ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇಂದು ಡಿಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಫಲಿತಾಂಶವನ್ನು ಕೆಇಎ https://kea.kar.nic.in ವೆಬ್ ಸೈಟ್ ಗೆ ಭೇಟಿ ನೀಡಿ ವೀಕ್ಷಿಸುವಂತೆ ತಿಳಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿಸಿಇಟಿ-2024 ರ ಫಲಿತಾಂಶವನ್ನು ದಿನಾಂಕ 29-06-2024 ರ ಮಧ್ಯಾಹ್ನ 2.00 ರ ನಂತರ ಪ್ರಕಟಿಸಲಾಗುವುದು. ಡಿಪ್ಲೊಮ ಪರೀಕ್ಷೆಯಲ್ಲಿ ನಿಗದಿತ ಅರ್ಹತೆ ಇರುವ ಮತ್ತು ಡಿಸಿಇಟಿ ಪರೀಕ್ಷೆಗೆ ಹಾಜರಾಗಿ ಬ್ಯಾಂಕ್ ಪ್ರಕಟವಾಗದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಡಿಪ್ಲೊಮ ಅಂಕ ಮತ್ತು ಅಂಕಪಟ್ಟಿಗಳನ್ನು ಪಿಡಿಎಫ್ ಫಾರ್ಮಾಟ್ ನಲ್ಲಿ ಪ್ರಾಧಿಕಾರದ ಇಮೇಲ್ keaugcet24@gmail.com ಸಲ್ಲಿಸಿದಲ್ಲಿ ಅರ್ಹತೆಯನ್ನು ಪರಿಶೀಲಿಸಿ ನಿಯಮಾನುಸಾರ ಬ್ಯಾಂಕ್ ನೀಡಲಾಗುವುದು ಎಂದಿದೆ.
ಎರಡನೇ ವರ್ಷದ / ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಹಾಗು ಮೊದಲನೇ ವರ್ಷದ ಆರ್ಕಿಟೆಕ್ಟರ್ ಕೋರ್ಸಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ ದಾಖಲಾತಿ ಪರಿಶೀಲನೆಯನ್ನು ಈ ಕೆಳಕಂಡ ವೇಳಾಟೆಯಂತೆ ನಡೆಸಲಾಗುವುದು ಅಂತ ತಿಳಿಸಿದೆ.
ಅಭ್ಯರ್ಥಿಗಳು, ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ಈ ಕೆಳಗೆ ಗೊತ್ತುಪಡಿಸಿರುವ ವೇಳಾಪಟ್ಟಿ ಪ್ರಕಾರ ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ (Government and Aided) ಡಿಪ್ಲೊಮ ಪಾಲಿಟೆಕ್ನಿಕ್‌ಗಳಲ್ಲಿ ನಡೆಸಲಾಗುವುದು. ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುವ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂಬುದಾಗಿ ಹೇಳಿದೆ.
ಅಭ್ಯರ್ಥಿಯು ಕೆಇಎ ವೆಬ್‌ಸೈಟಿನಲ್ಲಿ ಪ್ರಕಟಿಸಿರುವ ಯಾವುದಾದರೂ ಹತ್ತಿರದ ಸರ್ಕಾರಿ ಅಥವಾ ಅನುದಾನಿತ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಖುದ್ದಾಗಿ ಹಾಜರಿರಬೇಕು. ಅಂದರೆ, ಅವರ ಪರವಾಗಿ ಬೇರೆ ಯಾರೂ ಹಾಜರಾಗುವಂತಿಲ್ಲ ಅಥವಾ ಅವರ ಪರವಾಗಿ ಬಂದಿರುವ ಯಾರೇ ಪ್ರತಿನಿಧಿಗಳಿಗೆ ಹಾಜರಾಗಲು ಅವಕಾಶ ನೀಡುವುದಿಲ್ಲ. ಈ ವೇಳಾಪಟ್ಟಿಯು ತಾತ್ಕಾಲಿಕ ಹಾಗು ಬದಲಾವಣೆಗೆ ಒಳಪಟ್ಟಿರುತ್ತದೆ. ಅಭ್ಯರ್ಥಿಗಳು ಆಗಿಂದಾಗ್ಗೆ ಪ್ರಾಧಿಕಾರದ ವೆಬ್ ಸೈಟನ್ನು ಪರಿಶೀಲಿಸುತ್ತಿರಲು ಸೂಚಿಸಲಾಗಿದೆ.
