ಬೆಂಗಳೂರು: ನಗರದ ಕೆಂಗೇರಿ ಬಳಿಯಲ್ಲಿ ಇರುವಂತ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನೂತನ ಉತ್ತರಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರು ಸನ್ಯಾಸತ್ವ ಸ್ವೀಕರಿಸುವ ಮೂಲಕ, ಪಟ್ಟಾಭಿಷೇಕಕ್ಕೇರಿದ್ದಾರೆ.
ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠಕ್ಕೆ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿ ನಂತ್ರ, ಕೆಎಎಸ್ ಅಧಿಕಾರಿ ಡಾ.ಹೆಚ್.ಎಲ್ ನಾಗರಾಜು ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿತ್ತು. ಇವರು ಪಟ್ಟಾಧಿಕಾರದ ವೇಳೆಯಲ್ಲಿ ಸನ್ಯಾಸತ್ವ ಸ್ವೀಕರಿಸಬೇಕಿತ್ತು. ಅದರಂತೆ ಇಂದು ನೂರಾರು ಶ್ರೀಗಳ ಸಮ್ಮುಖದಲ್ಲಿ ಸನ್ಯಾಸತ್ವ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದಂತ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಶ್ರೀಗಳು, ಎರಡು ಮಠಗಳ ನಡುವೆ ಒಂದು ಸಮಸ್ಯೆ ಇದೆ ಎಂದು ನಿಡುಮಾಮಿಡಿ ಶ್ರೀಗಳು ಹೇಳಿದಾಗ ಎಲ್ಲರಿಗೂ ಅನ್ನಿಸಿತ್ತು. ಆದರೇ ಮಠಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಒಂದೇ ಗುರು, ಒಂದೇ ಸಮುದಾಯ, ಒಂದೇ ತಾಯಿ ಎಂದು ಪೂಜ್ಯರು ಹೇಳಿದ್ದಾರೆ ಎಂದರು.
ನಾಗರಾಜ್ ಅವರು ನಿಶ್ಚಲಾನಂದನಾಥರಾಗಿ ಬದಲಾಗುವ ಸಂದರ್ಭದಲ್ಲಿ ಇಷ್ಟು ಜನ ಸೇರಿರುವುದು ಖುಷಿಯ ವಿಚಾರವಾಗಿದೆ. ನಾವೆಲ್ಲರೂ ಒಂದೇ ಗುರು ಪರಂಪರೆಯವರು. ಇಂದು ನಾಗರಾಜ್ ಅವರು ನಿಶ್ಚಲನಂಧನಾಥ ಸ್ವಾಮೀಜಿಯಾಗಿ ಸಮಾಜದ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದಾರೆ ಎಂದು ಕೊಂಡಾಡಿದರು.