ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಭರ್ಜರಿ ತಯಾರಿ ನಡೆಸಿದೆ. ಇದಕ್ಕಾಗಿ ಬಂಗಳೂರು ಐದು ನಗರಪಾಲಿಕೆ ಚುನಾವಣೆ ಪೂರ್ವತಯಾರಿ ಸಮಿತಿ ರಚಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಈ ಸಂಬಂಧ ಆದೇಶ ಹೊರಡಿಸಿರುವಂತ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ, ಇದಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಬರುವ 5 ನಗರಪಾಲಿಕೆಗಳಲ್ಲಿ ಚುನಾವಣಾ ಪೂರ್ವತಯಾರಿ, ಪಕ್ಷ ಸಂಘಟನೆಗೆ ಸಂಬಂಧಪಟ್ಟ, ಇತರ ಪುಕ್ರಿಯೆಗಳನ್ನು ಪೂರ್ಣಗೊಳಿಸಿ ಪಕ್ಷವನ್ನು ಮುಂಬರುವ ನಗರಪಾಲಿಕೆ ಚುನಾವಣೆಗೆ ಸಜ್ಜುಗೊಳಿಸಲು “ಬೆಂಗಳೂರು 5 ನಗರಪಾಲಿಕೆ ಚುನಾವಣೆ ಪೂರ್ವತಯಾರಿ ಸಮಿತಿ” ರಚಿಸಲಾಗಿದೆ ಎಂದಿದ್ದಾರೆ.
ಈ ಕೆಳಕಾಣಿಸಿದ ಸಮಿತಿಯ ಎಲ್ಲ ಸದಸ್ಯರುಗಳು ತಮಗೆ ನೀಡಲಾದ ಜವಾಬ್ದಾರಿಯನ್ನು ವಹಿಸಿಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 5 ಬೆಂಗಳೂರು ನಗರಪಾಲಿಕೆಗಳಿ ನಡೆಸಲು ಉದ್ದೇಶಿಸಲಾದ ಚುನಾವಣೆಗೆ ಸಂಬಂಧಪಟ್ಟಂತೆ ಬೆಂಗಳೂರು ನಗರ ವ್ಯಾಪ್ತಿಯ ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು, ಮಾಜಿ ಮೇಯರ್’ಗಳು, ಮಾಜಿ ಬಿಬಿಎಂಪಿ ಸದಸ್ಯರು, ಬಿಸಿಸಿ ಅಧ್ಯಕ್ಷರು ಹಾಗೂ ಇತರ ಸ್ಥಳೀಯ ಮುಖಂಡರೊಂದಿಗೆ ಸಭೆಗಳನ್ನು ಆಯೋಜಿಸಿ, ಅವರೊಂದಿಗೆ ಚರ್ಚಿಸಿ ಅವರುಗಳು ನೀಡುವ ಮನವಿ ಅಥವಾ ಸಲಹೆಗಳನ್ನು ಕ್ರೋಡೀಕರಿಸಿ ಅವುಗಳನ್ನು ಅನುಷ್ಠಾನಗೊಳಿಸಲು ಎಲ್ಲ ರೀತಿಯಲ್ಲಿ ಸಹಕರಿಸಬೇಕಾಗಿ ಕೋರಿದ್ದಾರೆ.
