ಷದ ವ್ಯಾವಹಾರಿಕ ನಾಯಕತ್ವ ಪ್ರಶಸ್ತಿ- ಅತ್ಯುತ್ತಮ ವಿನೂತನ ಉಪಕ್ರಮಸಂಸ್ಥೆ
• ಜಾಗತಿಕ ಮಾನವ ಸಂಪನ್ಮೂಲ ಉತ್ಕೃಷ್ಟತೆ ಪ್ರಶಸ್ತಿ- ಕಾರ್ಮಿಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಸಂಸ್ಥೆ
• ಜಾಗತಿಕ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ.-ಜಾಗತಿಕ ಮಾನವ
ಸಂಪನ್ಮೂಲ ಉಪಕ್ರಮ
ಇದಲ್ಲದೆ, ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರಾದ ಡಾ. ಲತಾ ಟಿ.ಎಸ್ ರವರಿಗೆ ವಿಶ್ವ ಮಾರ್ಕೆಟಿಂಗ್ ಉತ್ಕೃಷ್ಟತೆಗಾಗಿ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿರುತ್ತದೆ ಎಂದಿದೆ.
ಇಂದು ಮುಂಬಯಿಯಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಮಿಸ್. ನಿನಾ ಇ ಉಡರ್ಡ, ಅಧ್ಯಕ್ಷರು ಹಾಗೂ ಮುಖ್ಯಸ್ಥರು, ನಿನಾ ಇ ಉಡರ್ಡ ಅಸೋಸಿಯೇಟ್ಸ್, ಯುನೈಟೆಡ್ ಸ್ಟೇಟ್ಸ್ ಹಾಗೂ ಡಾ. ಓವಿಲಿಯಾ ಫೆರ್ನಾಂಡಿಸ್, ಮಾಲೀಕರು ಮತ್ತು ಸಂಸ್ಥಾಪಕರು, ಓಝೋನ್ ಗ್ರೂಪ್, ದುಬೈ ರವರು ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು ಎಂದು ಹೇಳಿದೆ.
ಡಾ.ಲತಾ ಟಿ.ಎಸ್. ಮಂಡಳಿ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ, ಹೆಚ್ ಎಸ್. ಸತೀಶ್, ವಿಭಾಗೀಯ ತಾಂತ್ರಿಕ ಅಭಿಯಂತರರು, ಸೌಮ್ಯ.ಸಿ. ವಿಭಾಗೀಯ ತಾಂತ್ರಿಕ ಶಿಲ್ಪಿ ಹಾಗೂ ಶಿಬಾ.ಎಸ್. ಸಹಾಯಕ ಆಡಳಿತಾಧಿಕಾರಿ ರವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಶಿವಮೊಗ್ಗ: ಫೆ.18ರ ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING: ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟ: 9 ಮಂದಿ ಸಜೀವ ದಹನ, ಹಲವರಿಗೆ ಗಾಯ