ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ ಎಂದು ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ಸರ್ಕಾರ ಜನರ ಕಷ್ಟಕ್ಕೆ ಮಿಡಿದು ಪರಿಹಾರ ಕೊಡುವ ಬದಲಿಗೆ ಪ್ರಚಾರದಲ್ಲಿ ಮುಳುಗಿದೆ ಎಂದಿದ್ದಾರೆ.

ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ನಾನು ಕೈ ಜೋಡಿಸಿ ಮನವಿ ಮಾಡಲು ಬಂದಿದ್ದೇನೆ. ನಿಮ್ಮ ಎದುರು ಹುಟ್ಟಿದ ಮಕ್ಕಳು ನಾವು. ನಾವು ದಾರಿ ತಪ್ಪಿದ್ದರೆ ತಿದ್ದಿಕೊಳ್ಳಲು ಅವಕಾಶ ಕೊಡಲು ಸಾದ್ಯವಿಲ್ಲವೇ ಎಂದು ಕೇಳಲು ಬಂದಿದ್ದೇನೆ. ನಮ್ಮಿಂದ ಕೆಲವು ಲೋಪಗಳು ಆಗಿರಬಹುದು. ನಿಮ್ಮ ಮನಸ್ಸಿನಲ್ಲಿ ಆಗಿರುವ ನೊವನ್ನು ನೀವು ನಮ್ಮೆದುರು ಹೇಳಲ್ಲ. ಹೇಳಿದರೆ ನಮಗೆ ನೋವಾಗುತ್ತದೆ ಎಂದು ಸುಮ್ಮನಾಗಿದ್ದೀರಿ. ಆದರೆ, ನೀವು ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡರೆ ಮುಂದೆ ಏನಾಗುತ್ತೆ ಎನ್ನೋದು ಗೊತ್ತಿದೆ. ಕೈ ಮುಗಿದು ಮನವಿ ಮಾಡ್ತೇನೆ, ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ನೀಡಿ ಎಂದು ಗದ್ಗದಿತರಾದರು ಮಾಜಿ ಮುಖ್ಯಮಂತ್ರಿಗಳು.

ನಮ್ಮ ಅಣ್ಣ ಅಂತ ನಾನು ವಹಿಸಿಕೊಂಡು ಮಾತನಾಡುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರೇವಣ್ಣ ನಂಬರ್ ಒನ್ ಎಂದು ಹೇಳಲು ಹೆಮ್ಮೆ ಆಗುತ್ತದೆ. ಐದು ವರ್ಷ ಸಿಎಂ, 15 ಬಜೆಟ್ ಮಂಡನೆ, ಹತ್ತು ವರ್ಷ ಡಿಸಿಎಂ ಆಗಿದ್ದವರು. ಅಂತಹವರ ಕ್ಷೇತ್ರದ ಒಂದು ಊರಿಗೆ ಅವರ ಮಗ ಹೋದಾಗ ಅವರಿಗೆ ಗೇರಾವ್ ಹಾಕಿದರು ಜನರು. ಹಾಸನ ಜಿಲ್ಲೆಯಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಆದಾಗ್ಯೂ ಕೆಲವು ತಪ್ಪು ಆಗಿವೆ, ನಾನು ಹೊಗಳಿಕೊಂಡು ಹೋಗಲು ಬಂದಿಲ್ಲ. ಆದರೆ, ಈ ಕ್ಷೇತ್ರವನ್ನು ಕುತಂತ್ರದಿಂದ ಪಡೆಯಲು ಯತ್ನ ನಡೆಯುತ್ತಿದೆ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಸೋತಿದಾರೆ, ಗೆದ್ದಿದಾರೆ. ಅದರೂ ಅವರು ಮನೆಯಲ್ಲಿ ಕೂತಿಲ್ಲ. 1989ರಲ್ಲಿ ದೇವೇಗೌಡರು ಸೋಲಬೇಕಾಯಿತು. ಆ ಸೋಲಿಗೆ ಕಾರಣ ಏನು? ಕೆಲವರು ಅಪಪ್ರಚಾರ ಮಾಡಿದ್ದರಿಂದ ಅವರಿಗೆ ಸೋಲಾಯಿತು. ಆಮೇಲೆ ನಂತರದ ಚುನಾವಣೆಯಲ್ಲಿ ಏನಾಯಿತು, ಅವರು ಮುಖ್ಯಮಂತ್ರಿ, ಪ್ರಧಾನಿಯೂ ಆದರು ಎಂದು ಜಿಲ್ಲೆಯ ರಾಜಕೀಯವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

BREAKING: ತುಮಕೂರಲ್ಲಿ ಎರಡು ‘KSRTC ಬಸ್’ಗಳ ನಡುವೆ ಭೀಕರ ಅಪಘಾತ: 15ಕ್ಕೂ ಹೆಚ್ಚು ಜನರಿಗೆ ಗಾಯ

Breaking News: ನೂತನ ಚುನಾವಣಾ ಆಯುಕ್ತರಾಗಿ ಸುಖ್ಬೀರ್ ಸಂಧು, ಜ್ಞಾನೇಶ್ ಕುಮಾರ್ ನೇಮಕ

Share.
Exit mobile version