ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ಅವರು ಸೋನಲ್ ಮಂಥೆರೋ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇದೇ ಆಗಸ್ಟ್ 10, 11ರಂದು ತರುಣ್ ಮತ್ತು ಸೋನಲ್ ಮದುವೆ ಜರುಗಲಿದೆ. ನಟಿ ಸೋನಾಲ್ ಮೊಂತೆರೊ ಮತ್ತು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ರಾಬರ್ಟ್ ಚಿತ್ರದ ಸೆಟ್ ಗಳಲ್ಲಿ ಪ್ರಾರಂಭವಾದ ಇವರಿಬ್ಬರ ನಡುವಿನ ಸ್ನೇಹವು ಪ್ರೀತಿಯಾಗಿ ಅರಳಿದೆ. ಮದುವೆ ಡೇಟ್ ಚೇಂಜ್ ಮಾಡಬೇಡ, ಅಷ್ಟರೊಳಗೆ ಬರ್ತೀನಿ ಅಂತ ಜೈಲಿನಲ್ಲಿರುವ ನಟ ದರ್ಶನ್ ಭೇಟಿಯಾದ ಬಳಿಕ ತರುಣ್ ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇನ್ನೂ ಇದೇ ವೇಳೆ ಅವರು ಮಾತನಾಡಿ ನಾನು ಬಂದೇ ಬರ್ತೀನಿ’ ಎನ್ನುವ ನಂಬಿಕೆ ಅವರಲ್ಲಿ ಇದೆ. ದರ್ಶನ್ ಏನೂ ತಪ್ಪು ಮಾಡಿಲ್ಲ ಎಂಬ ನಂಬಿಕೆಯಲ್ಲೇ ನಾವು ಕೂಡ ಇದ್ದೇವೆ. ಹಾಗೆಯೇ ಆಗಲಿ ಅಂತ ಪ್ರಾರ್ಥಿಸುತ್ತೇವೆ ಅಂತ ತಿಳಿಸಿದರು.