ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಬಿಜೆಪಿಗೆ ಮತ್ತಷ್ಟು ಬೆಂಬಲ ದೊರೆತಿದೆ. ನಾಳೆ ಬಿಜೆಪಿಯೊಂದಿಗೆ ಕೆಆರ್ ಪಿಪಿ ಪಕ್ಷ ವಿಲೀನಕ್ಕೆ ಶಾಸಕ ಜನಾರ್ಧನ ರೆಡ್ಡಿ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷಕ್ಕೆ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ಸೇರ್ಪಡೆ ನಿರ್ಧಾರ ಕೈಗೊಳ್ಳಲಾಗಿದೆ.
ಇಂದು KRPP ಸಂಸ್ಥಾಪಕ ಜನಾರ್ಧನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆ ಹಿನ್ನೆಲೆ, ಬೆಂಗಳೂರಿನಲ್ಲಿ ಇಂದು ತಮ್ಮ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದರು. ಜನಾರ್ಧನ ರೆಡ್ಡಿ ಬೆಂಬಲಿಗರು, ಪದಾಧಿಕಾರಿಗಳು, ಆಪ್ತರ ಜೊತೆ ಜನಾರ್ದನ ರೆಡ್ಡಿ ಸಭೆ ನಡೆಸಲಿದ್ದಾರೆ.ಈ ವೇಳೆ ಜನಾರ್ದನ ರೆಡ್ಡಿ ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಅಭಿಪ್ರಾಯವನ್ನು ಪಡೆದರು.
ಅಂತಿಮವಾಗಿ ನಾಳೆ ಕೆಆರ್ ಪಿಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅಲ್ಲದೇ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗೋದಕ್ಕೆ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಗಾಲಿ ಜನಾರ್ಧನ ರೆಡ್ಡಿ ಅವರು, ಬಿಜೆಪಿ ನಾಯಕರ ಆಹ್ವಾನದ ಮೇರೆಗೆ ನಾಳೆ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದೇನೆ. ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳೋದಾಗಿ ತಿಳಿಸಿದರು.
ಅಂದಹಾಗೇ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಕೆಆರ್ ಪಿಪಿ ಪಕ್ಷವನ್ನು ಶಾಸಕ ಗಾಲಿ ಜನಾರ್ಧನ ರೆಡ್ಡಿ ಸ್ಥಾಪಿಸಿದ್ದರು. ಈ ಪಕ್ಷದಿಂದಲೇ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿ ಗೆಲುವು ಕಂಡಿದ್ದರು. ಇಂತಹ ಪಕ್ಷವನ್ನು ನಾಳೆ ಬಿಜೆಪಿಯೊಂದಿಗೆ ವಿಲೀನಗೊಳಿಸುತ್ತಿದ್ದಾರೆ.
‘ಯೋ ಬರ್ಕೊಳಯ್ಯ ಶಿವಮೊಗ್ಗ ನಂದು’ : ಶಿವಣ್ಣನ ಮಾಸ್ ಡೈಲಾಗ್ ಗೆ ಅಭಿಮಾನಿಗಳು ‘ಫೀದಾ’
ಲೋಕಸಭಾ ಚುನಾವಣೆ: ಈವರೆಗೆ ರಾಜ್ಯದಲ್ಲಿ ‘ಎಷ್ಟು ಹಣ, ಮದ್ಯ, ವಸ್ತು ಸೀಜ್’ ಗೊತ್ತಾ? ಇಲ್ಲಿದೆ ಡೀಟೆಲ್ಸ್