ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಿಂದ ( Karnataka Congress ) ಈಗಾಗಲೇ ಮುಂಬರುವಂತ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಪಡೆದಿತ್ತು. ಹೀಗೆ ಅರ್ಜಿ ಸಲ್ಲಿಸಿದಂತವರು ತಮಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವುದಾಗಿ ಹೇಳಿಕೊಂಡು ಓಡಾಡುತ್ತಿದ್ದರು. ಇಂತಹ ಟಿಕೆಟ್ ಆಕಾಂಕ್ಷಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಖಡಕ್ ವಾರ್ನಿಂಗ್ ಒಂದನ್ನು ನೀಡಿದ್ದಾರೆ. ಅದೇನು ಅಂತ ಮುಂದೆ ಓದಿ.

Congress Twitter War: ‘ಸಿದ್ರಾಮುಲ್ಲಾ ಖಾನ್’ ಎಂದ ಬಿಜೆಪಿಗರಿಗೆ ‘ಟ್ವಿಟ್’ನಲ್ಲಿ ಕಾಂಗ್ರೆಸ್ ಸಖತ್ ಢಿಚ್ಚಿ: ಇವರನ್ನೆಲ್ಲಾ ಏನೆಂದು ಕರೆಯಲೆಂದು ಪ್ರಶ್ನೆ.!

ಈ ಬಗ್ಗೆ 2023ರ ಸಾರ್ವತ್ರಿಕ ಚನಾವಣೆಗೆ ಕಾಂಗ್ರೆಸ್ ಪಕ್ಷದ ( Congress Party ) ವತಿಯಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುವಂತ ಆಕಾಂಕ್ಷಿಗಳಿಗೆ ಪತ್ರ ಬರೆದಿರುವಂತ ಅವರು, ಕಾಂಗ್ರೆಸ್ ನಿಂತ ಟಿಕೆಟ್ ಕೋರಿ ಅರ್ಜಿಯನ್ನು ಹಲವಾರು ಆಕಾಂಕ್ಷಿಗಳು ಸಲ್ಲಿಸಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್, ಕೆಲವೊಂದು ಮಾನದಂಡಗಳ ಅನುಸಾರ ಅಭ್ಯರ್ಥಿಯ ಆಯ್ಕೆ ಮಾಡಲಿದೆ ಎಂದಿದ್ದಾರೆ.

ಶಿವಮೊಗ್ಗ: ನಾಳೆ, ನಾಡಿದ್ದು ‘ಸೊರಬ ತಾಲೂಕಿನ’ ಈ ಗ್ರಾಮಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಇನ್ನೂ ಇದರ ನಡುವೆಯೂ ಕೆಲವೆಡೆ ಪಕ್ಷದ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ತಮ್ಮದೇ ಗುಂಪು ಕಟ್ಟಿಕೊಂಡು ಕೆಲಸ ಮಾಡುತ್ತಿರುವುದು, ಪತ್ರಿಕಾ ಹೇಳಿಕೆ ನೀಡಿ, ತಾವೇ ಮುಂದಿನ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವುದು, ಮುಂತಾದ ಜನರಲ್ಲಿ ಗೊಂದಲ ಮೂಡಿಸುವ ವಿಚಾರಗಳು ಎಐಸಿಸಿ ಮತ್ತು ಕೆಪಿಸಿಸಿ ಗಮನಕ್ಕೆ ಬಂದಿದೆ ಎಂದಿದ್ದಾರೆ.

BIG NEWS: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ – ಮಾಜಿ ಸಚಿವ ಜನಾರ್ಧನ ರೆಡ್ಡಿ ಸ್ಪಷ್ಟನೆ

ಈ ಹಿನ್ನಲೆಯಲ್ಲಿ ಪಕ್ಷದ ಅನುಮತಿ ಪಡೆಯದೇ ಯಾವುದೇ ಹೇಳಿಕೆಗಳನ್ನು ನೀಡಬಾರದು. ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಉಂಟಾಗುವಂತಹ ಸನ್ನಿವೇಶಗಳನ್ನು ನಿರ್ಮಿಸಬಾರದು ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

BREAKING NEWS : ಮೆಜೆಸ್ಟಿಕ್ ನ ‘KSRTC’ ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡ

ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವಂತ ಆಕಾಂಕ್ಷಿಗಳು ತಪ್ಪದೇ ಪ್ರತಿ ಕ್ಷೇತ್ರದ ಎಲ್ಲರೊಂದಿಗೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮತ್ತು ಬಲವರ್ಧನೆ ಮಾಡಬೇಕು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ಅರ್ಜಿ ಸಲ್ಲಿಸಿರುವಂತವರು ಎಲ್ಲಾ ಆಕಾಂಕ್ಷಿಗಳೊಂದಿಗೆ ಒಗ್ಗೂಡಿ ಪ್ರತಿಯೊಂದು ಬೂತ್ ಗಳಿಗೆ ತೆರಳಿ, ಬಿಜೆಪಿ ಆಡಳಿತದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

BIG BREAKING: ರಾಜ್ಯ ಸರ್ಕಾರದಿಂದ ‘ಗ್ರಾಮಲೆಕ್ಕಿಗರ ಹುದ್ದೆ’ಯನ್ನು ‘ಗ್ರಾಮ ಆಡಳಿತ ಅಧಿಕಾರಿ’ಯೆಂದು ‘ಪುನರ್ ಪದನಾಮೀಕರಣ’

ಈ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು. ಇದರ ಹೊರತಾಗಿ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಬಾರದು. ಸಂಬಂಧಿತ ಕೆಪಿಸಿಸಿ ಕಾರ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರುಗಳ ಅನುಮತಿ ಇಲ್ಲದೇ ಯಾವುದೇ ಸಭೆಗಳನ್ನು ನಡೆಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Share.
Exit mobile version