ಬೆಂಗಳೂರು: ಮುಂಬರುವಂತ ಏಪ್ರಿಲ್ 5ರಂದು ಚಿತ್ರಸಾಹಿತಿ ಕವಿರಾಜ್ ಅವರ ಸುಮಾರು 25 ವರ್ಷಗಳ ಸಿನಿ ಜೀನವದ 28 ರಸಮಯ ಘಟನೆಗಳ ಗುಚ್ಚವನ್ನು ಒಳಗೊಂಡಂತ ಕವಿರಾಜ್ ಮಾರ್ಗದಲ್ಲಿ ಕೃತಿ ಲೋಕಾರ್ಪಣೆಯಾಗಲಿದೆ.
ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವಂತ ಅವರು, ನಿನ್ನೆ ಮೊನ್ನೆಯಷ್ಟೇ ಮೊದಲ ಹಾಡು ಬರೆದಂತಿದೆ. ಆದರೇ ಇದೀಗ ಬೆಳ್ಳಿಹಬ್ಬದ ಹೊಸ್ತಿಲಲ್ಲಿ ನಿಂತಿದ್ದೇನೆ. 1000ಕ್ಕೂ ಹೆಚ್ಚು ಸಿನಿಮಾಗಳು, 2250ಕ್ಕೂ ಹೆಚ್ಚು ಹಾಡುಗಳು, ಸುಮಾರು 25 ವರ್ಷಗಳ ಸುಂದರ ಪಯಣ ನನ್ನದು ಎಂದಿದ್ದಾರೆ.
ನನ್ನ ಈ ಸಂಭ್ರಮದ ಕುರುಹಾಗಿ 28 ರಸಮಯ ಘಟನೆಗಳ ಗುಚ್ಚವನ್ನು ಪುಸ್ತಕ ರೂಪದಲ್ಲಿ ನಿಮ್ಮ ಕೈಗಿಡಲಿದ್ದೇನೆ. ಅದಕ್ಕಿಟ್ಟ ಹೆಸರು ಕವಿರಾಜ್ ಮಾರ್ಗದಲ್ಲಿ ಎಂದು ಹೇಳಿದ್ದಾರೆ.
ಏಪ್ರಿಲ್.5ರಂದು ಸಂಜೆ 5 ಗಂಟೆಯಿಂದ ಹರಿವು ಪ್ರಕಾಶನದ ಸಹಯೋಗದಲ್ಲಿ ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನದ ಸಭಾಂಗಣದಲ್ಲಿ ಈ ಪುಸ್ತಕ ಬಿಡುಗಡೆಯ ಸಮಾರಂಭವನ್ನು ಹಮ್ಮಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಅಂದು ನನ್ನ ಸಿನಿಮಾ ಸ್ನೇಹಿತರು, ಬಂಧು-ಮಿತ್ರರರು, ಆಪ್ತರು ನನ್ನೊಂದಿಗೆ ಇರಲಿದ್ದಾರೆ. ನನ್ನ ಓರಗೆಯ ಸಿನಿಮಾ ಹಾಡುಗಾರರು ನನ್ನದೇ ಒಂದಷ್ಟು ಹಾಡುಗಳಿಗೆ ದನಿಯಾಗಲಿದ್ದಾರೆ. ಪುಸ್ತಕ ಬಿಡುಗಡೆಯ ನೆಪದಲ್ಲಿ ಹಾಡು, ಕುಣಿತ, ಹರಟೆ ಜೊತೆಯಾಗಿ ಊಟ ಎಲ್ಲವೂ ಮೇಳೈಸಲಿದೆ ಎಂಬುದಾಗಿ ಹೇಳಿದ್ದಾರೆ.
ಇನ್ನೂ ನಿಮ್ಮೆಲ್ಲರಿಗೂ ಈ ಮೂಲಕ ನನ್ನ ಆತ್ಮೀಯ ಆಹ್ವಾನ. ಬನ್ನಿ ಅಂದು ಒಂದು ಸಂಭ್ರಮದ ಹೊತ್ತಲ್ಲಿ ನನ್ನ ಜೊತೆಯಿರಿ ಎಂಬುದಾಗಿ ಕವಿರಾಜ್ ಕೋರಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
2026ರ ಮಾರ್ಚ್ ನಿಂದ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್