ಜಿ.ಸಿ. ಚಂದ್ರಶೇಖರ್, ಕಾರ್ಯಾಧ್ಯಕ್ಷರು (ಆಡಳಿತ), ಕೆಪಿಸಿಸಿ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್ ಶಾಸಕರು, ಸಂಚಾಲಕರು
ಸದಸ್ಯರು
- 2024ರ ಲೋಕಸಭಾ ಅಭ್ಯರ್ಥಿಗಳು
- ಬೆಂಗಳೂರು ನಗರದ ಎಲ್ಲಾ 5 ಡಿಸಿಸಿ ಅಧ್ಯಕ್ಷರು
- 2023ರ ವಿಧಾನಸಭೆ ಅಭ್ಯರ್ಥಿಗಳು
- ಬೆಂಗಳೂರು ನಗರ ವಿಧಾನ ಪರಿಷತ್ ಸದಸ್ಯರು
- ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ
- ಕಾರ್ಯದರ್ಶಿಗಳು (ಬೆಂಗಳೂರು ನಗರವಾಸಿ)
- ಬೆಂಗಳೂರು ನಗರ ವ್ಯಾಪ್ತಿಯ ಕೆಪಿಸಿಸಿ ಉಸ್ತುವಾರಿ ಉಪಾಧ್ಯಕ್ಷರು ಹಾಗೂ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು
- ಮುಂಚೂಣಿ ಘಟಕಗಳ ರಾಜ್ಯಾಧ್ಯಕ್ಷರುಗಳು
- ಸುನಿಲ್ ಕನಗೋಳ್, ಎಐಸಿಸಿ ಸದಸ್ಯರು
- ಬಿ.ವಿ. ಶ್ರೀನಿವಾಸ್, ಮಾಜಿ ಅಧ್ಯಕ್ಷರು, ಐ.ವೈ.ಸಿ, ಸಹ-ಸಂಚಾಲಕರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರಿನ 5 ನಗರಪಾಲಿಕೆಗಳು ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಅದಕ್ಕೆ ಪೂರಕವಾಗಿ ಬೆಂಗಳೂರು ನಗರದಲ್ಲಿ ಪಕ್ಷದ ಸಂಘಟನೆ, ಚುನಾವಣೆ ಇತ್ಯಾದಿಗಳ ಪೂರ್ವತಯಾರಿ ಕಾರ್ಯಗಳನ್ನು ನೋಡಿಕೊಳ್ಳಲು ದಿನಾಂಕ 30- 08-2025 ರಂದು ಕೆಪಿಸಿಸಿ ವತಿಯಿಂದ ಬೆಂಗಳೂರು ನಗರದ ಸಚಿವರುಗಳನ್ನು 5 ನಗರಪಾಲಿಕೆಗಳಿಗೆ ಉಸ್ತುವಾರಿಗಳನ್ನಾಗಿ ನೇಮಿಸಲಾಗಿತ್ತು. ಸದರಿ ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವವರು ಎಂದಿದ್ದಾರೆ.
ಈ ಕೆಳಕಾಣಿಸಿದ ವಿಧಾನಸಭೆ ಕ್ಷೇತ್ರಗಳಲ್ಲಿ ಸಚಿವರೊಂದಿಗೆ ಸಹಕರಿಸಲು ವಿಧಾನ ಪರಿಷತ್ ಸದಸ್ಯರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ.
- ಕೆ ಆರ್ ಪುರಂ – ಡಿ.ಟಿ ಶ್ರೀನಿವಾಸ್
- ಬೊಮ್ಮನಹಳ್ಳಿ- ರಾಮೋಜಿಗೌಡ
- ದಾಸರಹಳ್ಳಿ- ಗೋವಿಂದರಾಜು
- ಚಿಕ್ಕಪೇಟೆ- ನಜೀರ್ ಅಹಮದ್
- ಯಲಹಂಕ – ಎಂ.ಆರ್ ಸೀತಾರಾಂ
- ಸಿವಿ ರಾಮನ್ ನಗರ – ಸುಧಾಂ ದಾಸ್
- ಮಲ್ಲೇಶ್ವರಂ- ರಮೇಶ್ ಬಾಬು
- ಬಸವನಗುಡಿ – ಯು.ಬಿ ವೆಂಕಟೇಶ್
- ಮಹಾಲಕ್ಷ್ಮೀ ಲೇಔಟ್- ಸಲೀಂ ಅಹಮದ್
- ಮಹದೇವಪುರ- ನಾಗರಾಜ್ ಯಾದವ್
- ಪದ್ಮನಾಭ ನಗರ- ಎಲ್ ಶ್ರೀನಿವಾಸ್, ಮಾಜಿ ಉಪ ಮೇಯರ್
- ಸುನೀಲ್ ಕಾನಗೋಡು, ಎಐಸಿಸಿ ಸದಸ್ಯ, ನಗರ ಪಾಲಿಕೆ ಉಸ್ತುವಾರಿ ಸಚಿವರುಗಳ ಸಂಯೋಜಕರು
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ರಾಜ್ಯದಲ್ಲಿ ಮುಸ್ಲಿಮರು ಇನ್ನೂ ಗುಡಿಸಲಿನಲ್ಲಿದ್ದಾರೆ, ನೀರು, ಟಾಯ್ಲೆಟ್ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