Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆಯಲ್ಲಿ ನಿಮ್ಮ ‘ಕಿಡ್ನಿ’ಗಳ ಆರೋಗ್ಯದ ಕುರಿತು ಜಾಗರೂಕರಾಗಿರಿ ; ಈ ಸಲಹೆ ಅನುಸರಿಸಿ!

28/03/2026 8:52 PM

ದಾವಣಗೆರೆಯಲ್ಲಿ ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

28/03/2026 8:45 PM

BREAKING: ಹಾಸನದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಂಭೀರ ಗಾಯ

28/03/2026 8:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇನ್ನೆರಡು ದಿನಗಳಲ್ಲಿ KPSCಯಿಂದ ವಾಣಿಜ್ಯ ತೆರಿಗೆ ಇಲಾಖೆಯ ಪರೀಕ್ಷಕರ ಅಂತಿಮ ಪಟ್ಟಿ ಪ್ರಕಟ: ಎಸ್.ಸುರೇಶ್ ಕುಮಾರ್ ಮಾಹಿತಿ
KARNATAKA

ಇನ್ನೆರಡು ದಿನಗಳಲ್ಲಿ KPSCಯಿಂದ ವಾಣಿಜ್ಯ ತೆರಿಗೆ ಇಲಾಖೆಯ ಪರೀಕ್ಷಕರ ಅಂತಿಮ ಪಟ್ಟಿ ಪ್ರಕಟ: ಎಸ್.ಸುರೇಶ್ ಕುಮಾರ್ ಮಾಹಿತಿ

By kannadanewsnow0910/02/2025 6:58 PM

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ ಪರೀಕ್ಷಕರ ಅಂತಿಮ ಪಟ್ಟಿ ಇನ್ನೆರಡು ದಿನಗಳಲ್ಲಿ ಪ್ರಕಟವಾಗುವುದಾಗಿ ನನಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ ಎಂಬುದಾಗಿ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ತಮ್ಮ ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವಂತ ಅವರು, ಜನವರಿ 24ರಂದು ನಾನು ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಿಗೆ, ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳಿಗೆ. ಪತ್ರ ಒಂದನ್ನು ಬರೆದು #ವಾಣಿಜ್ಯ_ತೆರಿಗೆ_ಇಲಾಖೆಯ_ಪರಿವೀಕ್ಷಕರ (230 ಹುದ್ದೆಗಳು)  ಪರೀಕ್ಷೆ ನಡೆದು ಸುಮಾರು ವರ್ಷಗಳಾದರೂ  ಇನ್ನೂ ಅಂತಿಮ ಪಟ್ಟಿ ಬಿಡುಗಡೆಯಾಗದಿರುವ ಬಗ್ಗೆ ಪ್ರಸ್ತಾಪಿಸಿ ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ ಎಂದಿದ್ದಾರೆ.

ಇಲ್ಲದಿದ್ದಲ್ಲಿ ಫೆಬ್ರವರಿ ಮೊದಲನೇ ವಾರದಲ್ಲಿ ಲೋಕ ಸೇವಾ ಆಯೋಗದ ಬಾಗಿಲನ್ನು ತಟ್ಟಿ ನ್ಯಾಯ ಕೇಳುವುದಾಗಿ ತಿಳಿಸಿದ್ದೆ. ಅದೇ ರೀತಿ ಇಂದು ನಾನು ಲೋಕಸೇವಾ ಆಯೋಗದ ಕಟ್ಟಡದ ಬಾಗಿಲು ತಟ್ಟಿ  ಅಧ್ಯಕ್ಷರನ್ನು ಮತ್ತು ಕಾರ್ಯದರ್ಶಿಗಳನ್ನು ಭೇಟಿ ಮಾಡಿದೆ. ವಾಣಿಜ್ಯ ತೆರಿಗೆ ಇಲಾಖೆಯ ಪರೀಕ್ಷಕರ ಅಂತಿಮ ಪಟ್ಟಿ ಇನ್ನೆರಡು ದಿನಗಳಲ್ಲಿ ಪ್ರಕಟವಾಗುವುದಾಗಿ ನನಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.

ಇನ್ನುಳಿದಂತೆ

  1. A) ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕರ ಕಛೇರಿಯಲ್ಲಿನ ಸಹಕಾರ ಸಂಘಗಳ 47 ನಿರೀಕ್ಷಕರ ಅಂತಿಮ ಆಯ್ಕೆ ಪಟ್ಟಿ

B ) ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ 242 ಲೆಕ್ಕ ಸಹಾಯಕರ ಅಂತಿಮ ಆಯ್ಕೆ ಪಟ್ಟಿ

  1. C) ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ 15 ವಾಣಿಜ್ಯ ತೆರಿಗೆ ಪರಿವೀಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ

D ) ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ 67 ಕಿರಿಯ ಲೆಕ್ಕ ಸಹಾಯಕರ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ

  1. E) ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ 53 ಸಹಕಾರ ಸಂಘಗಳ ನಿರೀಕ್ಷೆದ ನಿರೀಕ್ಷಕರ ಅಂತಿಮ ಆಯ್ಕೆ ಪಟ್ಟಿಗಳನ್ನು ಇನ್ನು 15 ದಿವಸದ ಒಳಗಾಗಿ ಪ್ರಕಟ ಮಾಡುವುದಾಗಿ ಸಹ ತಿಳಿಸಿದ್ದಾರೆ.

