ಸಾಗರ: ಪ್ರಾಣಿ ಜನನ ನಿಯಂತ್ರಣ ನಿಯಮ 2001ನ್ನು ಕಡ್ಡಾಯವಾಗಿ ಪಾಲಿಸುವಂತೆ ಒತ್ತಾಯಿಸಿ ಬುಧವಾರ ಕರುಣಾ ಎನಿಮಲ್ ರೆಸ್ಕ್ಯೂ ಕ್ಲಬ್ ಸದಸ್ಯರು ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ಭಾರತ ಸರ್ಕಾರ ಪ್ರಾಣಿ ಜನನ ನಿಯಂತ್ರಣ ನಿಯಮಗಳು 2001 (ನಾಯಿಗಳು) ಜಾರಿಗೊಳಿಸಿರುತ್ತದೆ. ಸದರಿ ನಿಯಮ ಪ್ರಕಾರ ಪ್ರಾದೇಶಿಕ ಹೊಣೆಗಾರಿಕೆಯನ್ನು ಸಾಗರ ನಗರಸಭೆ ಹೊಂದಿರುತ್ತದೆ. ಸದರಿ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ನಾಯಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಮೂಲಕ ಸಾರ್ವನಿಕರ ನೆಮ್ಮದಿಗೆ ಮತ್ತು ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ನಗರಸಭೆಯದ್ದೇ ಆಗಿರುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಆದರೆ ಸಾಗರ ನಗರಸಭೆ ಭಾರತ ಸರ್ಕಾರ ಅನುಷ್ಟಾನಗೊಳಿಸಿರುವ ಪ್ರಾಣಿ ಜನನ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ವಿಫಲವಾಗಿರುತ್ತದೆ. ಈ ಹಿಂದೆ ಒಂದೆರಡು ಬಾರಿ ಕಾನೂನು ಜಾರಿಗೆ ಪ್ರಯತ್ನ ನಡೆಸಿದ್ದಾಗ್ಯೂ ಅದು ಯಶಸ್ವಿಯಾಗಿಲ್ಲ. ಆದ್ದರಿಂದ ತಕ್ಷಣ ನಿಯಮವನ್ನು ಜಾರಿಗೆ ತರಬೇಕು. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಬೇಕು. ಸಮಿತಿಯ ಸಲಹೆ ಸೂಚನೆ ಮೇರೆಗೆ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕೆ.ಎಚ್.ಸುದರ್ಶನ, ಗಿರೀಶ್ ಗೌಡ, ರಾಧಾಕೃಷ್ಣ ಹೆಬ್ಬಾರ್, ರಾಜೇಶ್, ಸ್ವರೂಪ್ ಇನ್ನಿತರರು ಹಾಜರಿದ್ದರು.
BREAKING : ಇನ್ಮುಂದೆ ಸರ್ಕಾರದಿಂದಲೇ ‘108 ಆಂಬುಲೆನ್ಸ್’ ಸೇವೆ : ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ
GOOD NEWS: ರಾಜ್ಯದಲ್ಲಿ ‘NHM ಯೋಜನೆ’ಯಡಿ ನೇಮಕಗೊಳ್ಳುವ ವೈದ್ಯರು, ಸ್ಟಾಫ್ ನರ್ಸ್ ಗಳಿಗೆ ಭರ್ಜರಿ ಸಿಹಿಸುದ್ದಿ