ಬೆಂಗಳೂರು: ಬೆಂಗಳೂರು ಜಲಮಂಡಳಿ (BWSSB), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಸೇರಿದಂತೆ ರಾಜ್ಯದ ವಿವಿಧ ನಿಗಮ-ಮಂಡಳಿಗಳ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಲಿಖಿತ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪರೀಕ್ಷಾ ವೇಳಾಪಟ್ಟಿ ಹೀಗಿದೆ:
|
ಪರೀಕ್ಷಾ ದಿನಾಂಕ |
ಇಲಾಖೆ/ಮಂಡಳಿ |
ಹುದ್ದೆಗಳ ವಿವರ |
|---|---|---|
|
ಏಪ್ರಿಲ್ 26 |
KSSIDC ಮತ್ತು BWSSB |
ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು ಹಾಗೂ ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) |
|
ಮೇ 10 |
RGUHS, KSSIDC, BWSSB, ಕೃಷಿ ಮಾರಾಟ ಇಲಾಖೆ |
ವಿವಿಧ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಹಾಗೂ ನಿರ್ದಿಷ್ಟ ಪತ್ರಿಕೆ |
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಸೂಚನೆಗಳು:
ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಪಾರದರ್ಶಕತೆ ಕಾಪಾಡಲು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (IAS) ಅವರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದಾರೆ:
-
- ಮುಖ ಚಹರೆ ತಂತ್ರಜ್ಞಾನ (Facial Recognition): ಪರೀಕ್ಷಾ ಕೇಂದ್ರದಲ್ಲಿ ಈ ಬಾರಿ ಮುಖ ಚಹರೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳ ತಪಾಸಣೆ ನಡೆಯಲಿದೆ. ಈ ಪ್ರಕ್ರಿಯೆಗೆ ಸಮಯ ತಗುಲವುದರಿಂದ, ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವ ಕನಿಷ್ಠ ಎರಡು ಗಂಟೆ ಮೊದಲೇ ಕೇಂದ್ರಕ್ಕೆ ಹಾಜರಿರಬೇಕು.
- ಋಣಾತ್ಮಕ ಮೌಲ್ಯಮಾಪನ (Negative Marking): ಈ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ಅಂಕ ಕಡಿತದ (Negative Evaluation) ನಿಯಮವಿರುತ್ತದೆ.
- ಐದನೇ ವೃತ್ತದ (5th Option) ಬಳಕೆ: * ಒಂದು ವೇಳೆ ನೀವು ಯಾವುದೇ ಪ್ರಶ್ನೆಗೆ ಉತ್ತರಿಸಲು ಇಚ್ಛಿಸದಿದ್ದರೆ, ಅಂತಹ ಪ್ರಶ್ನೆಗಳಿಗೆ ‘ಐದನೇ ವೃತ್ತ’ವನ್ನು ಶೇಡ್ ಮಾಡುವುದು ಕಡ್ಡಾಯ.
- ಇದಕ್ಕಾಗಿ ಪರೀಕ್ಷೆಯ ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ 5 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
- ಯಾವುದೇ ವೃತ್ತವನ್ನು ಶೇಡ್ ಮಾಡದೆ ಖಾಲಿ ಬಿಟ್ಟರೆ, ಪ್ರತಿ ಪ್ರಶ್ನೆಗೆ 1/4 ರಷ್ಟು (0.25) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಗಮನಿಸಿ: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಮೂಲಕ ಪ್ರವೇಶ ಪತ್ರ ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
https://twitter.com/KEA_karnataka/status/2042147179955974262








