ಶಿವಮೊಗ್ಗ: ಜಿಲ್ಲೆಯ ಲೋಕಸಭಾ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ. ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋದಾಗಿ ಘೋಷಣೆ ಮಾಡಿದ್ದಾರೆ.
ಇದು ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಆದರೇ ಮೋದಿ ವಿರುದ್ಧ ಹೋಗುವುದಿಲ್ಲ. ನಾನು ಗೆದ್ದರೇ ಮೋದಿಯನ್ನೇ ಬೆಂಬಲಿಸುವುದಾಗಿ ತಿಳಿಸಿದರು.
ನಾನು ಪ್ರಾಣ ಹೋದರೂ ‘ಮೋದಿ ವಿರುದ್ಧ’ ಹೋಗುವುದಿಲ್ಲ – ‘ಕೆ.ಎಸ್.ಈಶ್ವರಪ್ಪ’
ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಪುತ್ರನಿಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಂತ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದೇ ಶಾಕ್ ನೀಡಿತ್ತು. ಈ ಕಾರಣಕ್ಕೆ ಸಿಡಿದೆದ್ದಿದ್ದಂತ ಅವರು ಬಂಡಾಯ ಅಭ್ಯರ್ಥಿಯಾಗಿ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸೋದಾಗಿ ಘೋಷಿಸಿದ್ದರು. ಆದ್ರೇ ಇಂದು ಯುಟರ್ನ್ ಹೊಡೆದಿರುವಂತ ಅವರು, ನಾನು ಪ್ರಾಣ ಹೋದರೂ ಮೋದಿ ವಿರುದ್ಧ ಹೋಗುವುದಿಲ್ಲ ಅಂತ ತಿಳಿಸಿದ್ದಾರೆ.
ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಾನು ಪ್ರಾಣ ಹೋದರೂ ಮೋದಿ ವಿರುದ್ಧ ಹೋಗುವುದಿಲ್ಲ. ಮೋದಿ ಪ್ರಧಾನಿ ಆಗುವ ಮೊದಲು ಎಲ್ಲಾ ದೇಶಗಳು ಪಾಕ್ ಆಗಿದ್ದವು. ಆದ್ರೇ ಮೋದಿ ಪ್ರಧಾನಿ ಆದ ನಂತ್ರ ಎಲ್ಲಾ ದೇಶಗಳು ಭಾರತದ ಜೊತೆಗಿವೆ ಎಂದರು.
ಮುಸ್ಲೀಂ ರಾಷ್ಟ್ರಗಳು ಕೂಡ ಮೋದಿಗೆ ರತ್ನಗಂಬಳಿ ಹಾಸಿ ಕರೆಯುತ್ತಿವೆ. ನಮ್ಮ ದೇಶಕ್ಕೆ ಬನ್ನಿ ಎಂದು ಮೋದಿಗೆ ದುಂಬಾಲು ಬೀಳುತ್ತಿವೆ ಎಂದು ಹೇಳಿದರು.
ವಂಶ ಪಾರಂಪರ್ಯ ವಿರುದ್ಧ ಮೋದಿ ಮಾತನಾಡಿದ್ದಾರೆ. ಹೀಗಾಗಿ ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ ಎಂದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಬಿಎಸ್ ವೈ ಭೇಟಿ ವೇಳೆಯಲ್ಲಿ ಉದಾಸಿ ಹಾವೇರಿಯಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ನೀವು ಅನುಮತಿ ನೀಡಿದ್ರೇ ಕಾಂತೇಶ್ ಹಾವೇರಿಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದೆ ಎಂದು ತಿಳಿಸಿದರು.
ಹಾವೇರಿಯಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡೋದಾಗಿ ಭರವಸೆ ನೀಡಿದ್ದರು. ಟಿಕೆಟ್ ನೀಡಿದ್ರೇ ಗೆಲುವು ಕೂಡ ಸಾಧಿಸುತ್ತಿದ್ದರು. ಹಾವೇರಿಯಲ್ಲೇ ಹಾಸ್ಟೆಲ್ ನಲ್ಲಿ ಇದ್ದಾರೆ. ಸಂಬಂಧಿಕರ ಮನೆಯೂ ಇದೆ. ಆದ್ರೇ ಟಿಕೆಟ್ ನೀಡಲಿಲ್ಲ. ಅದು ಏನೇ ಆದ್ರೂ ಪ್ರಾಣ ಹೋದರೂ ನಾನು ಮೋದಿ ವಿರುದ್ಧ ಹೋಗುವುದಿಲ್ಲ ಅಂತ ಹೇಳಿದರು.
ಬೆಂಗಳೂರಲ್ಲಿ ‘ಕಿಲ್ಲರ್ BMTC’ಗೆ ಮತ್ತೊಂದು ಬಲಿ: ರಸ್ತೆದಾಟುತ್ತಿದ್ದ ವ್ಯಕ್ತಿಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವು
ಬಿಹಾರ ಸಚಿವ ಸಂಪುಟ ವಿಸ್ತರಣೆ : ಮಾಜಿ ಡಿಸಿಎಂ ‘ರೇಣು ದೇವಿ ಸೇರಿ 21 ನಾಯಕ’ರು ‘ನಿತೀಶ್ ಕುಮಾರ್’ ಪಡೆಗೆ ಸೇರ್ಪಡೆ