ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೇರಳ ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಹಸಿವು ತಾಳಲಾರದೆ ಯುವಕನೊಬ್ಬ ಸತ್ತ ಬೆಕ್ಕಿನ ಹಸಿ ಮಾಂಸ ತಿಂದಿದ್ದಾನೆ. ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಕುಟ್ಟಿಪ್ಪುರಂ ಪೊಲೀಸರ ಪ್ರಕಾರ, ಸಂಜೆ 5 ಗಂಟೆ ಸುಮಾರಿಗೆ 27 ವರ್ಷದ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಸತ್ತ ಬೆಕ್ಕಿನ ಮಾಂಸವನ್ನು ತಿನ್ನುತ್ತಿದ್ದನು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಲ್ಲಿಗೆ ಆಗಮಿಸಿ ವ್ಯಕ್ತಿಗೆ ಆಹಾರ ನೀಡಿದ್ದಾರೆ. ತಕ್ಷಣವೇ ಆತನನ್ನ ಕೋಝಿಕ್ಕೋಡ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇನ್ನು ಯುವಕನನ್ನು ಈ ಬಗ್ಗೆ ವಿಚಾರಿಸಿದಾಗ ಕಳೆದ ಐದು ದಿನಗಳಿಂದ ಊಟ ಮಾಡಿಲ್ಲ. ಹಸಿವಿನ ನೋವು ತಾಳಲಾರದೆ ಸತ್ತ ಬೆಕ್ಕಿನ ಮಾಂಸ ತಿಂದಿದ್ದಾನೆ ಎಂದು ಬಹಿರಂಗಪಡಿಸಿದ್ದಾನೆ. ಈತ ಒಡಿಶಾದ ಧುಬ್ರಿ ಜಿಲ್ಲೆಯವನು ಎಂದು ಗುರುತಿಸಲಾಗಿದೆ.
BREAKING : ‘ಮನೀಶ್ ಸಿಸೋಡಿಯಾ’ ಬಿಗ್ ರಿಲೀಫ್ : ವಾರಕ್ಕೊಮ್ಮೆ ಅನಾರೋಗ್ಯ ಪೀಡಿತ ‘ಪತ್ನಿ’ ಭೇಟಿಯಾಗಲು ಅವಕಾಶ
ರಾಜ್ಯದ ‘BPL, APL ಕಾರ್ಡ್’ದಾರರಿಗೆ ಗುಡ್ ನ್ಯೂಸ್: ಈ ಯೋಜನೆಗೆ ನೋಂದಾಯಿಸಿದ್ರೇ ‘1650 ಚಿಕಿತ್ಸೆ ಫ್ರೀ’