ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರೆಯಲಾಗಿದ್ದಂತ ವಿವಿಧ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಕೆಇಎಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು, ಮತ್ತು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ 28-10-2023 ಮತ್ತು 29-10-2023 ಹಾಗು 18-11-2023 ರಿಂದ 25-11-2023 ವರೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಇಂದು ಪ್ರಕಟಿಸಲಾಗಿದೆ ಎಂದಿದೆ.
ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಅರ್ಜಿ ಸಂಖ್ಯೆಯನ್ನು, ಅಭ್ಯರ್ಥಿಯ ಹೆಸರಿನ ಮೊದಲ 05 ಅಕ್ಷರಗಳು ಮತ್ತು ಜನ್ಮ ದಿನಾಂಕ ವನ್ನು ನಮೂದಿಸಿದಲ್ಲಿ, ಅಭ್ಯರ್ಥಿಯು ಪರೀಕ್ಷೆಗೆ ಹಾಜರಾಗಿದ್ದ ಹುದ್ದೆಗಳು ಮತ್ತು ಇಲಾಖೆಯ ವಿವರಗಳು ಹಾಗು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು
ನೋಡಬಹುದಾಗಿದೆ.
ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಒಂದಕ್ಕಿಂತ ಹೆಚ್ಚು ಪ್ರವೇಶ ಪತ್ರ ಬಿಡುಗಡೆಯಾಗಿತ್ತು ಹಾಗು ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿ ಉಳಿದ ಎರಡೂ ಪ್ರವೇಶ ಪತ್ರಗಳನ್ನು ಪರೀಕ್ಷೆಯ ದಿನದಂದು ಕೊಠಡಿ ಮೇಲ್ವಿಚಾರಕರಿಗೆ ಹಿಂದಿರುಗಿಸಲು ಸೂಚಿಸಲಾಗಿತ್ತು ಎಂದು ತಿಳಿಸಿದೆ.
ಇಂತಹ ಅನೇಕ ಅಭ್ಯರ್ಥಿಗಳು ಮೇಲಿನ ಸೂಚನೆಗಳನ್ನು ಪಾಲಿಸಿರದ ಕಾರಣ, ಒಂದು ವೇಳೆ ಅಭ್ಯರ್ಥಿಯು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿದ್ದ ಪತ್ರಿಕೆಯ ವಿವರಗಳು ಪ್ರಕಟವಾಗದೆ ಇದ್ದಲ್ಲಿ ಅಂತಹ ಅಭ್ಯರ್ಥಿಗಳು ನಿಗದಿತ ಲಿಂಕ್ ನಲ್ಲಿಯೇ ನೀಡಲಾಗಿರುವ “ಯಾವುದೇ ಪತ್ರಿಕೆಯ ಸ್ಕೋರ್ ಕಾಣಿಸದಿದ್ದರೆ ಇಲ್ಲಿ ಕ್ಲಿಕ್ ಮಾಡಿ” ಎಂಬುದನ್ನು ಆಯ್ಕೆ ಮಾಡಿ, ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿದ್ದ ಪತ್ರಿಕೆಯ ವಿವರವನ್ನು ಆಯ್ಕೆ ಮಾಡಿ, ಪ್ರವೇಶ ಪತ್ರದ ನೊಂದಣಿ ಸಂಖ್ಯೆಯನ್ನು ದಾಖಲಿಸಬೇಕು, ನಂತರ ಅಭ್ಯರ್ಥಿಯು ತನ್ನ ಪ್ರವೇಶ ಪತ್ರದ ಪ್ರತಿಯನ್ನು ಅಪ್‌ಲೋಡ್ ಮಾಡಲು ಸೂಚಿಸಿದೆ.
ಫಲಿತಾಂಶ ಈ ರೀತಿ ಚೆಕ್ ಮಾಡಿ
ನೀವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರೆಯಲಾಗಿದ್ದಂತ ವಿವಿಧ ನೇಮಕಾತಿಗೆ ಅರ್ಜಿ ಸಲ್ಲಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರೇ, ಕೆಇಎ ಅಧಿಕೃತ ಜಾಲತಾಣ http://kea.kar.nic.in ಗೆ ಭೇಟಿ ನೀಡಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ರಿಸಲ್ಟ್ ಪಡೆಯಬಹುದಾಗಿದೆ.
‘ರಾಜ್ಯ ಸರ್ಕಾರ’ದಿಂದ ‘11,307 ಪೌರಕಾರ್ಮಿಕ’ರ ‘ಖಾಯಂ’ ಕುರಿತಂತೆ ಮಹತ್ವದ ಆದೇಶ
BIG BREAKING: 5, 8, 9 ಮತ್ತು 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ‘ಹೈಕೋರ್ಟ್ ಗ್ರೀನ್ ಸಿಗ್ನಲ್’