Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಭಾರತೀಯರಿಗೆ ಯಾವುದೇ ನಿರ್ಬಂಧವಿಲ್ಲ: ಸರ್ಕಾರಿ ಮೂಲಗಳು

09/06/2025 4:48 PM

BIG NEWS: ರಾಜ್ಯದ ‘ಮುಜರಾಯಿ ದೇವಾಲಯ’ಗಳಲ್ಲಿ ನೀರಿನ ಬಾಟಲ್‌ ಸೇರಿದಂತೆ ‘ಪ್ಲಾಸ್ಟಿಕ್‌ ಬಳಕೆ’ ಸಂಪೂರ್ಣ ನಿಷೇಧ

09/06/2025 4:43 PM

SHOCKING: ಭಾರತದಲ್ಲಿ ಹೊಸದಾಗಿ ಕೋವಿಡ್-19 ರೂಪಾಂತರ XFG ಪತ್ತೆ: 163 ಮಂದಿಗೆ ಸೋಂಕು ದೃಢ | Covid-19 variant XFG

09/06/2025 4:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ’ಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಿ ‘ರಾಜ್ಯ ಸರ್ಕಾರ’ ಆದೇಶ
KARNATAKA

‘ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ’ಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಿ ‘ರಾಜ್ಯ ಸರ್ಕಾರ’ ಆದೇಶ

By kannadanewsnow0920/09/2024 8:57 PM

ಬೆಂಗಳೂರು: ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸದಸ್ಯ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಉಡುಪಿ ಜಿಲ್ಲೆ, ಬೈಂದೂರು ತಾಲ್ಲೂಕು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯವು ಧಾರ್ಮಿಕ ದತ್ತಿ ಇಲಾಖೆಯ ಪವರ್ಗ ‘ಎ’ ಅಧಿಸೂಚಿತ ಸಂಸ್ಥೆಯಾಗಿರುತ್ತದೆ. ಈ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಆಸಕ್ತ ಭಕ್ತಾಧಿಗಳಿಂದ/ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಉಲ್ಲೇಖ(1)ರಲ್ಲಿ ಹೊರಡಿಸಿದ ಪುಕಟಣೆಗೆ ಸ್ಪಂದಿಸಿ ನಿಗಧಿತ ಅವಧಿಯೊಳಗೆ 66 ಅರ್ಜಿಗಳು ಸ್ವೀಕೃತವಾಗಿರುತ್ತವೆ ಎಂದಿದ್ದಾರೆ.

ದಿನಾಂಕ:03.01.2024ರಂದು ನಡೆದ 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ 2ನೇ ಸಭೆಯ ನಿರ್ಣಯದ ವಿಷಯ ಸೂಚಿ ಸಂಖ್ಯೆ (5)ರಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೊಳಪಡುವ ಪುವರ್ಗ ‘ಎ’ ಅಧಿಸೂಚಿತ ಸಂಸ್ಥೆಗಳಿಗೆ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ವ್ಯವಸ್ಥಾಪನ ಸಮಿತಿಗೆ ಸದಸ್ಯತ್ವವನ್ನು ಕೋರಿ ಸ್ವೀಕೃತವಾಗಿರುವ ಅರ್ಜಿಗಳ ಬಗ್ಗೆ ಸತ್ಯಾಪನೆ ಮಾಡಿ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ಮತ್ತು ಪೋಲೀಸ್‌ ಅಧೀಕ್ಷಕರು, ಉಡುಪಿ ಜಿಲ್ಲೆ ರವರು ಉಲ್ಲೇಖ(3) ಮತ್ತು (4)ರನ್ವಯ ಸತ್ಯಾಪನಾ ವರದಿಗಳನ್ನು ಸಲ್ಲಿಸಿರುತ್ತಾರೆ ಎಂದು ಹೇಳಿದ್ದಾರೆ.

ದಿನಾಂಕ:03.01.2024ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ನಿರ್ಣಯದಂತೆ ಉಡುಪಿ ಜಿಲ್ಲೆ, ಬೈಂದೂರು ತಾಲ್ಲೂಕು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ವ್ಯವಸ್ಮಾಪನಾ ಸಮಿತಿಯನ್ನು ರಚಿಸುವ ಬಗ್ಗೆ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ದಿನಾಂಕ:03.01.2024ರಂದು ನಡೆದ 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ 2ನೇ ಸಭೆಯ ನಿರ್ಣಯಿಸಿರುವಂತೆ ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಈ ಕೆಳಕಂಡ ಒಂಭತ್ತು (9) ಮಹನೀಯರು/ಮಹಿಳೆಯರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್ 25ರ ಅನ್ವಯ ಈ ಆದೇಶ ಹೊರಡಿಸಿದ ದಿನಾಂಕದಿಂದ ಮೂರು (3) ವರ್ಷಗಳ ಅವಧಿಗೆ ಕೆಳಕಂಡ ಷರತ್ತಿಗೊಳಪಡಿಸಿ ರಚಿಸಿ ಆದೇಶ ಹೊರಡಿಸಿದ್ದಾರೆ.

