ಹಾಸನ: ಜಿಲ್ಲೆಯಲ್ಲಿ ಜನರು ಬೆಚ್ಚಿ ಬೀಳುವಂತೆ ಹಸೆಮಣೆ ಏರಬೇಕಿದ್ದಂತ ಕೆ ಎಸ್ ಐ ಎಸ್ ಎಫ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವಂತ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ ದುದ್ದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಗೇಶಪುರದ ವಿ.ಹರೀಶ್ ಅವರು ಬೆಂಗಳೂರಿನ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ನವೆಂಬರ್.11ರಂದು ಮದುವೆ ಕೂಡ ನಿಗದಿಯಾಗಿತ್ತು.
ಮದುವೆ ಆಮಂತ್ರಣ ಪತ್ರವನ್ನು ಹಂಚಿಕೆ ಮಾಡಿ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಮೂಲಕ ಹಸೆಮಣೆ ಏರಬೇಕಿದ್ದಂತ ಕೆ ಎಸ್ ಐ ಎಸ್ ಎಫ್ ಕಾನ್ಸ್ ಸ್ಟೇಬಲ್ ವಿ.ಹರೀಶ್ ಬರ್ಬರವಾಗಿ ಕೊಲೆ ಮಾಡಲಾಗಿದೆ.








