ಶಿವಮೊಗ್ಗ: ನನಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಲಿಲ್ಲ. ಮಗನಿಗೆ ಕೊಡ್ತಾರೆ ಅಂದ್ರೆ ಆವನಿಗೆ ಕೊಡಲಿಲ್ಲ. ಈಗ ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ನೀಡ್ತಾರೆ ಅಂದ್ರೆ ಈಗಲೂ ಕೊಡಲಿಲ್ಲ. ಹೀಗಾಗಿ ತಾನು ತನ್ನ ಪುತ್ರನಿಗೆ ಟಿಕೆಟ್ ನೀಡದ ಕಾರಣಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಅವರ ವಿರುದ್ಧವೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಲೋಕಸಭಾ ಚುನಾವಣೆಗೆ ಹಾವೇರಿಯಿಂದ ನನ್ನ ಮಗ ಕೆ.ಇ ಕಾಂತೇಶ್ ಗೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್ ಕೋರಿದ್ದೆ. ಆದ್ರೇ ಅವನಿಗೂ ಟಿಕೆಟ್ ನೀಡಲಿಲ್ಲ ಎಂಬುದಾಗಿ ಕಿಡಿಕಾರಿದರು.

ನಾನು ಎಂದಿಗೂ ಒಂದು ಜಾತಿಗೆ ಸೀಮಿತನಾಗಿಲ್ಲ. ನಾನು ಹಿಂದುತ್ವ ಸಿದ್ಧಾಂತವನ್ನೇ ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಸಿಗೋ ನಿರೀಕ್ಷೆಯಲ್ಲಿ ಇದ್ದೆ. ಆದ್ರೇ ನನ್ನ ಮಗನಿಗೆ ಟಿಕೆಟ್ ನೀಡಿಲ್ಲ. ಇದು ನನಗೆ ಮಾಡಿದ ಅನ್ಯಾಯ ಎಂಬುದಾಗಿ ಆಕ್ರೋಶವನ್ನು ಹೊರ ಹಾಕಿದರು. ಅಲ್ಲದೇ ನನ್ನ ಪುತ್ರನಿಗೆ ಟಿಕೆಟ್ ನೀಡದ ಕಾರಣ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧವೇ ಲೋಕಸಭಾ ಚುನಾವಣೆಗೆ ಇಳಿಯುವುದಾಗಿ ಘೋಷಣೆ ಮಾಡಿದರು.

ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಿ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾವುಕ ನುಡಿ

‘ಮಾರುವೇಷ’ದಲ್ಲಿ ರೋಗಿಯಂತೆ ‘ಸರ್ಕಾರಿ ಆಸ್ಪತ್ರೆ’ಗೆ ತೆರಳಿ ಅವ್ಯವಸ್ಥೆ ಬಹಿರಂಗ ಪಡಿಸಿದ ‘IAS ಅಧಿಕಾರಿ’: ವೀಡಿಯೋ ವೈರಲ್

Share.
Exit mobile version