ಬೆಂಗಳೂರು: ಕೆಸೆಟ್ 2023ರ ಪರೀಕ್ಷೆಯ ನಂತ್ರ, ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಾಗಿತ್ತು. ಯಾರೆಲ್ಲ ಅಭ್ಯರ್ಥಿಗಳು ಉತ್ತೀರ್ಣರಾದ ಬಳಿಕ, ದಾಖಲಾತಿ ಪರೀಶಿಲನೆ ಹಾಜರಾಗಿದ್ದಾರೋ, ಅವರೆಲ್ಲರಿಗೂ ಪೋಸ್ಟ್ ಮೂಲಕ ಮನೆಗೆ ಪ್ರಮಾಣ ಪತ್ರವನ್ನು ರವಾನಿಸಲಾಗುತ್ತದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಅದರಲ್ಲಿ ದಿನಾಂಕ:11.07.2024 ರಿಂದ 22.07.2014 ರವರೆಗೆ ಜರುಗಿದ ಸೆಟ್-2023 ದಾಖಲಾತಿ ಪರಿಶೀಲನೆಗೆ ಆನಿವಾರ್ಯ ಕಾರಣಗಳಿಂದ ಹಾಜರಾಗದ ತಾತ್ಕಾಲಿಕ ಪಟ್ಟಿಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗಾಗಿ ದಿನಾಂಕ:31.07.2024ರಂದು ಕೊನೆಯ ಅವಕಾಶವನ್ನು ನೀಡಲಾಗಿದೆ ಎಂದಿದೆ.
ಮುಂದುವರೆದು, ದಾಖಲಾತಿ ಪರಿಶೀಲನೆ ಸಂಪೂರ್ಣಗೊಂಡು ಪ್ರಮಾಣಪತ್ರ ಪಡೆಯದಿರುವ ಅಭ್ಯರ್ಥಿಗಳು ದಿನಾಂಕ:31.07.2024ರಂದು ಪ್ರಮಾಣ ಪತ್ರ ಪಡೆದುಕೊಳ್ಳಲು ಕೊನೆಯ ಅವಕಾಶವಾಗಿದೆ. ದಾಖಲಾತಿ ಪರಿಶೀಲನೆಯಾಗಿದ್ದು ಪ್ರಮಾಣ ಪತ್ರವನ್ನು ದಿನಾಂಕ:31.07.2024ರಂದು ಖುದ್ದು ಹಾಜರಾಗಿ ಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಪೋಸ್ಟ್ ಮೂಲಕ ಕಳುಹಿಸಲಾಗುವುದು ಅಂತ ಕೆಇಎ ಕಾರ್ಯನಿರ್ವಾಹ ನಿರ್ದೇಶಕರು ತಿಳಿಸಿದ್ದಾರೆ.
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ: ರಾಹುಲ್ ಗಾಂಧಿ ಕ್ಷಮೆ ಕೇಳುತ್ತಾರೆಯೇ ?ಬಿಜೆಪಿ ಪ್ರಶ್ನೆ
BREAKING: ‘ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ’ ಸದಸ್ಯರಾಗಿ ‘ನೀತಾ ಅಂಬಾನಿ’ ಅವಿರೋಧವಾಗಿ ಮರು ಆಯ್ಕೆ