ನಿಷೇಧಿತ ಖಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸೆಪ್ಟೆಂಬರ್ 18 ರಂದು ವ್ಯಾಂಕೋವರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ ನಂತರ ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರ ವಿರುದ್ಧ ಹೊಸ ಬೆದರಿಕೆ ಹಾಕಲಾಗಿದೆ.
ಈ ತಂಡ ಬಿಡುಗಡೆ ಮಾಡಿದ ಪೋಸ್ಟರ್ ನಲ್ಲಿ ಒಟ್ಟಾವಾದಲ್ಲಿನ ಭಾರತದ ಹೈಕಮಿಷನರ್ ದಿನೇಶ್ ಪಟ್ನಾಯಕ್ ಮುಖದ ಮೇಲೆ ಗುರಿ ಇಟ್ಟುಕೊಂಡಿದ್ದು, ಇಂಡೋ-ಕೆನಡಿಯನ್ನರಿಗೆ ಕಾನ್ಸುಲೇಟ್ ನಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದಾರೆ.
ಕೆನಡಾ ಸರ್ಕಾರದ ವರದಿಯು ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕ ಗುಂಪುಗಳ ಉಪಸ್ಥಿತಿ ಮತ್ತು ವಿದೇಶಿ ಧನಸಹಾಯವನ್ನು ಒಪ್ಪಿಕೊಂಡ ವಾರಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.