ಮಡಿಕೇರಿ : ವಿರಾಜಪೇಟೆ ವಿಭಾಗದ ತಿತಿಮತಿ ವಲಯದ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಎಲಿಕಲ್ ಎಸ್ಟೇಟ್‍ಗೆ (ಬಿಬಿಟಿಸಿ) ಒಳಪಡುವ ಬಾಡಗ ಬಾಣಂಗಾಲ ಕಾಫಿ ಎಸ್ಟೇಟ್ ಹಾಗೂ ಸುತ್ತಮುತ್ತಲಿನ ತೋಟಗಳಲ್ಲಿ ಇರುವ 3 ಕಾಡಾನೆಗಳನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಮೇ, 14 ರಿಂದ ಪ್ರಾರಂಭವಾಗುತ್ತಿರುವುದರಿಂದ ಬಾಡಗ ಬಾಣಂಗಾಲ, ಕೊಡಗು ಶ್ರೀರಂಗಪಟ್ಟಣ, ಮೇಕೂರು ಹೊಸ್ಕೇರಿ, ಮಾಲ್ದಾರೆ, ಚೆನ್ನಯ್ಯನಕೋಟೆ, ಕರಡಿಗೋಡು, ಪುಲಿಯೇರಿ, ಹೊಸೂರು ಮತ್ತು ಇಂಜಿಲಗೆರೆ ಗ್ರಾಮಗಳ ಸಾರ್ವಜನಿಕರು, ತೋಟದ ಮಾಲಿಕರು, ಕಾರ್ಮಿಕರು ಹಾಗೂ ಶಾಲಾ ಮಕ್ಕಳು ಜಾಗರೂಕತೆಯಿಂದ ಇರಬೇಕಾಗಿ ಹಾಗೂ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಾರ್ಯಾಚರಣೆ ಪೂರ್ಣಗೊಳಿಸಲು ಸಹಕಾರ ನೀಡುವಂತೆ ಕೋರಿದೆ.
ವಲಯ ಅರಣ್ಯಾಧಿಕಾರಿ ತಿತಿಮತಿ ವಲಯ ದೂ.ಸಂ. 7483920018, ಉಪ ವಲಯ ಅರಣ್ಯಾಧಿಕಾರಿ, ಚೆನ್ನಂಗಿ ಉಪ ವಲಯ 9901242528 ನ್ನು ಸಂಪರ್ಕಿಸಬಹುದು ಎಂದು ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.
SSLC, PUC ವಿದ್ಯಾರ್ಥಿಗಳೇ ಗಮನಿಸಿ: ಪ್ರತಿಭಾ ಪುರಸ್ಕಾರಕ್ಕಾಗಿ ನೌಕರರ ಸಂಘದಿಂದ ಅರ್ಜಿ ಆಹ್ವಾನ
BREAKING : ಗುಂಡು ಹಾರಿಸಿಕೊಂಡು `ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಆತ್ಮಹತ್ಯೆ