ಬರ್ಕಿಂಗ್ಹ್ಯಾಮ್: ಕಿಂಗ್ ಚಾರ್ಲ್ಸ್ ( King Charles III ) ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ತಕ್ಷಣವೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ದೃಢಪಡಿಸಿದೆ. ಕ್ಯಾನ್ಸರ್ ವಿಧವನ್ನು ನಿರ್ದಿಷ್ಟಪಡಿಸಲಾಗಿಲ್ಲ.
ಕ್ಯಾನ್ಸರ್ ನ ನಿಖರ ಸ್ವರೂಪವನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಅರಮನೆಯು ಕಿಂಗ್ಸ್ ಚಾರ್ಲ್ಸ್ ಅವರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಈಗ ಅದು ಮುಂದುವರೆದಿದೆ ಎಂಬುದಾಗಿ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದೆ ಎಂದು ಬಿಬಿಸಿ ವರದಿ ಮಾಡಿದೆ.
A statement from Buckingham Palace: https://t.co/zmYuaWBKw6
📷 Samir Hussein pic.twitter.com/xypBLHHQJb
— The Royal Family (@RoyalFamily) February 5, 2024
ಸವಾಲಿನ ಸಂದರ್ಭಗಳ ಹೊರತಾಗಿಯೂ, ರಾಜನು “ತನ್ನ ಚಿಕಿತ್ಸೆಯ ಬಗ್ಗೆ ಸಂಪೂರ್ಣವಾಗಿ ಸಕಾರಾತ್ಮಕವಾಗಿದ್ದಾನೆ ಮತ್ತು ಸಾಧ್ಯವಾದಷ್ಟು ಬೇಗ ಪೂರ್ಣ ಸಾರ್ವಜನಿಕ ಕರ್ತವ್ಯಕ್ಕೆ ಮರಳಲು ಎದುರು ನೋಡುತ್ತಿದ್ದಾನೆ” ಎಂದು ಬಕಿಂಗ್ಹ್ಯಾಮ್ ಅರಮನೆ ಒತ್ತಿಹೇಳಿತು.
ಅವರ ರೋಗನಿರ್ಣಯದ ಪರಿಣಾಮವಾಗಿ, ಕಿಂಗ್ ಚಾರ್ಲ್ಸ್ ತಮ್ಮ ಸಾರ್ವಜನಿಕ ಕಾರ್ಯಕ್ರಮಗಳಿಂದ ತಾತ್ಕಾಲಿಕವಾಗಿ ಹಿಂದೆ ಸರಿಯಲಿದ್ದಾರೆ. ಅವರ ಚಿಕಿತ್ಸೆಯ ಸಮಯದಲ್ಲಿ ರಾಜಮನೆತನದ ಇತರ ಹಿರಿಯ ಸದಸ್ಯರು ಅವರ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಅರಮನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಕ್ಯಾನ್ಸರ್ ಹಂತ ಅಥವಾ ಯಾವುದೇ ಮುನ್ಸೂಚನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.