ಹೀಗಿದೆ ವ್ಯವಸ್ಥಾಪನಾ ಸಮಿತಿಯ ಸದಸ್ಯರ ಹೆಸರು

  • ಮಹಾಲಿಂಗ ವೆಂಕನಾಯ್ಕ್ – ಪರಿಶಿಷ್ಟ ಪಂಗಡ
  • ಧನಾಕ್ಷಿ – ಮಹಿಳೆ
  • ಸುಧಾ.ಕೆ – ಮಹಿಳೆ
  • ಕೆ.ಬಾಬು ಶೆಟ್ಟಿ – ಸಾಮಾನ್ಯ
  • ಸುರೇಂದ್ರ ಶೆಟ್ಟಿ – ಸಾಮಾನ್ಯ
  • ಅಭಿಲಾಷ್ – ಸಾಮಾನ್ಯ
  • ಯು.ರಾಜೇಶ ಕಾರಂತ್ – ಸಾಮಾನ್ಯ
  • ರಘುರಾಮ ದೇವಾಡಿಗ – ಸಾಮಾನ್ಯ

-:ಷರತ್ತುಗಳು:-

1, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಅಧಿನಿಯಮ 2011ರ ಸೆಕ್ಷನ್ 25(3) ಮತ್ತು (4)ರ ಅನರ್ಹತೆಗಳೊಂದಿಗೆ ಹಾಗೂ ಕಾಯ್ದೆಯ (2ನೇ ತಿದ್ದುಪಡಿ) కలం 25(2)() ಅನ್ವಯ “ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವುದು ಕಂಡು ಬಂದಲ್ಲಿ ಅಂತಹವರ ಸದಸ್ಯತ್ವವು ಸಹಜವಾಗಿಯೇ ರದ್ದಾಗುವುದು”.

2. ಸದರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯೆಂದು ನೇಮಿಸಲಾಗಿದೆ.

3. ಮೇಲ್ಕಂಡ ಸದಸ್ಯರು ಪ್ರಥಮ ಸಭೆಯಲ್ಲಿ ತಮ್ಮಲ್ಲಿ ಒಬ್ಬರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಈ ಕಛೇರಿಗೆ ನಡವಳಿಯನ್ನು ಸಲ್ಲಿಸುವುದು.

4. ವ್ಯವಸ್ಥಾಪನಾ ಸಮಿತಿ ಸದಸ್ಯರ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣಗಳು ಇರುವುದು ಕಂಡುಬಂದಲ್ಲಿ ಅಂತವರಿಗೆ ಈ ವ್ಯವಸ್ಥಾಪನಾ ಸಮಿತಿಯ ಆದೇಶವು ತನ್ನಂತಾನೇ ರದ್ದಾಗುತ್ತದೆ.

5. ಸುರೇಂದ್ರಶೆಟ್ಟಿ ಬಿನ್ ರಮೇಶ್‌ಶೆಟ್ಟಿ ಎಂಬುವವರ ವಿರುದ್ಧ ಕುಂದಾಪುರ ಪೋಲೀಸ್ ಠಾಣಾ ಅ.ಕ್ರ ಸಂ.56/2018, ಕಲಂ 504, 353, 332, 341 ಜೊತೆಗೆ 34 ಐಪಿಸಿ ರಂತೆ ಹಾಗೂ ಬೆಂಗಳೂರಿನ ಆರ್ ಟಿ ನಗರ ಪೋಲೀಸ್ ಠಾಣೆಯಲ್ಲಿ ಅಕ್ರ ಸಂ.255/2019, ಕಲಂ 507, 406, 420 ಐಪಿಸಿ ಪ್ರಕರಣ ದಾಖಲಾಗಿದ್ದು, ಸದರಿ ಪುಕರಣದಲ್ಲಿ ಒಂದು ವೇಳೆ ನ್ಯಾಯಾಲಯದಲ್ಲಿ ಅವರು ಅಪಾಧಿತರೆಂದು ತೀರ್ಪು ಬಂದಲ್ಲಿ ಅವರ ಸದಸ್ಯತ್ವವು ತನ್ನಂತಾನೇ ರದ್ದಾಗಲಿದೆ ಎಂದಿದೆ.

