ಬೇಸಿಗೆಯ ಸಮಯದಲ್ಲಿ ಅನೇಕ ಸಮಸ್ಯೆಗಳುಕಂಡುಬರುತ್ತದೆ.ಟ್ಯಾನಿಂಗ್, ಸ್ಕಿನ್ ಬರ್ನಿಂಗ್ ಸೂರ್ಯನಿಂದ ಆಯಾಸದಂತಹ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಸುವುದು ತುಂಬಾ ಕಷ್ಟ. ಸಮ್ಮರ್ ನಲ್ಲಿ ಟ್ರಾವೆಲ್ ಮಾಡಲು ಯೋಜನೆ ರೂಪಿಸಿದ್ದರೆ ಇಲ್ಲಿದೆ ಕೆಲವು ಸಲಹೆಗಳು.
ಬೇಸಿಗೆಯ ಸಮಯದಲ್ಲಿ ಕರ್ಚಿಫ್ ಮತ್ತು ವೆಟ್ ವೈಪ್ ಗಳನ್ನು ಇಟ್ಟುಕೊಳ್ಳಬೇಕು. ಬೇಸಿಗೆ ಕಾಲದಲ್ಲಿ, ಬೆವರುವುದರಿಂದ ಸೋಂಕು ಉಂಟಾಗಬಹುದು, ಈ ಸಮಯದಲ್ಲಿ, ನಿಮ್ಮೊಂದಿಗೆ ಟವೆಲ್ ಮತ್ತು ವೆಟ್ ವೈಪ್ ಗಳನ್ನು ಉಪಯೋಗಿಸಬೇಕು. ಕಾಲಕಾಲಕ್ಕೆ ಅವುಗಳ ಸಹಾಯದಿಂದ ಚರ್ಮವನ್ನು ಸ್ವಚ್ಛಗೊಳಿಸಿಕೊಳ್ಳಬಹುದು.ಹಾಗೆ ಮಾಡುವುದರಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.
ಸ್ಕಾರ್ಪ್ ಮತ್ತು ಹ್ಯಾಟ್ಸ್ ಬಳಸಬೇಕು ಪ್ರಕಾಶಮಾನವಾದ ಸೂರ್ಯನ ಬೆಳಕು ತಲೆನೋವಿಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚೀಲದಲ್ಲಿ ಟೋಪಿ ಅಥವಾ ಸ್ಕಾರ್ಫ್ ಅನ್ನು ಇಟ್ಟುಕೊಳ್ಳುವುದು ಮುಖ್ಯ. ಇದು ನಿಮ್ಮ ಮುಖವನ್ನು ರಕ್ಷಿಸುವುದಲ್ಲದೆ, ಶಾಖದಿಂದ ನಿಮ್ಮ ತಲೆಯನ್ನು ತಂಪಾಗಿಡಲು ಸಹಾಯ ಮಾಡುತ್ತದೆ.ಬೇಸಿಗೆಯ ಸಮಯದಲ್ಲಿ ದೇಹವನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ.
ಬೇಸಿಗೆಯಲ್ಲಿ ಪ್ರಯಾಣಿಸುವಾಗ, ಬ್ಯಾಗ್ ನಲ್ಲಿ ಸನ್ ಗ್ಲಾಸ್ ಗಳನ್ನು ಇಟ್ಟುಕೊಳ್ಳುವುದು ತುಂಬಾ ಉತ್ತಮ. ನೀವು ಅದರಲ್ಲಿ ಸ್ಟೈಲಿಶ್ ಆಗಿ ಕಾಣುವುದು ಮಾತ್ರವಲ್ಲದೆ ಸೂರ್ಯನ ಬೆಳಕಿನಿಂದ ತಪ್ಪಿಸಿಕೊಳ್ಳಬಹುದು.
ಸನ್ ಗ್ಲಾಸ್ ನ ಸಹಾಯದಿಂದ, ಕಣ್ಣುಗಳನ್ನು ಕೂಡ ರಕ್ಷಿಸಬಹುದು. ಇದು ಬೇಸಿಗೆಯಲ್ಲಿ ನಿಮ್ಮ ಕಣ್ಣುಗಳನ್ನು ಕೂಲ್ ಆಗಿಸಲು ಸಹಾಯ ಮಾಡುತ್ತದೆ.
ಸ್ಕ್ರೀನ್ ಲೋಷನ್ ಬೇಸಿಗೆಯ ಸಮಯದಲ್ಲಿ ತುಂಬಾ ಸಹಾಯ ಮಾಡುತ್ತದೆ.ಟ್ಯಾನಿಂಗ್ ಅನ್ನು ತಪ್ಪಿಸಲು ಸನ್ ಸ್ಕ್ರೀನ್ ಲೋಷನ್ ತುಂಬಾ ಮುಖ್ಯ, ಇದು ಚರ್ಮವನ್ನು ಪ್ರಕಾಶಮಾನವಾದ ಸೂರ್ಯನಿಂದ ರಕ್ಷಿಸುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಕಾಡುವ ಎಲ್ಲಾ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ಉತ್ತಮವಾದ ಸನ್ ಸ್ಕ್ರೀನ್ ಲೋಷನ್ ಅನ್ನು ಬಳಸಬೇಕು.ಇದರಿಂದ ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಬಹುದು.
ಹಗುರವಾದ ಆರಾಮದಾಯಕ ಬಟ್ಟೆ ಉಪಯೋಗಿಸಿ. ಬೇಸಿಗೆಯಲ್ಲಿ ಆರಾಮದಾಯಕವಾಗಿರುವಂತಹ ಬಟ್ಟೆಗಳನ್ನು ಧರಿಸುವುದು ಉತ್ತಮ. ಪ್ರಯಾಣದ ಸಮಯದಲ್ಲಿ ಸಡಿಲವಾದ ಬಟ್ಟೆಗಳನ್ನು ಧರಿಸಿ. ಇದು ಕಡಿಮೆ ಶಾಖ ಮತ್ತು ಬೆವರು ಕಡಿಮೆ ಅನುಭವಿಸುವಂತೆ ಮಾಡುತ್ತದೆ. ಪ್ರಯಾಣದ ಸಮಯದಲ್ಲಿ ಹೆಚ್ಚಾಗಿ ಹತ್ತಿ ಮತ್ತು ಆರಾಮದಾಯಕ ಬಟ್ಟೆಗಳನ್ನು ಬ್ಯಾಗ್ ನಲ್ಲಿ ಪ್ಯಾಕ್ ಮಾಡಿಕೊಳ್ಳಿ ಹಾಗೆ ಬಳಸಿ ಇದರಿಂದ ದೇಹಕ್ಕೆ ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳಬಹುದು.