ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಮರಾಠಿ ಯುವಕರ ಗೂಂಡಾಗಿರಿ ಮುಂದುವರೆದಿದೆ. ಕನ್ನಡ ಮಾತಾಡಿದ್ದಕ್ಕೆ ಕರವೇ ತಾಲ್ಲೂಕು ಉಪಾಧ್ಯಕ್ಷನ ಮೇಲೆ ರಕ್ತ ಬರುವಂತೆ ಹಲ್ಲೆಯನ್ನು ಬೆಳಗಾವಿಯಲ್ಲಿ ಮರಾಠಿ ಯುವಕರು ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಮೇಲೆ ದಾಳಿಯನ್ನು ನಡೆಸಲಾಗಿದೆ.
ಖಾನಾಪುರದ ಜಾಂಬೋಡಿ ಕ್ರಾಸ್ ಬಳಿಯಲ್ಲಿ ಈ ಘಟನೆ ನಡೆದಿದೆ. ಕನ್ನಡ ಮಾತನಾಡಿದ್ದಕ್ಕಾಗಿ ಕರವೇ ನಾರಾಯಣಗೌಡ ಬಣದ ಖಾನಾಪುರ ತಾಲ್ಲೂಕು ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಮೇಲೆ ರಕ್ತ ಬರುವಂತೆ ಹಲ್ಲೆಯನ್ನು ಮರಾಠಿ ಯುವಕರು ನಡೆಸಿದ್ದಾರೆ.
ಕರವೇ ಉಪಾಧ್ಯಕ್ಷನ ಮೇಲೆ ಹಲ್ಲೆ ನಡೆಸಿದಂತ ಮರಾಠಿ ಪುಂಡರು, ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದಂತ ಜಯವಂತ ನಿಡಗಲ್ಕರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮತ್ತೊಂದೆಡೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ನಾಳೆ ಬೆಳಗಾವಿಗೆ ಮರಾಠಿ ಯುವಕರ ಪುಂಡಾಟ ಘಟನೆಯ ಸಂಬಂಧ ಭೇಟಿ ನೀಡಲಿದ್ದಾರೆ. ಇದೇ ಹೊತ್ತಿನಲ್ಲಿ ಅವರ ತಾಲ್ಲೂಕು ಕರವೇ ಉಪಾಧ್ಯಕ್ಷನ ಮೇಲೆ ಹಲ್ಲೆ ಘಟನೆ ನಡೆದಿದೆ.
BREAKING : ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆ ಮಾ.31ರವರೆಗೆ ವಿಸ್ತರಣೆ
ಈ 2 ರೂಪಾಯಿ ‘ನಾಣ್ಯ’ ಇರುವವರಿಗೆ ಸೂಪರ್ ಆಫರ್! ಹಣದ ಮಳೆಯೇ ಸುರಿಸುತ್ತೆ, 5 ಲಕ್ಷ ರೂ. ನಿಮ್ಮ ಸ್ವಂತ