ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬರೋಬ್ಬರಿ 44 ಉಪಾಧ್ಯಕ್ಷರು, 144 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆದೇಶಿಸಿದ್ದಾರೆ.
ಈ ಕುರಿತಂತೆ ಇಂದು ಆದೇಶ ಹೊರಡಿಸಿದ್ದು, ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರು ಪರಿಷ್ಕೃತ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ. ಕರ್ನಾಟಕ ಪ್ರದೇಶದ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಖಜಾಂಚಿ, ಉಪಾಧ್ಯಕ್ಷರ ನೇಮಕ ಮಾಡಲಾಗಿದೆ. ಈ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶಿಸಿರೋದಾಗಿ ಹೇಳಿದ್ದಾರೆ.
ಅಂದಹಾಗೇ ಉಪಾಧ್ಯಕ್ಷರಾಗಿ ಡಾ.ಬಿಎಲ್ ಶಂಕರ್, ಅಜಯ್ ಕುಮಾರ್ ಶರನಾಯ್ಕ್, ಮೆಹಬೂಬ್ ಸುಡ್ಗರ್, ಆನಂದ್ ನ್ಯಾಮಗೌಡ, ವಿಎಸ್ ಉಗ್ರಪ್ಪ, ಒಬೆದುಲ್ಲ ಶರೀಫ್ ಸೇರಿದಂತೆ 44 ಮಂದಿಯನ್ನು ನೇಮಕ ಮಾಡಲಾಗಿದೆ.
ಇನ್ನೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ದಯಾನಂದ್ ಎಸ್ ಪಾಟೀಲ್, ಕೊಡಿಹಳ್ಳಿ ಎನ್ ಐ, ಮುರುಳಿ ಕೃಷ್ಣ.ಬಿ, ಹುಮಾಯೂನ್ ಖಾನ್, ಡಾ.ಉಮೇಶ್ ಬಾಬು, ಜಿಎ ಭಾವ, ಜೆ ಹುಚ್ಚಪ್ಪ, ಪ್ರಭಾಕರ ರೆಡ್ಡಿ, ಎ ಕೆಂಚೇಗೌಡ, ಮದನ್ ಪಟೇಲ್, ಕವಿತಾ ರೆಡ್ಡಿ, ಲಾವಣ್ಯ ಬಲ್ಲಾಳ್, ವಿಠಲ್ ಯಾದವ್ ಸುರಪುರ, ನಿವೇದಿತ್ ಆಳ್ವ, ಸೌಮ್ಯ ರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಅನಿಲ್ ಕುಮಾರ್ ಸೇರಿದಂತೆ 144 ಮಂದಿಯನ್ನು ನೇಮಕ ಮಾಡಲಾಗಿದೆ.
ಕೆಪಿಸಿಸಿ ಕಜಾಂಚಿಯಾಗಿ ವಿನಾಯ್ ಕಾರ್ತಿಕ್, ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾಗಿ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು, ಕೋ ಛೇರ್ಮನ್ ಆಗಿ ಐಶ್ವರ್ಯ ಮಹದೇವ್, ಉಪಾಧ್ಯಕ್ಷರಾಗಿ ಈ ಸತ್ಯಪ್ರಕಾಶ್ ನೇಮಕ ಮಾಡಲಾಗಿದೆ.
ಸೋಷಿಯಲ್ ಮೀಡಿಯಾ ಕೋ ಛೇರ್ಮನ್ ಆಗಿ ವಿಜಯ್ ಮತ್ತಿಕಟ್ಟಿ, ನಿಖೆತ್ ರಾಜ್ ಮೌರ್ಯ ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆದೇಶಿಸಿದ್ದಾರೆ.
ಬಿಜೆಪಿ ಮಾಡಿರುವ ನಂಬಿಕೆ ದ್ರೋಹಕ್ಕೆ, ಜನ ದ್ರೋಹಕ್ಕೆ ಪಾಠ ಕಲಿಸಿ: ಸಿ.ಎಂ.ಸಿದ್ದರಾಮಯ್ಯ ಕರೆ
BREAKING : ಬಂಧನ ಪ್ರಶ್ನಿಸಿ ದೆಹಲಿ ಸಿಎಂ ‘ಕೇಜ್ರಿವಾಲ್’ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್