BIG NEWS: ರಾಜ್ಯ ಎಲ್ಲಾ ಅಧಿಕಾರಿಗಳ ಮಧ್ಯಾಹ್ನದ ಸಭೆ ಕ್ಯಾನ್ಸಲ್: ಜನರ ಕುಂದುಕೊರತೆ ನಿವಾರಣೆ ‘CS’ ಖಡಕ್ ಆದೇಶ

BREAKING: ರಾಜ್ಯ ಸರ್ಕಾರದಿಂದ ‘ಮುಜರಾಯಿ ಇಲಾಖೆ ದೇವಾಲಯ’ಗಳಲ್ಲಿ ಪ್ರಸಾದ ತಯಾರಿಕೆಗೆ ‘ನಂದಿನಿ ತುಪ್ಪ’ ಬಳಸಲು ಆದೇಶ

ಬೆಂಗಳೂರು ಜನತೆ ಗಮನಕ್ಕೆ: ಸೆ.21ರ ನಾಳೆ, ಸೆ.22ರ ನಾಡಿದ್ದು ನಗರದ ಈ ಏರಿಯಾಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದ ‘ಮುಜರಾಯಿ ದೇವಾಲಯ’ಗಳಲ್ಲಿ ನೀರಿನ ಬಾಟಲ್‌ ಸೇರಿದಂತೆ ‘ಪ್ಲಾಸ್ಟಿಕ್‌ ಬಳಕೆ’ ಸಂಪೂರ್ಣ ನಿಷೇಧ

09/06/2025 4:43 PM1 Min Read

BREAKING: ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ | Rain In Bengaluru

09/06/2025 4:23 PM1 Min Read

ಇಲ್ಲಿದೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ | Karnataka Cabinet Meeting

09/06/2025 3:55 PM3 Mins Read
Recent News

ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಭಾರತೀಯರಿಗೆ ಯಾವುದೇ ನಿರ್ಬಂಧವಿಲ್ಲ: ಸರ್ಕಾರಿ ಮೂಲಗಳು

09/06/2025 4:48 PM

BIG NEWS: ರಾಜ್ಯದ ‘ಮುಜರಾಯಿ ದೇವಾಲಯ’ಗಳಲ್ಲಿ ನೀರಿನ ಬಾಟಲ್‌ ಸೇರಿದಂತೆ ‘ಪ್ಲಾಸ್ಟಿಕ್‌ ಬಳಕೆ’ ಸಂಪೂರ್ಣ ನಿಷೇಧ

09/06/2025 4:43 PM

SHOCKING: ಭಾರತದಲ್ಲಿ ಹೊಸದಾಗಿ ಕೋವಿಡ್-19 ರೂಪಾಂತರ XFG ಪತ್ತೆ: 163 ಮಂದಿಗೆ ಸೋಂಕು ದೃಢ | Covid-19 variant XFG

09/06/2025 4:34 PM

BREAKING: ಕುಟುಂಬಸ್ಥರ ಜೊತೆ ಮಾತನಾಡಲು ಉಗ್ರ ತಹವ್ವೂರ್ ರಾಣಾಗೆ ಕೋರ್ಟ್ ಅನುಮತಿ

09/06/2025 4:30 PM
State News
KARNATAKA

BIG NEWS: ರಾಜ್ಯದ ‘ಮುಜರಾಯಿ ದೇವಾಲಯ’ಗಳಲ್ಲಿ ನೀರಿನ ಬಾಟಲ್‌ ಸೇರಿದಂತೆ ‘ಪ್ಲಾಸ್ಟಿಕ್‌ ಬಳಕೆ’ ಸಂಪೂರ್ಣ ನಿಷೇಧ

By kannadanewsnow0909/06/2025 4:43 PM KARNATAKA 1 Min Read

ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಆಗಸ್ಟ್.15ರಿಂದ ನೀರಿನ ಬಾಟಲಿ ಸೇರಿದಂತ ಎಲ್ಲಾ ಬಗೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧ ಮಾಡಲಾಗುತ್ತದೆ…

BREAKING: ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ | Rain In Bengaluru

09/06/2025 4:23 PM

ಇಲ್ಲಿದೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ | Karnataka Cabinet Meeting

09/06/2025 3:55 PM

BREAKING: ಆ.15ರ ಬಳಿಕ ರಾಜ್ಯದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ: ಸಚಿವ ರಾಮಲಿಂಗಾರೆಡ್ಡಿ

09/06/2025 3:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.