ಬೆಂಗಳೂರು: ಕೆಇಎಯಿಂದ ಕರ್ನಾಟಕ ವಿದ್ಯುತ್ ನಿಗಮದಿಂದ 622 ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಅಂಕಪಟ್ಟಿ ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇದ್ದಂತ 44 ಹುದ್ದೆಗಳ ಅಂತಿಮ ಅಂಕಪಟ್ಟಿಯನ್ನು ಪ್ರಕಟಿಸಲಾಗಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾಹಿತಿ ಬಿಡುಗಡೆ ಮಾಡಿದ್ದು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಖಾಲಿ ಇರುವ ಎಇ, ಜೆಇ (ವಿವಿಧ ವಿಭಾಗಗಳಲ್ಲಿನ), ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್‌ವೈಸರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎರಡು ಅವಧಿಗಳಲ್ಲಿ ದಿನಾಂಕ 18-02-2024 ರಂದು ನಡೆಸಲಾಗಿದೆ ಎಂದಿದೆ.
ಸದರಿ ಪರೀಕ್ಷೆಯ ಅಂತಿಮ ಉತ್ತರಗಳನ್ನು 17-04-2024 ರಂದು ಪ್ರಕಟಿಸಲಾಗಿದೆ. ಪ್ರಸ್ತುತ ಹುದ್ದೆವಾರು ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾದ http://kea.kar.nic.in ವೆಬ್‌ಸೈಟಿನಲ್ಲಿ ದಿನಾಂಕ 08-05-2024 ರಂದು ಪ್ರಕಟಿಸಲಾಗಿದೆ. ಕಳೆದ ಬಾರಿ ನಡೆಸಿದ ಪರೀಕ್ಷೆಯಲ್ಲಿ ಕೆಪಿಸಿಎಲ್ ಸಂಸ್ಥೆಯು ಸೂಚಿಸಿರುವಂತೆ, ಪ್ರತಿ ತಪ್ಪು ಉತ್ತರಕ್ಕೆ 1/3 ರಷ್ಟು ನಕಾರಾತ್ಮಕ ಅಂಕವನ್ನು ಕಡಿತಗೊಳಿಸಲಾಗಿದೆ ಎಂದಿದೆ.
ಪ್ರಚುರಪಡಿಸಿರುವ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 15-05-2024 ರೊಳಗೆ ಇ-ಮೇಲ್ ವಿಳಾಸ kea2023exam@gmail.com ಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.
KSFC final list
KPC ತಾತ್ಕಾಲಿಕ ಅಂಕ ಪಟ್ಟಿ ಪ್ರಕಟ
ಕರ್ನಾಟಕ ವಿದ್ಯುತ್ ನಿಗಮದ 622 ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಅಂಕ ಪಟ್ಟಿ & ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇದ್ದ 41 ಹುದ್ದೆಗಳ ಅಂತಿಮ ಅಂಕ ಪಟ್ಟಿಯನ್ನು ಕೆಇಎ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ.@CMofKarnataka @drmcsudhakar pic.twitter.com/zNwMiwpH8l— KEA (@KEA_karnataka) May 8, 2024
ಕರ್ನಾಟಕ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇದ್ದಂತ 44 ಹುದ್ದೆಗಳ ಅಂತಿಮ ಅಂಕಪಟ್ಟಿ ಪ್ರಕಟ
ದಿನಾಂಕ 17.02.2024 ರಂದು ಕೆಇಎ ವತಿಯಿಂದ ನಡೆಸಲಾಗಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿನ ವಿವಿಧ ವೃಂದದ ಹುದ್ದೆಗಳ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಅಂಕ ಪಟ್ಟಿಯನ್ನು ಪ್ರಕಟಿಸಿ 29.04.2024 ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿರುತ್ತದೆ. ಅದರಂತೆ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಅಂತಿಮ ಅಂಕ ಪಟ್ಟಿಯನ್ನು ದಿನಾಂಕ 08.05.20224 ರಂದು ಕೆಇಎ http://kea.kar.nic.in ವೆಬ್‌ಸೈಟನಲ್ಲಿ ಪ್ರಕಟಿಸಲಾಗಿದೆ.
BIG NEWS: ಇನ್ಮುಂದೆ ಕರ್ನಾಟಕದಲ್ಲಿ ಪದವಿ 3 ವರ್ಷಕ್ಕೆ ಸೀಮಿತ, 4 ವರ್ಷದ ಕೋರ್ಸ್ ರದ್ದು