ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹೊಂದಿಕೊಂಡಿರುವ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ಹೈದರಾಬಾದ್ ಕರ್ನಾಟಕ ವೃಂದದ 20 ಕಿರಿಯ ಎಂಜನಿಯರ್ ಹುದ್ದೆಗಳನ್ನು ತುಂಬಲು ಕರ್ನಾಟಕ ಲೋಕಾಸೇವಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ಈ ತಿಂಗಳ 28ರಿಂದ ಆನ್‌ಲೈನ್ ಮೂಲಕ ಅರರ್ಜಿಗಳನ್ನು ಸಲ್ಲಿಸಬಹುದಾಗಿದೆ. ಏಪ್ರಿಲ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ಇಲಾಖೆಯಲ್ಲಿ ಖಾಲಿ ಇರುವ ಹೈದರಾಬಾದ್ ಕರ್ನಾಟಕ ವೃಂದದ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಪ್ರಥಮ ದರ್ಜೆ ಲೆಕ್ಕ ಸಹಾಯಕ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 71 ಹುದ್ದೆಗಳಿಗೂ ಲೋಕಾಸೇವಾ ಆಯೋಗವು ಇನ್ನಿತರ ಇಲಾಖೆಗಳ ಗ್ರೂಪ್ ಸಿ ವೃಂದ ನೇಮಕಾತಿಗಾಗಿ ಕರೆದಿರುವ ಅಧಿಸೂಚನೆಯಲ್ಲಿ ಸೇರಿಸಿ ಅರ್ಜಿಗಳನ್ನು ಆಹ್ವಾನಿಸಿದೆ.
ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ಹೈದರಾಬಾದ್ ಕರ್ನಾಟಕ ವೃಂದದ ಒಟ್ಟು 91 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದಂತಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ ಸೈಟ್ https://kpsc.kar.nic.in/ ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಬೆಂಗಳೂರಿಗರೇ ಗಮನಿಸಿ: ಮಾ.15ರವರೆಗೆ ಕೆರೆಮಿತ್ರ ನೋಂದಣಿಗೆ ಅವಧಿ ವಿಸ್ತರಣೆ
ರಾಜ್ಯದ ರೈತರೇ ಗಮನಿಸಿ : ʻಕೃಷಿ ಭಾಗ್ಯʼ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