ಬಾಗಲಕೋಟೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40ರಷ್ಟು ಕಮೀಷನ್ ಆರೋಪ ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕಮೇಷನ್ ಆರೋಪ ಮಾಡಿದ್ದಾರೆ. ನಮ್ಮ ಮೇಲೆ ಹರಿಹಾಯ್ದ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಈಗ ಕಮೀಷನ್ ಆರೋಪದ ಹಿನ್ನಲೆಯಲ್ಲಿ ರಾಜೀನಾಮೆ ನೀಡಬೇಕು ಎಂಬುದಾಗಿ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಕಾಂಗ್ರೆಸ್ ಸರ್ಕಾದ ಅವಧಿಯಲ್ಲೂ ಗುತ್ತಿಗೆ ಕಮೀಷನ್ ದಂಧೆ ನಡೆಯುತ್ತಿರೋದಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ. ಹೀಗಾಗಿ ನಮ್ಮ ವಿರುದ್ಧ ಹರಿಹಾಯ್ದ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನಮಗೆ ಹೇಳಿದ್ರಲ್ಲ ನೀವು ಈಗ ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡಿ, ಈ ರಾಜ್ಯದ ಜನರ ಕ್ಷಮೆ ಕೇಳಬೇಕು. ನಮ್ಮ ಮೇಲೆ ಆರೋಪ ಮಾಡಿದಷ್ಟು ಆರೋಪ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಭಾರತದಲ್ಲಿ Snapchat ಸರ್ವರ್ ಡೌನ್ : ಕಂಟೆಂಟ್ ‘ಅಪ್‌ಲೋಡ್’ ಸಮಸ್ಯೆ ಎದುರಿಸಿದ ಬಳಕೆದಾರರು
‘IPS’ ಹುದ್ದೆಗೆ ‘ಪ್ರತಾಪ್ ರೆಡ್ಡಿ’ ರಾಜೀನಾಮೆ: ನಿವೃತ್ತಿಗೆ 2 ತಿಂಗಳು ಬಾಕಿ ಇರುವಾಗಲೇ ‘ಗುಡ್ ಬೈ’