ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2023-24ನೇ ಶೈಕ್ಷಣಿಕ ಸಾಲಿನ (ಜನವರಿ/ಫೆಬ್ರವರಿ ಆವೃತ್ತಿ) ಬಿ.ಇಡಿ. ಪ್ರವೇಶ ಪರೀಕ್ಷೆಯು (B.Ed CET) ದಿನಾಂಕ: 10-03-2024ರಂದು ನಡೆಸಲಾಗಿದ್ದು, ಸದರಿ ಪರೀಕ್ಷೆಯ ಕೀ-ಉತ್ತರಗಳನ್ನು (Key Answers) ದಿನಾಂಕ: 11-03-2024ರ ಸೋಮವಾರ ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ಕೀ-ಉತ್ತರಗಳ (Key Answers) ಬಗ್ಗೆ ಯಾವುದಾದರು ಆಕ್ಷೇಪಣೆಗಳು ಇದ್ದಲ್ಲಿ ಅಭ್ಯರ್ಥಿಗಳು ದಿನಾಂಕ: 15-03-2024 ಶುಕ್ರವಾರ ರಾತ್ರಿ 11:59 ಗಂಟೆಯ ಒಳಗೆ ಇ-ಮೇಲ್ ವಿಳಾಸ: re-ksouexam@ka.gov.in ಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಅಂತ ತಿಳಿಸಿದೆ.