ಬೆಂಗಳೂರು: ಕರ್ನಾಟಕ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ( KSRTC, BMTC, KKRTC, NWKRTC ) ದೆಹಲಿಯ ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ( ASRTU) 2022 -23ನೇ ಸಾಲಿನ ಒಟ್ಟು 5 ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿಗಳು ( National Transport Excellence Award) ಲಭಿಸಿರುತ್ತವೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ( ASRTU)ದ ವ್ಯಾಪ್ತಿಯಲ್ಲಿ ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಸದರಿ ಒಕ್ಕೂಟವು 13ನೇ ಆಗಸ್ಟ್ 1965 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ,ಭಾರತ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ನಿರ್ದೇಶನದ ಅನುಸಾರ ಕಾರ್ಯನಿರ್ವಹಿಸುತ್ತದೆ
ಈ ಸಂಸ್ಥೆಯು 58 ವರ್ಷಗಳ ಅನುಭವವನ್ನು ಹೊಂದಿದ್ದು, ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಕೆ ಎಸ್ ಆರ್ ಟಿ ಸಿ ಗೆ ಬ್ರ್ಯಾಂಡಿಂಗ್ ಹಾಗೂ ವರ್ಚಸ್ಸು ಅಭಿವೃದ್ಧಿ ಉಪಕ್ರಮ ಮತ್ತು ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಉಪಕ್ರಮಕ್ಕಾಗಿ ಎರಡು ಪ್ರಶಸ್ತಿಗಳು ಲಭಿಸಿರುತ್ತದೆ.
ಬಿ..ಎಂ.ಟಿ.ಸಿ ಗೆ ವಿದ್ಯುತ್ ಚಾಲಿತ ವಾಹನಗಳಾದ *ಅಸ್ತ್ರ ಕಾರ್ಯಾಚರಣೆಗೊಳಿಸುತ್ತಿರುವ ಉಪಕ್ರಮಕ್ಕೆ ಪ್ರಶಸ್ತಿ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ರಸ್ತೆ ಸಾರಿಗೆ ಸುರಕ್ಷತೆಯ ಉಪಕ್ರಮ ಅನುಷ್ಠಾನಕ್ಕಾಗಿ ಪ್ರಶಸ್ತಿ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಸ್ತೆ ಸಾರಿಗೆ ಸುರಕ್ಷತೆ ಪದ್ಧತಿಯ ಅನುಷ್ಠಾನಕ್ಕಾಗಿ ಪ್ರಶಸ್ತಿ.
ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 15ನೇ ಮಾರ್ಚ್ 2024 ರಂದು ದೆಹಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದಲ್ಲಿ ನಡೆಯಲಿದ್ದು ಅಂದು ರಸ್ತೆ ಸಾರಿಗೆ ಸಂಸ್ಥೆಗಳಿಗೆ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುವುದು.
‘FSL’ ವರದಿ ಆಧರಿಸಿ ಪಾಕ್ ಪರ ಘೋಷಣೆ ಕೂಗಿದ್ದವರ ವಿರುದ್ಧ ಕಠಿಣ ಕ್ರಮ : ಸಿಎಂ ಸಿದ್ದರಾಮಯ್ಯ ಹೇಳಿಕೆ
ರಾಜ್ಯ ಸರ್ಕಾರದಿಂದ ‘ಗೃಹ ಜ್ಯೋತಿ ಯೋಜನೆ’ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ | Gruha Jyothi Scheme