ಧಾರವಾಡ: ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿ ರಾಜ್ಯದಲ್ಲಿ ಬದಲಾವಣೆ ಆಗಲಿದ್ದಾರೆ ಎನ್ನಲಾಗುತ್ತಿತ್ತು. ಇದರ ನಡುವೆ ಕೋಡಿಮಠ ಶ್ರೀಗಳು ಸಿಎಂ ಸಿದ್ಧರಾಮಯ್ಯ ಸರ್ಕಾರದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ್ದಾರೆ. ಅದು ಏನು ಅಂತ ಮುಂದೆ ಓದಿ.
ಇಂದು ದಸರಾ ಹಬ್ಬದ ಪ್ರಯುಕ್ತ ಜಂಬೂ ಸವಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದಸರಾದ ನಿಜವಾದಂತ ಅರ್ಥವೆಂದರೇ ದುಷ್ಟ ಶಕ್ತಿಗಳನ್ನು ದೂರ ಮಾಡುವುದು. ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವಂತೆ ಮಾಡುವುದಾಗಿದೆ. ಅಲ್ಲದೇ ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿಗಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂದರು.
ಸಿಎಂ ಸಿದ್ಧರಾಮಯ್ಯ ಅವರ ಸರ್ಕಾರದ ಬಗ್ಗೆ ಭವಿಷ್ಯ ನುಡಿದಂತ ಅವರು, ಸಂಕ್ರಾಂತಿಯವರೆಗೆ ಯಾವುದೇ ತೊಂದರೆ ಸಿದ್ಧರಾಮಯ್ಯ ಸರ್ಕಾರಕ್ಕೆ ಇಲ್ಲ. ಭಯವೂ ಇಲ್ಲ. ಸಂಕ್ರಾಂತಿ ಬಳಿಕ ಆ ಸಿದ್ಧರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುವುದಾಗಿ ಹೇಳಿದರು.
ಇನ್ನೂ ನಾನು ಈ ಹಿಂದೆಯೇ ಹೇಳಿದ್ದೇನೆ. ಅದೇನೆಂದರೇ ಬಯಲು ಸೀಮೆ ಮಲೆನಾಡು ಆಗಲಿದೆ. ಮಲೆನಾಡು ಬಯಲು ಸೀಮೆ ಆಗುತ್ತದೆ ಎಂಬುದಾಗಿ. ಅದರಂತೆ ನಮ್ಮಲ್ಲೀಗ ಬಯಲು ಸೀಮೆ ಮಲೆನಾಡು ಆಗಿದೆ ಎಂಬುದಾಗಿ ಶಾಂಕಿಂಗ್ ಭವಿಷ್ಯ ನುಡಿದರು.
SHOCKING: ಕೆಮ್ಮಿನ ಸಿರಪ್ ಸೇವಿಸಿ ಆರು ಮಕ್ಕಳು ಸಾವು: ಲ್ಯಾಬ್ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ
SHOCKING: ಪೋಷಕರೇ ನಿಮ್ಮ ಮಕ್ಕಳಿಗೆ ‘ಕೆಮ್ಮಿನ ಸಿರಪ್’ ಕುಡಿಸೋ ಮುನ್ನ ಈ ಸುದ್ದಿ ಓದಿ.!