ಬೆಂಗಳೂರು: 2024ರ ಕೆಸೆಟ್ ಪರೀಕ್ಷೆಗೆ ಅಧಿಸೂಚನೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು ಬಿಡುಗಡೆ ಮಾಡಿದ್ದಾರೆ. ಕೆಸೆಟ್-2024ಕ್ಕೆ ನವೆಂಬರ್ 24ಕ್ಕೆ ಪರೀಕ್ಷೆ ನಡೆಯಲಿದೆ.
2023ನೇ ಸಾಲಿನ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (Karnataka Assistant Professors Eligibility Test-KSET 2024) ಮುಗಿಸಿ, ಪ್ರಮಾಣ ಪತ್ರ ನೀಡಿದ ದಿನವೇ 2024ನೇ ಸಾಲಿನ ಅಧಿಸೂಚನೆಯನ್ನೂ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ ಅವರು ಬಿಡುಗಡೆ ಮಾಡಿದರು.
ಜುಲೈ 22ರಿಂದ ಆಗಸ್ಟ್ 22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ 26 ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನವಾಗಿದೆ. ನವೆಂಬರ್ 24ರಂದು ಪರೀಕ್ಷೆ ನಡೆಸುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ಘೋಷಿಸಿದರು.
ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಿದ ಕೆಇಎ ಮತ್ತು ಅದರ ಸಿಬ್ಬಂದಿಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸ್ವಾಗತಿಸಿದರು. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ, ಕೆಸೆಟ್ ಅಧ್ಯಕ್ಷ ಪ್ರೊ ತಿಮ್ಮೇಗೌಡ ಈ ಸಂದರ್ಭದಲ್ಲಿ ಇದ್ದರು.
‘ಕೆಸೆಟ್-23’ರಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ‘ಸಚಿವ ಡಾ.ಎಂ.ಸಿ ಸುಧಾಕರ್’ ವಿತರಣೆ
BIG NEWS: ‘ರಾಜ್ಯ ಸರ್ಕಾರ’ದಿಂದ ಮಹಾ ಎಡವಟ್ಟು: ‘ಸತ್ತ ಅಧಿಕಾರಿ’ಯನ್ನೇ ವರ್ಗಾವಣೆ