ಬೆಂಗಳೂರು: ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ನಾಲ್ಕನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.
ಸೀಟು ಹಂಚಿಕೆಯಾದವರು ಡಿ.20ರೊಳಗೆ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಸಂಬಂಧಿಸಿದ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಪಿಜಿ ಆಯುಷ್ ಫಲಿತಾಂಶ ಪ್ರಕಟ
ಪಿಜಿ ಆಯುಷ್ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಕೂಡ ಪ್ರಕಟಿಸಿದ್ದು,
ಸೀಟು ಹಂಚಿಕೆಯಾದವರು ಡಿ.22ರಂದು ಮಧ್ಯಾಹ್ನ 3 ಗಂಟೆ ಒಳಗೆ ಶುಲ್ಕ ಕಟ್ಟಿ ಅಂದೇ ಸಂಜೆ 6 ಗಂಟೆಯೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಕಷ್ಟದಲ್ಲೂ ಭರವಸೆಯ ಬೆಳಕಾಗಿ ಕಂಡವರು ಶಿವಾನಂದ ತಗಡೂರು: ಗಣ್ಯರ ಶ್ಲಾಘನೆ








