Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಮಾಜಿಕ ಜಾಲತಾಣದ ‘ಸ್ನೇಹ’ದ ಬಗ್ಗೆ ಇರಲಿ ಎಚ್ಚರ: ಬೆಳಗಾವಿಯ ಈ ಘಟನೆ ನಿಮಗೊಂದು ಪಾಠ!

06/04/2026 2:42 PM

ರಾಜ್ಯದ ರೈತರ ಗಮನಕ್ಕೆ: ಇನ್ಮುಂದೆ ಯೂರಿಯಾ ರಸಗೊಬ್ಬರ ಖರೀದಿಗೆ ‘FID ಸಂಖ್ಯೆ’ ಕಡ್ಡಾಯ

06/04/2026 2:32 PM

BIG NEWS: ಭ್ರಷ್ಟಾಚಾರಿಗೆ ಕೋರ್ಟ್ ಶಾಕ್: ಲಂಚ ಪಡೆದಿದ್ದ ಸರ್ಕಾರಿ ಅಧಿಕಾರಿಗೆ 2 ವರ್ಷ ಜೈಲು ಶಿಕ್ಷೆ, 40,000 ದಂಡ

06/04/2026 2:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೆಐಎಡಿಬಿ ಕರ್ಮಕಾಂಡ: ಬಾಳಪ್ಪ ಹಂದಿಗುಂದ ವಿರುದ್ಧ ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ ದೂರು
KARNATAKA

ಕೆಐಎಡಿಬಿ ಕರ್ಮಕಾಂಡ: ಬಾಳಪ್ಪ ಹಂದಿಗುಂದ ವಿರುದ್ಧ ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ ದೂರು

By kannadanewsnow0912/01/2025 5:26 PM

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ‘ಪೇ ಸಿಎಂ ಸೇ ಸಿಎಂ’ ಘೋಷಣೆ ಮೂಲಕ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಮೆಗಾ ಅಭಿಯಾನ ಕೈಗೊಂಡು ಆಡಳಿತಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ‘ಹಂದಿಗುಂದ ಪ್ರಕರಣ’ ಸವಾಲಾಗಿ ಪರಿಣಮಿಸಿದೆ. ಭ್ರಷ್ಟಾಚಾರ ವಿರುದ್ಧ ದೇಶವ್ಯಾಪಿ ಕಾನೂನು ಹೋರಾಟ ನಡೆಸುತ್ತಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕೆಎಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ದದ ಭ್ರಷ್ಟಾಚಾರ ಆರೋಪದಲ್ಲಿ ಸಿದ್ದರಾಮಯ್ಯ ಸರ್ಕಾರದ ಲೋಪವನ್ನೇ ಎತ್ತಿ ಹಿಡಿದಿದೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿ KIADB ಕರ್ಮಕಾಂಡದ ತನಿಖೆಗೆ ರೋಚಕತೆ ತುಂಬಿದೆ.

ಕೆಐಎಡಿಬಿಯಲ್ಲಿ ಪ್ರಸ್ತುತ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿರುವ KAS ಅಧಿಕಾರಿ ಬಾಲಪ್ಪ ಹಂದಿಗುಂದ ವಿರುದ್ಧ ಬೆಂಗಳೂರಿನ ದೇವನಹಳ್ಳಿ ಸುತ್ತಮುತ್ತ ಅಕ್ರಮವಾಗಿ ಭೂಸ್ವಾಧೀನ ಮಾಡಿರುವ ಹಾಗೂ ಪರಿಹಾರ ಹಂಚಿಕೆಯಲ್ಲಿನ ಅಕ್ರಮಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಈ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಉನ್ನತಮಟ್ಟದ ತನಿಖೆಗೆ ಕೋರಿ ಸಿಟಿಜನ್ ರೈಟ್ಸ್ ಫೌಂಡೇಶನ್ (Citizen Rights Foundation) ಅಧ್ಯಕ್ಷ ಕೆ.ಎ.ಪಾಲ್ (K.A. Paul) ಅವರು ಮುಖ್ಯಮಂತ್ರಿಗೆ ಸೆಪ್ಟೆಂಬರ್ 12ರಂದು ದೂರು ಸಲ್ಲಿಸಿದ್ದರು. ಅಷ್ಟೇ ಅಲ್ಲ, ಈ ಭ್ರಷ್ಟಾಚಾರ ಆರೋಪ ಬಗ್ಗೆ ತನಿಖೆಗೆ ಕೋರಿ ಅಕ್ಟೊಬರ್ 10ರಂದು ಲೋಕಾಯುಕ್ತರಿಗೂ ದೂರು ಸಲ್ಲಿಸಿದ್ದರು.

ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿದ್ದಾಗ ಜಾರಿ ನಿರ್ದೇಶನಾಲಯಕ್ಕೆ ಕೆ.ಎ.ಪಾಲ್ ಅವರು ದೂರು ಸಲ್ಲಿಸಿದ್ದಾರೆ. EDಯು ಪ್ರಕರಣದ ಬಗ್ಗೆ ಪರಿಶೀಲನೆ ಆರಂಭಿಸಿದೆ. ಆದರೆ ಬಾಳಪ್ಪ ಹಂದಿಗುಂದ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವರು ಶ್ರೀರಕ್ಷೆಯಾಗಿದ್ದಾರೆ ಎಂದು ಆರೋಪಿಸುತ್ತಿದ್ದ ಕೆ.ಎ.ಪಾಲ್ ಅವರು ಶನಿವಾರ (11.01.2025) ರಾಜ್ಯಪಾಲರಿಗೆ ದೂರು ಸಲ್ಲಿಸಿ ಬಾಳಪ್ಪ ಹಂದಿಗುಂಡ ವಿರುದ್ದದ ಆರೋಪಗಳ ಬಗ್ಗೆ ತನಿಖೆಗೆ ನಿರ್ದೇಶನ ಕೋರಿದ್ದಾರೆ.

ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಬೇಕಿರುವ ಬಾಳಪ್ಪ ಹಂದಿಗುಂದ ಅವರು ಪ್ರಭಾವಿ ಅಧಿಕಾರಿಯಾಗಿದ್ದು ಅವರ ವಿರುದ್ಧ ಗಂಭೀರ ಪ್ರಕರಣಗಳಿದ್ದರೂ KIADBಯಲ್ಲೇ ಮುಂದುವರಿಸಲಾಗಿದೆ. ಇದರಿಂದಾಗಿ ಹಗರಣಗಳ ಕುರಿತ ಸಾಕ್ಷ್ಯಗಳನ್ನೂ ನಾಶಪಡಿಸುವ ಸಾಧ್ಯತೆಗಳಿದ್ದರೂ ಅವರನ್ನು ವರ್ಗಾಯಿಸದೆ ಇರುವ ಸರ್ಕಾರದ ನಡೆ ಬಗ್ಗೆಯೂ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಕೆ.ಎ.ಪಾಲ್ ಅವರು ಗಮನಸೆಳೆದಿದ್ದಾರೆ.

ಗಂಭೀರ ಆರೋಪಗಳ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿ, ಚಪ್ಪರದಹಳ್ಳಿ ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ಸಂದರ್ಭದಲ್ಲಿ ಅರ್ಹರಲ್ಲದವರ ಹೆಸರಿಗೆ ಹಣ ಸಂದಾಯ ಆರೋಪ.

ಸರ್ಕಾರಿ ಜಮೀನನ್ನು ರೈತರ ಹೆಸರುಗಳಲ್ಲಿ ಗುರುತಿಸಿ ಅಕ್ರಮವಾಗಿ ಪರಿಹಾರ ನೀಡಲಾಗಿದೆ ಎಂಬ ಆರೋಪ.

ಆಕ್ಷೇಪಾರ್ಹ ನಿರ್ಧಾರದಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ.

KIADBಯ ಈಗಿನ ಹಾಗೂ ಹಿಂದಿನ ಭೂಸ್ವಾಧೀನಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೂ ಹಗರಣದಲ್ಲಿ ಶಾಮೀಲಾಗಿರುವ ಶಂಕೆ

ಈ ಬಗ್ಗೆ ಸರಣಿ ದೂರುಗಳು ದಾಖಲಾದರೂ ವಿವಾದಿತ ವಿಶೇಷ ಭೂಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲು ಕೈಗಾರಿಕಾ ಸಚಿವರಿಂದ ಸಿಎಂಗೆ ಒತ್ತಡ.

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರಿಗೆ ಸರ್ಕಾರದ ಶ್ರೀರಕ್ಷೆ ಇರುವುದರಿಂದ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹ.

SHOCKING: ‘ಸಮೋಸಾ’ದಲ್ಲಿ ‘ಶೇವಿಂಗ್ ಬ್ಲೇಡ್’ ಪತ್ತೆ: ಬೆಚ್ಚಿ ಬಿದ್ದ ಗ್ರಾಹಕ | Watch Video

SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!