ವಿಶೇಷ ಪ್ರವರ್ಗದ ಎನ್‌ಸಿಸಿ, ಕ್ರೀಡೆ, ಸೈನಿಕರು, ಮಾಜಿ ಸೈನಿಕರು, ಸಿಎಪಿಎಫ್, ಮಾಜಿ-ಸಿಎಪಿಎಫ್ – ಕ್ಷೇಮ್ ಮಾಡಿರುವ ಅಭ್ಯರ್ಥಿಗಳು ಮಾತ್ರ ವಿಶೇಷ ವರ್ಗದ ಪ್ರಮಾಣ ಪತ್ರಗಳು ಮತ್ತು ಇತರೆ ಶೈಕ್ಷಣಿಕ ಪ್ರಮಾಣ ಪತ್ರಗಳೊಂದಿಗೆ ಬ್ಯಾಂಕ್ ಪಟ್ಟಿಯ ಅನುಸಾರ ಕೆಇಎ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ಪರಿಶೀಲನೆಗೆ ಹಾಜರಾಗುವುದು ಅಂತ ಹೇಳಿದೆ.
ಡಿಸಿಇಟ- 2024 ವಿಕಲಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆ: ದಿನಾಂಕ 01-07-2024 – ವಿವರವಾದ ಪ್ರಕಟಣೆಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳು ದಾಖಲೆಗಳ ಪರಿಶೀಲನೆಗೆ ಬರುವ ಸಮಯದಲ್ಲಿ, ತಾವು ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಷೇಮುಗಳಿಗೆ ಪೂರಕವಾದ ಎಲ್ಲಾ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ಒಂದು attested ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಪರಿಶೀಲನೆಯ ದಿನದಂದು ಯಾವುದೇ ದಾಖಲೆ | ಪ್ರಮಾಣಪತ್ರ / ಅಂಕಪಟ್ಟಿಯನ್ನು ಹಾಜರುಪಡಿಸಲು ಯಾರೇ ವಿದ್ಯಾರ್ಥಿ ವಿಫಲನಾದ ಪಕ್ಷದಲ್ಲಿ, ಅಂಥ ವಿದ್ಯಾರ್ಥಿಯ ದಾಖಲೆಗಳನ್ನು ಪರಿಶೀಲನೆ ಮಾಡುವುದಿಲ್ಲ ಮತ್ತು ಅವರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲ. ಆನಂತರ ಅವರು ತಮ್ಮ ಇಚ್ಛೆ (Option) ಯನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಅವರನ್ನು ಪರಿಗಣಿಸುವುದಿಲ್ಲ.
ದಾಖಲೆಗಳ ಪರಿಶೀಲನೆಯ ನಂತರ ಅರ್ಹರಾಗುವಂತಹ ವಿದ್ಯಾರ್ಥಿಗಳನ್ನು ಮಾತ್ರ ಅವರು ತಮ್ಮ ಇಚ್ಛೆಗಳನ್ನು ನಮೂದಿಸುವುದಕ್ಕಾಗಿ ಪರಿಗಣಿಸಲಾಗುವುದು. ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಡಿಸಿಇಟಿ-2024ರ ಇ-ಪ್ರೋಚರ್‌ನಲ್ಲಿ ಪ್ರಕಟಿಸಲಾಗಿದೆ.
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಜು.1ರಿಂದ ‘ಗ್ರಾಮ ಪಂಚಾಯತಿ’ಗಳಲ್ಲಿ ‘ಜನನ, ಮರಣ ನೋಂದಣಿ’ ಪ್ರಾರಂಭ
BIG NEWS: ‘ಶಿಕ್ಷಣ ಸಚಿವ’ರ ಕ್ಷೇತ್ರದಲ್ಲೇ ಲಂಚಾವತಾರ: ‘ಪೋನ್ ಪೇ’ ಮೂಲಕವೇ ‘SDA ಲಂಚ ಸ್ವೀಕಾರ’