ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದೇಹದ ಭಾಗಗಳು ಮತ್ತು ಸಾಮಾನುಗಳಲ್ಲಿ ಅಡಗಿಸಿಟ್ಟಿದ್ದ ನೂಡಲ್ಸ್ ಪ್ಯಾಕೆಟ್’ಗಳನ್ನ ಅಡಗಿಸಿಟ್ಟಿದ್ದು, ಅದ್ರಲ್ಲಿದ್ದ ವಜ್ರಗಳನ್ನ ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾರಾಂತ್ಯದಲ್ಲಿ 4.44 ಕೋಟಿ ಮೌಲ್ಯದ 6.8 ಕೆಜಿ ಚಿನ್ನ ಮತ್ತು 2.02 ಕೋಟಿ ಮೌಲ್ಯದ ವಜ್ರಗಳನ್ನು ವಶಪಡಿಸಿಕೊಂಡ ನಂತರ ನಾಲ್ವರು ಪ್ರಯಾಣಿಕರನ್ನ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿ ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬೈನಿಂದ ಬ್ಯಾಂಕಾಕ್’ಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ತಡೆದು ತನ್ನ ಟ್ರಾಲಿ ಬ್ಯಾಗ್ ನಲ್ಲಿ ನೂಡಲ್ಸ್ ಪ್ಯಾಕೆಟ್ ಗಳಲ್ಲಿ ಅಡಗಿಸಿಟ್ಟಿದ್ದ ವಜ್ರಗಳನ್ನ ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ನಂತರ ಪ್ರಯಾಣಿಕನನ್ನ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ನಡುವೆ ಕೊಲಂಬೋದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಪ್ರಜೆಯನ್ನ ತಡೆದು ನೋಡಿದಾಗ ಆಕೆಯ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿದ್ದ 321 ಗ್ರಾಂ ತೂಕದ ಚಿನ್ನದ ಗಟ್ಟಿಗಳು ಪತ್ತೆಯಾಗಿದೆ ಎಂದು ಅವರು ಹೇಳಿದರು.
BREAKING:ಮುರುಘಾ ಶ್ರೀ ಮತ್ತೆ ಜೈಲಿಗೆ: ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್
ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ: ‘ತಾಪಿ ನದಿಯಲ್ಲಿ’ 2 ಪಿಸ್ತೂಲ್ ಪತ್ತೆ
Lok Sabha Election 2024: ಶರ್ಟ್’ನಲ್ಲಿ 14 ಲಕ್ಷ ರೂಪಾಯಿ ಬಚ್ಚಿಟ್ಟಿಕೊಂಡಿದ್ದ ವ್ಯಕ್ತಿ ಬಂಧನ, ವೀಡಿಯೊ ವೈರಲ್