Share. Facebook Twitter LinkedIn WhatsApp Email

Related Posts

ಸಾಮಾಜಿಕ ಜಾಲತಾಣದ ‘ಸ್ನೇಹ’ದ ಬಗ್ಗೆ ಇರಲಿ ಎಚ್ಚರ: ಬೆಳಗಾವಿಯ ಈ ಘಟನೆ ನಿಮಗೊಂದು ಪಾಠ!

06/04/2026 2:42 PM2 Mins Read

ರಾಜ್ಯದ ರೈತರ ಗಮನಕ್ಕೆ: ಇನ್ಮುಂದೆ ಯೂರಿಯಾ ರಸಗೊಬ್ಬರ ಖರೀದಿಗೆ ‘FID ಸಂಖ್ಯೆ’ ಕಡ್ಡಾಯ

06/04/2026 2:32 PM1 Min Read

BIG NEWS: ಭ್ರಷ್ಟಾಚಾರಿಗೆ ಕೋರ್ಟ್ ಶಾಕ್: ಲಂಚ ಪಡೆದಿದ್ದ ಸರ್ಕಾರಿ ಅಧಿಕಾರಿಗೆ 2 ವರ್ಷ ಜೈಲು ಶಿಕ್ಷೆ, 40,000 ದಂಡ

06/04/2026 2:24 PM2 Mins Read
Recent News

ಸಾಮಾಜಿಕ ಜಾಲತಾಣದ ‘ಸ್ನೇಹ’ದ ಬಗ್ಗೆ ಇರಲಿ ಎಚ್ಚರ: ಬೆಳಗಾವಿಯ ಈ ಘಟನೆ ನಿಮಗೊಂದು ಪಾಠ!

06/04/2026 2:42 PM

ರಾಜ್ಯದ ರೈತರ ಗಮನಕ್ಕೆ: ಇನ್ಮುಂದೆ ಯೂರಿಯಾ ರಸಗೊಬ್ಬರ ಖರೀದಿಗೆ ‘FID ಸಂಖ್ಯೆ’ ಕಡ್ಡಾಯ

06/04/2026 2:32 PM

BIG NEWS: ಭ್ರಷ್ಟಾಚಾರಿಗೆ ಕೋರ್ಟ್ ಶಾಕ್: ಲಂಚ ಪಡೆದಿದ್ದ ಸರ್ಕಾರಿ ಅಧಿಕಾರಿಗೆ 2 ವರ್ಷ ಜೈಲು ಶಿಕ್ಷೆ, 40,000 ದಂಡ

06/04/2026 2:24 PM

PUC ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿದ್ದೀರಾ? : ಹಾಗಾದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ!

06/04/2026 2:22 PM
State News
KARNATAKA

ಸಾಮಾಜಿಕ ಜಾಲತಾಣದ ‘ಸ್ನೇಹ’ದ ಬಗ್ಗೆ ಇರಲಿ ಎಚ್ಚರ: ಬೆಳಗಾವಿಯ ಈ ಘಟನೆ ನಿಮಗೊಂದು ಪಾಠ!

By kannadanewsnow0906/04/2026 2:42 PM KARNATAKA 2 Mins Read

ಬೆಳಗಾವಿ: “ಪ್ರೀತಿ ಕುರುಡು” ಎನ್ನುವ ಮಾತಿದೆ. ಆದರೆ ಇಂದಿನ ಕಾಲದಲ್ಲಿ ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳನ್ನು ನೋಡಿದರೆ, ಪ್ರೀತಿ ಮಾಡುವಾಗ…

ರಾಜ್ಯದ ರೈತರ ಗಮನಕ್ಕೆ: ಇನ್ಮುಂದೆ ಯೂರಿಯಾ ರಸಗೊಬ್ಬರ ಖರೀದಿಗೆ ‘FID ಸಂಖ್ಯೆ’ ಕಡ್ಡಾಯ

06/04/2026 2:32 PM

BIG NEWS: ಭ್ರಷ್ಟಾಚಾರಿಗೆ ಕೋರ್ಟ್ ಶಾಕ್: ಲಂಚ ಪಡೆದಿದ್ದ ಸರ್ಕಾರಿ ಅಧಿಕಾರಿಗೆ 2 ವರ್ಷ ಜೈಲು ಶಿಕ್ಷೆ, 40,000 ದಂಡ

06/04/2026 2:24 PM

PUC ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿದ್ದೀರಾ? : ಹಾಗಾದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ!

06/04/2026 2:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.