ಉದ್ಯೋಗ ಸೌಧದ ಆಚೆ ಕಾದು ನಿಂತಿದ್ದ ಯುವ  ನಿಯೋಗಕ್ಕೆ ನಾನು ಈ ಎಲ್ಲಾ ಮಾಹಿತಿಯನ್ನು ನೀಡಿದಾಗ ಹತಾಶಗೊಂಡಿದ್ದ ಅವರ ಮುಖದಲ್ಲಿ ವಿಶ್ವಾಸದ ನಗೆ ಮೂಡಿದ್ದನ್ನು ಕಂಡು ನನಗೆ ಸಂತೋಷವಾಯಿತು.

ಕಳೆದ ಆಗಸ್ಟ್ ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ ನಾನು ಜನವರಿ ತಿಂಗಳಿಂದ ವಿಧಾನಸೌಧದ ಅರ್ಜಿ ಸಮಿತಿ ಸಭೆಗೆ ಹೋಗುತ್ತಿರುವುದನ್ನು ಬಿಟ್ಟರೆ ಉದ್ಯೋಗಾಕಾಂಕ್ಷಿ ಯುವಜನತೆಯ ಪರವಾಗಿ ನಾನು ಕಳೆದ ಆರು ತಿಂಗಳಲ್ಲಿ ಹತ್ತಿದ ಮೊದಲನೇ ಮೆಟ್ಟಲುಗಳೆಂದರೆ ಇಂದಿನ ಉದ್ಯೋಗ ಸೌಧದ ಈ ಮೆಟ್ಟಲುಗಳು ಎಂಬುದಾಗಿ ತಿಳಿಸಿದ್ದಾರೆ.

BJP ಆಂತರೀಕ ಬೇಗುದಿಗೆ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಬೇಸರ

Shocking News: ಆಸ್ಪತ್ರೆಯಲ್ಲಿ ಸತ್ತಿದ್ದಾನೆಂದು ಊರಿಗೆ ತರುವಾಗ ಬದುಕಿದ ವ್ಯಕ್ತಿ: ಶಾಕ್ ಆದ ಹಾವೇರಿ ಜನರು

Share. Facebook Twitter LinkedIn WhatsApp Email

Related Posts

ದಾವಣಗೆರೆಯಲ್ಲಿ ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

28/03/2026 8:45 PM2 Mins Read

BREAKING: ಹಾಸನದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಂಭೀರ ಗಾಯ

28/03/2026 8:42 PM1 Min Read

ಕಲಬುರಗಿಯಲ್ಲಿ ವರದಕ್ಷಿಣೆಗಾಗಿ ಪತ್ನಿಯ ಭೀಕರ ಕೊಲೆ; ಪತಿ ಸೇರಿ ಮೂವರ ಬಂಧನ!

28/03/2026 8:28 PM1 Min Read
Recent News

ಬೇಸಿಗೆಯಲ್ಲಿ ನಿಮ್ಮ ‘ಕಿಡ್ನಿ’ಗಳ ಆರೋಗ್ಯದ ಕುರಿತು ಜಾಗರೂಕರಾಗಿರಿ ; ಈ ಸಲಹೆ ಅನುಸರಿಸಿ!

28/03/2026 8:52 PM

ದಾವಣಗೆರೆಯಲ್ಲಿ ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

28/03/2026 8:45 PM

BREAKING: ಹಾಸನದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಂಭೀರ ಗಾಯ

28/03/2026 8:42 PM

ಐಪಿಎಲ್ ಚರಿತ್ರೆಯಲ್ಲಿ ಕೊಹ್ಲಿ ಹೊಸ ಮನ್ವಂತರ: ಆರ್‌ಸಿಬಿ ಪರ 19ನೇ ಸೀಸನ್ ಆಡಿ ವಿರಾಟ್ ವಿಶ್ವದಾಖಲೆ!

28/03/2026 8:34 PM
State News
KARNATAKA

ದಾವಣಗೆರೆಯಲ್ಲಿ ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

By kannadanewsnow0928/03/2026 8:45 PM KARNATAKA 2 Mins Read

ದಾವಣಗೆರೆ: ಬಿಜೆಪಿ ನಾಯಕ ಬಿ.ಜಿ. ಅಜಯ್ ಕುಮಾರ್ ಅವರು ಹಾಕಿದ್ದ ಸವಾಲನ್ನು ಸ್ವೀಕರಿಸಿ ದಾವಣಗೆರೆಗೆ ಆಗಮಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್…

BREAKING: ಹಾಸನದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಂಭೀರ ಗಾಯ

28/03/2026 8:42 PM

ಕಲಬುರಗಿಯಲ್ಲಿ ವರದಕ್ಷಿಣೆಗಾಗಿ ಪತ್ನಿಯ ಭೀಕರ ಕೊಲೆ; ಪತಿ ಸೇರಿ ಮೂವರ ಬಂಧನ!

28/03/2026 8:28 PM

KSRTCಯ ‘ಪಾರದರ್ಶಕ ನೇಮಕಾತಿ’ಗೆ ಪ್ರತಿಷ್ಠಿತ ರಾಷ್ಟ್ರೀಯ ‘ಸ್ಕಾಚ್’ ಪ್ರಶಸ್ತಿ ಗರಿ!

28/03/2026 7:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.