ಬೆಂಗಳೂರು: ದಿನಾಂಕ 13-01-2024 ರಂದು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ-2023 (K-SET-2023) ನಡೆಯಲಿದೆ. ಈ ಪರೀಕ್ಷೆಗಾಗಿ ಕೆಇಎಯಿಂದ ಪ್ರವೇಶಪತ್ರವನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ದಿನಾಂಕ 13-01-2024ರಂದು ಕೆಸೆಟ್ ಪರೀಕ್ಷೆ-2023 ಅನ್ನು ನಿಗದಿ ಪಡಿಸಲಾಗಿದೆ. ಇಂತಹ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವಂತ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದ್ದು, https://cetonline.karnataka.gov.in/examcenter2023/Forms/hallticket.aspx ಲಿಂಕ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವಂತೆ ತಿಳಿಸಿದೆ.
ಪ್ರವೇಶ ಪತ್ರ ಡೌನ್ ಲೋಡ್ ಹೇಗೆ.?
ಕೆಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಂತ ಅಭ್ಯರ್ಥಿಗಳು ಈ ಮೇಲ್ಕಂಡ ಲಿಂಕ್ ಕ್ಲಿಕ್ ಮಾಡಿ, ಅರ್ಜಿ ಸಲ್ಲಿಸಿದಂತ ಇಲಾಖೆ ಎಂಬಲ್ಲಿ ಕೆಸೆಟ್-2024 ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು.
ಈ ಬಳಿಕ ಅಭ್ಯರ್ಥಿಗಳು KEA ಅರ್ಜಿ ಸಂಖ್ಯೆಯನ್ನು ನಮೂದಿಸಿಬೇಕು. ಆನಂತ್ರ ಅಭ್ಯರ್ಥಿಯ ಹೆಸರು (ಮೊದಲ ನಾಲ್ಕು ಅಕ್ಷರಗಳು) ಅನ್ನು ನಮೂದಿಸಿಬೇಕು. ಈ ಬಳಿಕ ಸಬ್ ಮಿಟ್ ಬಟನ್ ಕ್ಲಿಕ್ ಮಾಡಿದ್ರೆ ನಿಮ್ಮ ಪ್ರವೇಶ ಪತ್ರ ಲಭ್ಯವಾಗಲಿದ್ದು, ಡೌನ್ ಲೋಡ್ ಆಗಲಿದೆ.
BREAKING: ನನ್ನನ್ನು ಸಾಯಿಸಲು ಹೊಂಚು ಹಾಕಿಸ್ತಿದ್ದಾರೆ – ವಿದ್ಯಾಧರನಾಥಶ್ರೀ ಗಂಭೀರ ಆರೋಪ
BIG NEWS: ರಾಮಜನ್ಮಭೂಮಿ ಹೋರಾಟಗಾರ ‘ಶ್ರೀಕಾಂತ್ ಪೂಜಾರಿ’ ಬಂಧನ ಪ್ರಕರಣ: ಬರೋಬ್ಬರಿ 15 ಕೇಸ್ ದಾಖಲು