ಕೋಲಾರ: ಜಿಲ್ಲೆಯ ನೂರ್ ನಗರದಲ್ಲಿ ಯುವಕ ಉಸ್ಮಾನ್ ಎಂಬಾತನನ್ನು ಕುಟುಂಬಸ್ಥರು, ಸಂಬಂಧಿಕರೇ ಅಟ್ಟಾಡಿಸಿಕೊಂಡು ಏರಿಯಾದಲ್ಲಿ ಮರ್ಡರ್ ಮಾಡಿದ್ದರು. ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಂತ ಕೋಲಾರದ ಗಲ್ ಪೇಟೆ ಠಾಣೆಯ ಪೊಲೀಸರು, ಉಸ್ಮಾನ್ ಎಂಬಾತನನ್ನು ಕಳೆದ ರಾತ್ರಿ ಅಟ್ಟಾಡಿಸಿಕೊಂಡು ಮರ್ಡರ್ ಮಾಡಿದ್ದ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಫ್ರೀದ್, ಜಮೀರ್, ನಜೀರ್, ಸಲ್ಮಾನ್ ಪಾಷಾ ಎಂಬುದಾಗಿ ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಉಸ್ಮಾನ್ ಎಂಬಾತ ಜಬೀನಾ ಎಂಬಾಕೆಯನ್ನು ವಿವಾಹವಾಗಿದ್ದನು. ಕೆಲ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಂತ ಜಬೀನಾ ಆರೋಗ್ಯ ವಿಚಾರಿಸಲು ಬಂದಿದ್ದಂತ ಸಿಮ್ರಾನ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ಉಸ್ಮಾನ್ ಆರೋಪಿಸಿದ್ದನು.
ಇದೇ ಕಾರಣದಿಂದಾಗಿ ಗಂಡನ ಮನೆಯನ್ನು ತೊರಿದ್ದಂತ ಜಬೀನಾ, ತವರು ಮನೆಗೆ ತೆರಳಿದ್ದಳು. ನಿನ್ನೆ ಪತ್ನಿಯನ್ನು ಮಾತನಾಡಿಸಿಕೊಂಡು ಬರೋದಕ್ಕೆ ತೆರಳಿದ್ದಾಗ ಜಬೀನಾ ಸಂಬಂಧಿಕರು, ಕುಟುಂಬಸ್ಥರು ಏರಿಯಾದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿ, ಉಸ್ಮಾನ್ ಕೊಲೆಗೈದಿದ್ದರು.
BIG NEWS: ‘ಮಾರ್ಚ್’ನಲ್ಲಿ ‘ರಾಜ್ಯ ಬಜೆಟ್’ ಮಂಡನೆ: ಸಿಎಂ ಸಿದ್ಧರಾಮಯ್ಯ ಘೋಷಣೆ
BREAKING : ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ `ಯುವನಿಧಿ’ ವಿಶೇಷ ನೋಂದಣಿ ಅಭಿಯಾನ : ಸರ್ಕಾರ ಮಹತ್ವದ ಆದೇಶ.!