ಬೆಂಗಳೂರು : ಗ್ರಾಮ ಪಂಚಾಯತಿಗಳ ಸಮಗ್ರ ಅಭಿವೃದ್ಧಿಗಾಗಿ ‘ಕಾಯಕ ಗ್ರಾಮ’ ಕಾರ್ಯಕ್ರಮ ಜಾರಿಯಾಗಿದ್ದು,ಈ ಕಾರ್ಯಕ್ರಮದಡಿ ಅಧಿಕಾರಿಗಳು ಪಂಚಾಯತಿಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಿದ್ದಾರೆ. ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದ ಅಧಿಕಾರಿಗಳಿಗೆ ಪುರಸ್ಕಾರ ಲಭಿಸಲಿದೆ.
ಕಾಯಕ ಗ್ರಾಮ ಎಂದರೇನು?
ಅಧಿಕಾರಿಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದ ಗ್ರಾಮ ಪಂಚಾಯತಿಗಳ ದತ್ತು
ನಿಯಮಿತ ಭೇಟಿ, ಅಭಿವೃದ್ಧಿ ಯೋಜನೆಗಳ ಅನುಷ್ಠಾನ, ಪರಿಶೀಲನೆ
ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದ ಅಧಿಕಾರಿಗಳಿಗೆ ಪುರಸ್ಕಾರ
‘ಕಾಯಕ ಗ್ರಾಮ’
‘ಕೂಸಿನ ಮನೆ’
ಕೂಸಿನ ಮನೆ ನಿಯಮಿತವಾಗಿ ಕಾರ್ಯಾಚರಣೆಯಲ್ಲಿರುವಂತೆ ನೋಡಿಕೊಳ್ಳುವುದು
ಕೂಸಿನ ಮನೆಗೆ ಪ್ರತ್ಯೇಕ ಅಡುಗೆಕೋಣೆ, ಮಕ್ಕಳ ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಹಾಗು ಆರೋಗ್ಯ ತಪಾಸಣೆ ಮಾಡುವುದು
ಗ್ರಾಮೀಣ ಭಾಗದ ಮಕ್ಕಳ ಸಬಲೀಕರಣಕ್ಕೆ ವಿಶೇಷ ಕಾರ್ಯಕ್ರಮ
‘ಕಾಯಕ ಗ್ರಾಮ’
‘ಶಿಕ್ಷಣ’
ನರೇಗಾ ಯೋಜನೆ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು
ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವುದು
ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಗ್ರಂಥಾಲಯದ ವ್ಯವಸ್ಥೆ ಮಾಡುವುದು, ಫಲಿತಾಂಶದಲ್ಲಿ ಸುಧಾರಣೆ ತರುವುದು
ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ಆದ್ಯತೆ








