ಚಿಕ್ಕಬಳ್ಳಾಪುರ: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ( Actor Darshan ) ಪೊಲೀಸರ ಬಂಧನದಲ್ಲಿದ್ದಾರೆ. ಜೈಲು ಪಾಲಾಗೋ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಇದರ ನಡುವೆ ಕೋಠಿಮಠ ಶ್ರೀಗಳು ನಟ ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಅದೇನು ಅಂತ ಮುಂದೆ ಓದಿ.
ಇಂದು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಠಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಕೋಪದ ಕೈಗೆ ಬುದ್ಧಿ ಕೊಟ್ಟರೇ ಈ ರೀತಿಯ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂಬುದಾಗಿ ಸ್ಪೋಟಕ ಹೇಳಿಕೆ ನೀಡಿದರು.
ಇನ್ನೂ ಉಮಾಪತಿ ಕೂಡ ಕೋಠಿಮಠಕ್ಕೆ ಹೋಗಾದ ಕೋಪ ಕಡಿಮೆ ಮಾಡಿಕೊಳ್ಳಬೇಕು. ತಂದೆ, ತಾಯಿ ಮಾತು ಕೇಳಬೇಕು ಅಂತ ಅಂದಿದ್ದರು. ಅದರಂತೆ ನಡೆದುಕೊಂಡ ಕಾರಣ, ಈಗ ಒಳ್ಳೆಯ ಸ್ಥಾನದಲ್ಲಿದ್ದೇನೆ ಅಂತ ಹೇಳಿದ್ದರು ಎಂಬುದಾಗಿ ನೆನಪು ಮಾಡಿಕೊಂಡರು.
ನಟ ದರ್ಶನ್ ಬಗ್ಗೆ ಈ ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠ ಶ್ರೀ
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಕೆಲ ದಿನಗಳಿಂದ ಪೊಲೀಸರ ವಶದಲ್ಲಿರುವಂತ ಅವರನ್ನು ತೀವ್ರ ವಿಚಾರಣೆಗೂ ಒಳಪಡಿಸಲಾಗುತ್ತಿದೆ. ಈ ಹೊತ್ತಿನಲ್ಲೇ ಕೋಠಿ ಮಠದ ಶ್ರೀಗಳು ಕೋಪದ ಕೈಗೆ ಬುದ್ಧಿ ಕೊಟ್ಟರೆ ಈ ರೀತಿಯ ಅವಗಡಗಳು ಸಂಭವಿಸುತ್ತವೆ. ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಎಂದರು.
ಒಟ್ಟಾರೆಯಾಗಿ ನಟ ದರ್ಶನ್ ಹಾಗೂ ಉಮಾಪತಿ ಗೌಡ ಅವರ ನಡುವಿನ ಗಲಾಟೆಯ ಬಗ್ಗೆ ನಟ ದರ್ಶನ್ ಕೋಪ ಹಾಗೂ ಉಮಾಪತಿ ತಾಳ್ಮೆಯೇ ಕಾರಣ ಎಂಬುದಾಗಿ ಮಾರ್ಮಿಕವಾಗಿ ಕೋಡಿ ಶ್ರೀ ಹೇಳಿದ್ದಾರೆ. ಅಂದರೇ ನಟ ದರ್ಶನ್ ಕೋಪವೇ ರೇಣುಕಾಸ್ವಾಮಿ ಕೊಲೆಗೂ ಕಾರಣವಾಗಿರೋ ವಿಷಯವನ್ನು ಕೋಡಿಮಠ ಶ್ರೀಗಳು ಈ ರೀತಿ ಬಿಚ್ಚಿಟ್ಟಿದ್ದಾರೆ.
BIG NEWS: ‘ಡಾ.ಸಿಎನ್ ಮಂಜುನಾಥ್’ ತಮ್ಮ ಅತಿಯಾದ ‘ಹಣ ಮೂಲ’ ಬಹಿರಂಗ ಪಡಿಸಬೇಕು: ನಟ ಚೇತನ್ ಆಗ್ರಹ